ತೆಲುಗಿನ ಸ್ಟೈಲಿಶ್ ಸ್ಟಾರ್ ಮತ್ತು ತಮಿಳಿನ ಮಾಸ್ ಮಾರಿ ತೆರೆಹಂಚಿಕೊಳ್ಳುತ್ತಾರಾ?

Published on
ಒಬ್ಬರು ತೆಲುಗಿನ ಸ್ಟೈಲಿಶ್ ಸ್ಟಾರ್... ಮತ್ತೊಬ್ಬರು ತಮಿಳಿನ ಮಾಸ್ ಮಾರಿ... ಈ ಇಬ್ಬರೂ ಒಂದೇ ಪರದೆಯ ಮೇಲೆ ಕಾಣಿಸಿಕೊಂಡರೆ ಅಭಿಮಾನಿಗಳಿಗೆ ಹಬ್ಬವೋ ಹಬ್ಬ ಎಂದರೇ ತಪ್ಪಾಗುವುದಿಲ್ಲ. ಹೌದು, ನಟ ಅಲ್ಲು ಅರ್ಜುನ್ ಟಾಲಿವುಡ್​ನ ಸ್ಟೈಲಿಶ್ ಸ್ಟಾರ್ ಮತ್ತು ನಟ ಧನುಷ್ ತಮಿಳಿನ ಮಾಸ್ ಹೀರೋ. ಈ ಇಬ್ಬರೂ ಸೌತ್ ಚಿತ್ರತಂಗದಲ್ಲಿ ಬಹು ಬೇಡಿಕೆಯ ನಟರು. ಇದೀಗ, ಇವರಿಬ್ಬರೂ ಒಟ್ಟಿಗೆ ಒಂದು ಸಿನಿಮಾ ಮಾಡುತ್ತಾರೆ ಎಂದರೆ ಆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಲು ಬೇರೆ ಕಾರಣಗಳೇ ಬೇಕಾಗಿಲ್ಲ.
ಸದ್ಯ, ಇವರಿಬ್ಬರು ಸಿನಿಮಾ ಮಾಡುವ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಾ ಇದೆ. ಬಾಕ್ಸಾಫಿಸ್ ಲೂಟಿ ಮಾಡುವ ಸ್ಟೈಲಿಶ್ ಸ್ಟಾರ್ ಜತೆಗೆ ರಾಷ್ಟ್ರೀಯ ಪ್ರಶಸ್ತಿ ಪಡೆದ ಧನುಷ್ ಅವರು ಟಾಲಿವುಡ್​ನ ಖ್ಯಾತ ನಿರ್ದೇಶಕರಾದ ಕೊರಟಾಲ ಶಿವ ಅವರ ಚಿತ್ರದಲ್ಲಿ ನಟಿಸಲಿದ್ದಾರಂತೆ. ಈಗಾಗಲೇ, ಹಲವು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ಖ್ಯಾತ ನಿರ್ದೇಶಕ ಕೊರಟಾಲ ಶಿವ ಅವರ ಈ ಮುಂಬರುವ ಸಿನಿಮಾಗೆ ಇನ್ನು ಟೈಟಲ್ ಇಟ್ಟಿಲ್ಲವಂತೆ. ಇನ್ನು, ಈ ಚಿತ್ರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ, ಇಬ್ಬರು ನಟರ ಅಭಿಮಾನಿ ಬಳಗ ಮಾತ್ರ ಸ್ಟಾರ್ ನಟರು ಒಟ್ಟಿಗೆ ಸಿನಿಮಾ ಮಾಡಲಿ ಹಾಗೂ ಈ ಗುಸು ಗುಸು ಸುದ್ದಿ ನಿಜ ಆಗಲಿ ಎಂದು ಹಾತೊರೆಯುತ್ತಿದ್ದಾರೆ.
ಅಂದಹಾಗೆ, ಅಲ್ಲು ಅರ್ಜುನ್ ಮತ್ತು ಧನುಷ್ ಅವರು ನಟಿಸಲಿರುವ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆಯಂತೆ. ಆ ಸಿನಿಮಾ ಕೂಡಾ 'RRR' ಚಿತ್ರದ ಮಾದರಿಯಲ್ಲಿ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಸದ್ಯ, ನಟ ಅಲ್ಲು ಅರ್ಜುನ್ ಅವರು 'ಪುಷ್ಪ 2' ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ. ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಶುರುವಾಗಿದೆ. ಮತ್ತೊಂದೆಡೆ, ನಟ ಧನುಷ್ ಅವರು ಸಹ ಸಾಲು, ಸಾಲು ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾರೆ. ಸದ್ಯ 'ವಾತಿ' ಎಂಬ ಮುಂಬರುವ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿದ್ದಾರೆ ನಟ ಧನುಷ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net