'ಸೋರುತಿಹುದು ಮನೆಯ ಮಾಳಿಗಿ ...' ಹಾಡಿಗೆ ರಾಪ್​ ಸ್ಪರ್ಶ

All OkFINAL
Published on

ಬೆಂಗಳೂರು: ಕನ್ನಡದ ರಾಪ್​ ಲೋಕದಲ್ಲಿ ಅಲೋಕ್ ಬಾಬು ಅಲಿಯಾಸ್​ ಆಲ್​ ಓಕೆ ದೊಡ್ಡ ಹೆಸರು. ಈಗಾಗಲೇ ಅಲೋಕ್​, ಆಲ್​ ಓಕೆ ಹೆಸರಿನಲ್ಲಿ ಹಲವು ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ ಮತ್ತು ಆ ಹಾಡುಗಳು ಸಾಕಷ್ಟು ಜನಪ್ರಿಯವೂ ಆಗಿದೆ. ಈಗ ಸಂತ ಶಿಶುನಾಳ ಶರೀಫರ 'ಸೋರುತಿಹುದು ಮನೆಯ ಮಾಳಿಗಿ ...' ಹಾಡಿಗೆ ರಾಪ್​ ಸ್ಪರ್ಶ ಕೊಟ್ಟಿದ್ದಾರೆ.

’ಸೋರುತಿವುದು ಮನೆಯ ಮಾಳಿಗಿ’ ಹಾಡಿನಲ್ಲಿ ಅಜ್ಞಾನದ ಕುರಿತು ಪ್ರತಿಯೊಬ್ಬರಿಗೂ ಪ್ರೇರಣೆ ತುಂಬುವಂತಹ ಸಾಹಿತ್ಯವಿದೆ. ಈ ಹಾಡಿಗೆ ಆಲ್ ಓಕೆ ಹಾಡಿರುವುದಷ್ಟೇ ಅಲ್ಲ, ಸಂಗೀತ ಸಂಯೋಜಿಸಿ, ನಿರ್ಮಾಣ ಮತ್ತು ನಟನೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಜತೆಗೆ ಹೆಚ್ಚುವರಿ ಸಾಹಿತ್ಯವನ್ನೂ ರಚಿಸಿದ್ದಾರೆ.

ಈ ಹಾಡನ್ನು ರಾಜಾ ರಾಮ್ ರಾಜೇಂದ್ರನ್ ನಿರ್ದೇಶಿಸುವುದರ ಜತೆಗೆ ಛಾಯಾಗ್ರಹಣವನ್ನೂ ಮಾಡಿದ್ದಾರೆ. ಜೋಲ್ಸನ್ ಪಣಿಕರ್ ಸಂಕಲನ ಹಾಗೂ ಗ್ರಾಫಿಕ್ ಜವಾಬ್ದಾರಿ ನಿರ್ವಹಿಸಿದ್ದಾರೆ.

ಕಳೆದ 19 ವರ್ಷಗಳಿಂದ ಕನ್ನಡ ರಾಪ್​ ಜಗತ್ತಿನಲ್ಲಿ ದುನಿಯಾದಲ್ಲಿ ತಮ್ಮದೇ ಹೊಸ ಶೈಲಿಯನ್ನು ಹುಟ್ಟುಹಾಕಿರುವ ಅಲೋಕ್​ ಈಗ ಜನಪದ ಸಾಹಿತ್ಯದ ಉಳಿವಿಗಾಗಿ ಹೊಸ ಪ್ರಯೋಗ ಮಾಡಿದ್ದಾರೆ. ಈ ಹಾಡು ಇದೀಗ ಯೂಟ್ಯೂಬ್​ನ ಆಲ್​ ಓಕೆ ಚಾನಲ್​ನಲ್ಲಿ ಬಿಡುಗಡೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net