ಅಂದಹಾಗೆ, ಅಲ್ಲು ಅರ್ಜುನ್ ಇತ್ತೀಚೆಗೆ ಬಿಡುಗಡೆಯಾದ ಅವರ ಚಿತ್ರ 'ಪುಷ್ಪ: ದಿ ರೈಸ್'ನಲ್ಲಿ ಅವರ ಅಭಿನಯಕ್ಕಾಗಿ ಇಡೀ ದೇಶದ ಗಮನ ಸೆಳೆದಿದ್ದಾರೆ. 15 ಮಿಲಿಯನ್ ಅನುಯಾಯಿಗಳನ್ನು ಪಡೆದುಕೊಂಡ ತಕ್ಷಣ ಅರ್ಜುನ್ ತಮ್ಮ ಅನುಯಾಯಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತಾ ಒಂದು ವಿಶೇಷ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅರ್ಜುನ್ ಹಂಚಿಕೊಂಡ ಈ ಫೋಟೋ ಮೇಲೆ ಬರೋಬ್ಬರಿ 1.7 ಮಿಲಿಯನ್ ಲೈಕ್ಸ್ಗಳೇ ಇದ್ದಾವೆ. ಜತೆಗೆ, 13,000ಕ್ಕೂ ಹೆಚ್ಚು ಕಾಮೆಂಟ್ಗಳ ಸುರಿಮಳೆ ಅಭಿಮಾನಿಗಳಿಂದ ಸುರಿದಿದೆ. ಮತ್ತೊಂದೆಡೆ, ಮೊದಲ ಸ್ಥಾನ ಅರ್ಜುನ್ ಅವರದ್ದು ಆದರೇ, ಎರಡನೇ ಸ್ಥಾನ ಯಾರದ್ದು ಎಂಬ ಕುತೂಹಲ ಸಹಜವಾಗಿಯೇ ಇರುತ್ತೆ.