ಹೈದರಾಬಾದ್: ಇತ್ತೀಚೆಗೆ, ಸುಧೀರ್ ವರ್ಮಾ ನಿರ್ದೇಶನದ 'ರಾವಣಾಸುರ' ಚಿತ್ರದ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಿತು. ಈ ಚಿತ್ರದಲ್ಲಿ ರವಿತೇಜಾ ನಾಯಕ ನಟನ ಪಾತ್ರದಲ್ಲಿ ನಟಿಸಲಿದ್ದಾರೆ. 'ರಾವಣಾಸುರ' ಚಿತ್ರದ ಈ ಕಾರ್ಯಕ್ರಮಕ್ಕೆ ಟಾಲಿವುಡ್‌ನ ಹಲವಾರು ಗಣ್ಯರು ಆಗಮಿಸಿದ್ದರು. ಆದರೆ, ಸದ್ಯ ಕಾರ್ಯಕ್ರಮದಲ್ಲಿ ನಟಿಯರಾದ ಫರಿಯಾ ಅಬ್ದುಲ್ಲಾ, ಅನು ಇಮ್ಯಾನುಯೆಲ್, ಮೇಘಾ ಆಕಾಶ್, ದಕ್ಷಾ ನಗರ್ಕರ್ ಮತ್ತು ಪೂಜಿತ ಪೊನ್ನಡ ಭಾಗವಹಿಸಿದ್ದು ಚಿತ್ರಪ್ರೇಮಿಗಳ ಹಾಗೂ ನಟ ರವಿತೇಜಾ ಅಭಿಮಾನಿಗಳ ಗಮನ ಸೆಳೆದಿದೆ.