More

    100 ಎಕರೆ, 52,000 ಅಡಿಯ ಎಲ್​ಇಡಿ ಸ್ಕ್ರೀನ್! RRR ಪ್ರೀ-ರಿಲೀಸ್ ಇವೆಂಟ್​ನ ವಿಶೇಷತೆ, ಅತಿಥಿಗಳು ಯಾರು?

    ಬೆಂಗಳೂರು: 2022 ರ ಬಹುನಿರೀಕ್ಷಿತ ಸಿನಿಮಾ ‘ಆರ್​ಆರ್​ಆರ್’ ಮಾ.25 ರಂದು ವಿಶ್ವಾದ್ಯಂತ ತೆರೆಗಪ್ಪಳಿಸಲಿದೆ. ಇನ್ನು, ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ‘ಆರ್​ಆರ್​ಆರ್’ ಚಿತ್ರವನ್ನು ವಿತರಣೆ ಮಾಡಲಿದ್ದಾರೆ. ಹೀಗಾಗಿ, ಈ ಬಹುನಿರೀಕ್ಷಿತ ಚಿತ್ರಕ್ಕೆ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಪ್ರೀರಿಲೀಸ್ ಇವೆಂಟ್ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಪ್ರೀರಿಲೀಸ್ ಇವೆಂಟ್ ಬಗ್ಗೆ ಕೆವಿಎನ್ ಸಂಸ್ಥೆಯ ವೆಂಕಟ್ ಕೊಣಂಕಿ ಅವರು ಮಾಹಿತಿ ನೀಡಿದ್ದಾರೆ. ವೆಂಕಟ್ ಅವರ ಮಾಹಿತಿಯ ಪ್ರಕಾರ ನಟ ರಾಮ್ ಚರಣ್ ತೇಜ್, ನಟಿ ಆಲಿಯಾ ಭಟ್, ನಟ ಜ್ಯೂ.ಎನ್​ಟಿಆರ್ ಸೇರಿದಂತೆ ಈ ಚಿತ್ರದಲ್ಲಿ ನಟಿಸಿದ ಹಲವು ಸ್ಟಾರ್ ಕಲಾವಿದರು ಕರುನಾಡಲ್ಲಿ ನಡೆಯಲಿರುವ ಪ್ರೀರಿಲೀಸ್ ಇವೆಂಟ್​ನಲ್ಲಿ ಭಾಗಿಯಾಗಲಿದ್ದಾರೆ.
    ಅಂದಹಾಗೆ, ಮಾ.19 ರಂದು ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ಸಂಜೆ 6 ಗಂಟೆಯಿಂದ ಈ ಅದ್ದೂರಿ ಪ್ರೀರಿಲೀಸ್ ಇವೆಂಟ್ ನಡೆಯಲಿದ್ದು ಮುಖ್ಯ ಅತಿಥಿಯಾಗಿ ಸಿಎಂ ಬಸವರಾಜ ಬೊಮ್ಮಾಯಿ, ‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಕನ್ನಡದಲ್ಲೂ ಡಬ್ ಆಗಿ ‘ಆರ್​ಆರ್​ಆರ್’ ರಿಲೀಸ್ ಆಗಲಿದೆ. ”ಇದು ಪ್ಯಾನ್​ ಇಂಡಿಯಾ ಸಿನಿಮಾ ಆಗಿದ್ದರೂ ಕೂಡ ಕರ್ನಾಟಕದಲ್ಲಿ ಪ್ರೀರಿಲೀಸ್ ಇವೆಂಟ್ ಮಾಡುತ್ತಿರುವುದು ನಮ್ಮ ಹೆಮ್ಮೆ. ಇದು ಕರುನಾಡ ಅತಿ ದೊಡ್ಡ ಸಿನಿಮಾ ಪ್ರೀರಿಲೀಸ್ ಇವೆಂಟ್ ಆಗಿರಲಿದೆ. ಬೇರೆ ರಾಜ್ಯಗಳಿಂದಲೂ ಇದಕ್ಕೆ ಅಭಿಮಾನಿಗಳು ಬರಲಿದ್ದಾರೆ”, ಎಂದು ಕೊಣಂಕಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
    ‘RRR’ ಸಿನಿಮಾದ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್​ಕುಮಾರ್ ಅವರಿಗೆ ಮೊದಲು ನಮನ ಸಲ್ಲಿಸಲಾಗುತ್ತದೆ. 52 ಸಾವಿರ ಚದರ ಅಡಿಯ ಬೃಹತ್ ಎಲ್​ಇಡಿ ಸ್ಕ್ರೀನ್ ಮತ್ತು 42 ಬೃಹತ್ ಲೇಸರ್ ಲೈಟ್​ಗಳ ದೊಡ್ಡ ವೇದಿಕೆ ಈ ಕಾರ್ಯಕ್ರಮಕ್ಕೆಂದು ಸಿದ್ಧವಾಗುತ್ತಿದೆ ಎನ್ನಲಾಗಿದೆ. ನಟಿ ಅನುಶ್ರೀ, ನಟ ಅಕುಲ್ ಬಾಲಾಜಿ, ತೆಲುಗಿನ ಖ್ಯಾತ ಆ್ಯಂಕರ್ ಸುಮಾ ಈ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಲಿದ್ದಾರೆ. ಇನ್ನು, 2 ಲಕ್ಷ ಜನರು ಈ ಇವೆಂಟ್​ನಲ್ಲಿ ಭಾಗವಹಿಸಲಿದ್ದಾರಂತೆ. ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಅವರು ಲೈವ್ ಗಾನಬಜಾನ ಮಾಡಲಿದ್ದಾರೆ ಎಂಬ ಮಾಹಿತಿ ಇದೆ. ಪ್ರೀರಿಲೀಸ್ ಇವೆಂಟ್​ಗೆ ಅಭಿಮಾನಿಗಳಿಗೂ ಮುಕ್ತ ಆಹ್ವಾನ ನೀಡಲಾಗಿದ್ದು, ಕೆವಿಎನ್ ಸಂಸ್ಥೆಯ WWW.KVNProductions.co.in ವೆಬ್ ಸೈಟ್ ಮೂಲಕ ಕಾರ್ಯಕ್ರಮಕ್ಕೆ ಎಂಟ್ರಿ ಪಾಸ್​ಗಳನ್ನು ಉಚಿತವಾಗಿ ಪಡೆಯಬಹುದಾಗಿದೆ

