ಈಗಾಗಲೇ, ‘ಕೆಜಿಎಫ್: ಚಾಪ್ಟರ್ 2’ ಚಿತ್ರತಂಡ ಕೇವಲ ಒಂದು ಪೋಸ್ಟರ್ ಮತ್ತು ಒಂದು ಟೀಸರ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದು, ಇದೀಗ, ಮೊದಲ ಸಾಂಗ್ನ ಲಿರಿಕಲ್ ವಿಡಿಯೋ ರಿಲೀಸ್ ಮಾಡಿದೆ. ಹೌದು, ‘ತೂಫಾನ್’ ಲಿರಿಕಲ್ ವಿಡಿಯೋ ಇಂದು ಬೆಳಿಗ್ಗೆ 11:07 ಕ್ಕೆ ರಿಲೀಸ್ ಆಗಿದೆ. ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯ ಈ ಹಾಡನ್ನು ರಿಲೀಸ್ ಮಾಡಿದ ಕೂಡಲೇ ಜನರ ನಿರೀಕ್ಷೆ ಮುಗಿಲುಮುಟ್ಟಿದೆ. ‘ತೂಫಾನ್’ ಸಾಂಗ್ ನೋಡಿದ ಅಭಿಮಾನಿಗಳು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ, ಈ ಹಾಡಿಗೆ ರವಿ ಬಸ್ರೂರು ಅವರು ಸಂಗೀತ, ಸಾಹಿತ್ಯ ನೀಡಿದ್ದು, ಹಾಡು ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಮೂಡಿಬಂದಿದೆ. ‘ತೂಫಾನ್', ಲಿರಿಕಲ್ ಸಾಂಗ್ ಬಿಡುಗಡೆ ಆದ ಬಳಿಕ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಬಗ್ಗೆ ಇನ್ನಷ್ಟು ನಿರೀಕ್ಷೆಗಳು ಹೆಚ್ಚಾಗುತ್ತಿವೆ.