ಸ್ಯಾಂಡಲ್ವುಡ್ ಮತ್ತು ಕಾಲಿವುಡ್ ನಟಿ ರಾಧಿಕಾ ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸಕ್ರಿಯವಾಗಿರುತ್ತಾರೆ. ಅವರು, ತಮ್ಮ ಮಗಳ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಆಗಾಗ ಸಿಕ್ಕಾಪಟ್ಟೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಲೆ ಇರುತ್ತಾರೆ. ಇತ್ತೀಚೆಗೆ, ನಟಿ ಒಂದು ಹಿಂದಿ ಹಾಡು ‘ಮೇರಾ ಯಾರಾ’ದ ಕವರ್ ಸಾಂಗ್ಗೆ ಕುಣಿದು ಕುಪ್ಪಳಿಸಿದ್ದಾರೆ. ಹೀಗಾಗಿ, ನಟಿ ಹಂಚಿಕೊಂಡಿರುವ ಈ ಇನ್ಸ್ಟಾಗ್ರಾಂ ರೀಲ್ಸ್ ವಿಡಿಯೋ ಸದ್ಯ ವೈರಲ್ ಆಗಿದ್ದು, ರಾಧಿಕಾ ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ. ಈ ವಿಡಿಯೋಗೆ ಬರೋಬ್ಬರಿ 10,000ಕ್ಕೂ ಹೆಚ್ಚು ಜನ ಲೈಕ್ ಕೊಟ್ಟಿದ್ದಾರೆ.