ಮುಂಬೈ: ಬಾಲಿವುಡ್ ನಟ ಆಮಿರ್ ಖಾನ್ ಕೇವಲ ತಮ್ಮ ಸಿನಿಮಾಗಳಿಂದ ಅಲ್ಲದೇ ಅವರ ವೈಯಕ್ತಿಕ ಜೀವನದ ಹಲವು ಕಾರಣಗಳಿಂದಲೂ ಬಹಳಷ್ಟು ಬಾರಿ ಸುದ್ದಿಯಲ್ಲಿರುತ್ತಾರೆ. ಈಗಾಗಲೇ, ನಟ ಆಮಿರ್ಗೆ ಎರಡು ಬಾರಿ ಮದುವೆಯಾಗಿ ವಿಚ್ಛೇದನವೂ ಪಡೆದಿದ್ದಾರೆ. ಹೌದು, ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಎರಡನೇ ಪತ್ನಿ ಕಿರಣ್ ರಾವ್ ಅವರಿಂದ ಆಮಿರ್ ವಿಚ್ಛೇದನ ಪಡೆದಿದ್ದು, ಅದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಹೌದು, 15 ವರ್ಷಗಳು ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿದ್ದ ಈ ದಂಪತಿ ನಡುವೆ ಅದೆಂಥ ಮನಸ್ತಾಪ ಮೂಡಿತು ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡಿತು. ಆಮಿರ್ ಬೇರೆ ಹುಡುಗಿ ಜೊತೆ ಡೇಟಿಂಗ್ ಮಾಡುತ್ತಿರುವುದೇ ಈ ಡಿವೋರ್ಸ್ಗೆ ಕಾರಣ ಎಂಬ ಸುದ್ದಿಗಳು ಹರಿದಾಡಿದ್ದರವು. ಆದರೆ, ಸದ್ಯ ಅಮಿರ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮನಸ್ಸು ಬಿಚ್ಚಿ ಸಂದರ್ಶನವೊಂದರಲ್ಲಿ ಮಾತಾಡಿದ್ದಾರೆ.