ಹಗಲು-ರಾತ್ರಿ ನಡೆಯುತ್ತಿರುವ ಈ ಪಿಂಕ್ ಟೆಸ್ಟ್ ಪಂದ್ಯಾವಳಿಯನ್ನು ವೀಕ್ಷಿಸಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇದಕ್ಕೆ ಕಾರಣ, ಎರಡು ವರ್ಷಗಳ ನಂತರ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯುತ್ತಿರುವುದು. ಇನ್ನು, ಕ್ರಿಕೆಟ್ ಪಂದ್ಯದ ವೇಳೆ ಹಿಟ್ ಗೀತೆಗಳನ್ನು ಸಾಮಾನ್ಯವಾಗಿ ಹಾಕಲಾಗುತ್ತದೆ. ಇದಕ್ಕೆ ಜನರು ದನಿಗೂಡಿಸುತ್ತಾರೆ. ಹೀಗೆ, 'ಬೊಂಬೆ ಹೇಳುತೈತೆ'' ಹಾಡು ಮೊಳಗಿದ್ದು, ಪುನೀತ್ ಮೇಲಿನ ಅಭಿಮಾನವನ್ನು ಕ್ರೀಡಾಂಗಣದಲ್ಲಿ ಎಲ್ಲರೂ ಕಣ್ತುಂಬಿಕೊಳ್ಳ ಬಹುದಿತ್ತು. ಕೆಲವರು ಅಪ್ಪು ಫೋಟೋ ಹಿಡಿದು ಸಂಭ್ರಮಿಸಿದರೆ, ಮತ್ತಷ್ಟು ಜನರು ಅಪ್ಪು ಅವರನ್ನು ಕುರಿತ ಬರಹಗಳನ್ನು ಪ್ರದರ್ಶಿಸಿದರು. ಇಷ್ಟು ಸಾಕಲ್ಲವೇ, ''ಅಪ್ಪು ಲಿವ್ಸ್ ಆನ್'', ಎಂದು ಹೇಳಲಿ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಲಕ್ಷ ಲಕ್ಷ ವೀಕ್ಷಣೆಗಳನ್ನು, ಸಾವಿರ ಸಾವಿರ ಕಾಮೆಂಟ್ಗಳನ್ನು ಪಡೆಯುತ್ತಿದೆ ಎಂದರೇ ತಪ್ಪಾಗುವುದಿಲ್ಲ. ಈ ವಿಡಿಯೋಗೆ #AppuLiveOn ಎಂಬ ಹ್ಯಾಶ್ಟ್ಯಾಗ್ ಅನ್ನು ಕ್ಯಾಪ್ಷನ್ ಆಗಿ ಹಲವರು ಕೊಟ್ಟಿದ್ದಾರೆ.