    100 ಎಕರೆ, 52,000 ಅಡಿಯ ಎಲ್​ಇಡಿ ಸ್ಕ್ರೀನ್! RRR ಪ್ರೀ-ರಿಲೀಸ್ ಇವೆಂಟ್​ನ ವಿಶೇಷತೆ, ಅತಿಥಿಗಳು ಯಾರು? 100 ಎಕರೆ, 52,000 ಅಡಿಯ ಎಲ್​ಇಡಿ ಸ್ಕ್ರೀನ್! RRR ಪ್ರೀ-ರಿಲೀಸ್ ಇವೆಂಟ್​ನ ವಿಶೇಷತೆ, ಅತಿಥಿಗಳು ಯಾರು? 100 ಎಕರೆ, 52,000 ಅಡಿಯ ಎಲ್​ಇಡಿ ಸ್ಕ್ರೀನ್! RRR ಪ್ರೀ-ರಿಲೀಸ್ ಇವೆಂಟ್​ನ ವಿಶೇಷತೆ, ಅತಿಥಿಗಳು ಯಾರು? 100 ಎಕರೆ, 52,000 ಅಡಿಯ ಎಲ್​ಇಡಿ ಸ್ಕ್ರೀನ್! RRR ಪ್ರೀ-ರಿಲೀಸ್ ಇವೆಂಟ್​ನ ವಿಶೇಷತೆ, ಅತಿಥಿಗಳು ಯಾರು?

    #AppuLivesOn: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊಳಗಿದ ‘ನೀನೇ ರಾಜಕುಮಾರ’! ವಿಡಿಯೋ ವೈರಲ್…

    ಒಂದೇ ಹಾಡು.. ನಾಲ್ವರು ಗಾಯಕರು… ‘ಮಹಾನುಭಾವ’ನಾಗಿ ಮಿಂಚಲಿರುವ ಡಾ. ಪುನೀತ್ ರಾಜ್​ಕುಮಾರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts