ಪುಣ್ಯತಿಥಿಯಂದು ತಂದೆಯನ್ನು ಸ್ಮರಿಸಿದ ಬಿಗ್ ಬಿ ಅಮಿತಾಬ್ ಬಚ್ಚನ್; ಫೋಟೋ ವೈರಲ್...

Published on
ಬಾಲಿವುಡ್ ಬಿಗ್ ಬಿ ನಟ ಅಮಿತಾಭ್ ಬಚ್ಚನ್ ಅವರ ತಂದೆ ಹರಿವಂಶ ರೈ ಬಚ್ಚನ್ ಅವರು 2003 ರಲ್ಲಿ ನಿಧನರಾದರು. ಇಂದು ಅವರ 19 ನೇ ಪುಣ್ಯತಿಥಿಯಾಗಿದ್ದು, ತಂದೆಯನ್ನು ಅಮಿತಾಭ್ ಬಚ್ಚನ್ ನೆನಪಿಸಿಕೊಂಡಿದ್ದಾರೆ. "ಬಾಬೂಜಿಯ ಸ್ಮರಣೆ.. ಅವರ 'ಪುಣ್ಯ ತಿಥಿ'.. ಪುಣ್ಯ ಕ್ಷಣದಲ್ಲಿ.. ನಾವು ತಂದೆ ಅವರು ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಯಲ್ಲಿ, 10% ಸಾಧನೆಯನ್ನೂ ಮಾಡಿಲ್ಲ.. ಹಾಗೆ ಮಾಡುವ ಪ್ರಯತ್ನವೂ ನಡೆದಿಲ್ಲ", ಎಂದು ಬಿಗ್ ಬಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಅವರ ತಂದೆಯ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ.
ನಂತರ, ಅವರ ತಂದೆ ಹರಿವಂಶ್ ರಾಯ್ ಬಚ್ಚನ್ ಅವರಿಗೆ ಅಪಾರ ಗೌರವವನ್ನು ನೀಡಿದ ಜನರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ ನಟ ಅಮಿತಾಭ್ ಬಚ್ಚನ್. ನಟ ಅಮಿತಾಭ್ ಹಂಚಿಕೊಂಡಿರುವ ಅವರ ತಂದೆಯ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಬಿಗ್ ಬಿ ಅವರ ತಂದೆ ಹರಿವಂಶ ರೈ ಒಬ್ಬ ಪ್ರಖ್ಯಾತ ಕವಿ ಮತ್ತು ಬರಹಗಾರರಾಗಿದ್ದರು. ಅವರ ಪದ ಬಳಕೆ, ಕೇವಲ ಅವರ ಬರಹಗಳ ಮೂಲಕ ಮಾತ್ರವಲ್ಲದೆ, ಹಲವಾರು ಬಾಲಿವುಡ್ ಚಲನಚಿತ್ರಗಳಲ್ಲಿಯೂ ಅವುಗಳ ಬಳಕೆಯಾಗುತ್ತಿತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net