ಬಾಲಿವುಡ್​ ಬ್ಯೂಟಿಯ ಜತೆ ನಾಗಚೈತನ್ಯ ಡೇಟಿಂಗ್​! ನಟಿಯ ಹೆಸರು ಬಹಿರಂಗ, ಶುರುವಾಯ್ತು ಬಿಸಿ ಬಿಸಿ ಚರ್ಚೆ

Nagachaitanya
Published on

ಹೈದರಾಬಾದ್​: ತಾರಾದಂಪತಿ ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್​ ಸಂಗತಿ 2021ರಲ್ಲಿ ಭಾರೀ ಸುದ್ದಿಯಾಯಿತು. ದಾಂಪತ್ಯ ಜೀವನಕ್ಕೆ ಕಳೆದ ಅಕ್ಟೋಬರ್ 2ರಂದು ಇಬ್ಬರು ಅಂತ್ಯವಾಡಿದ್ದು, ಅಂದಿನಿಂದ ಇಬ್ಬರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಸಮಂತಾ ಮತ್ತು ನಾಗಚೈತನ್ಯ ತಮ್ಮ ತಮ್ಮ ಸಿನಿಮಾಗಳಲ್ಲಿ ಬಿಜಿಯಾಗಿದ್ದು, ಇದರ ನಡುವೆ ಒಂದು ಬ್ರೇಕಿಂಗ್​ ನ್ಯೂಸ್​ ಹೊರಬಿದ್ದಿದೆ.

ನಾಗಚೈತನ್ಯ ಅವರ 'ಥ್ಯಾಂಕ್​ ಯು' ಸಿನಿಮಾ ಜುಲೈ 8ರಂದು ಬಿಡುಗಡೆಯಾಗುತ್ತಿದೆ. ಇದರ ನಡುವೆ ಅವರ ವೈಯಕ್ತಿಕ ಜೀವನ ಹೆಚ್ಚು ಸುದ್ದಿಯಾಗಿದೆ. ಇದೀಗ ಟಾಲಿವುಡ್​ ಗಲ್ಲಿಯಲ್ಲಿ ಕೇಳಿಬರುತ್ತಿರುವ ಸುದ್ದಿಗಳ ಪ್ರಕಾರ ಇತ್ತೀಚೆಗೆ ಬಿಡುಗಡೆಯಾದ ನಟ ಅದಿವಿ ಶೇಷ್ ಅವರ 'ಮೇಜರ್' ಸಿನಿಮಾದಲ್ಲಿ ಒತ್ತೆಯಾಳು ಪ್ರಮೋದಾ ಪಾತ್ರದಲ್ಲಿ ನಟಿಸಿರುವ ನಟಿ ಸೋಭಿತಾ ಧೂಳಿಪಾಲ ಅವರೊಂದಿಗೆ ನಾಗಚೈತನ್ಯ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಕಳೆದ ಕೆಲವು ವಾರಗಳಿಂದ ಇಬ್ಬರು ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದೀಗ ಈ ವಿಚಾರ ಟಾಲಿವುಡ್​ ಗಲ್ಲಿಯಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಸೋಭಿತಾ ಅವರು ನೆಟ್​ಫ್ಲಿಕ್ಸ್​ ಪ್ರಾಜೆಕ್ಟ್​ ಮಂಕಿ ಮ್ಯಾನ್​ ಮತ್ತು ಮಣಿರತ್ನಂ ನಿರ್ದೇಶನದ ಪೊಪನ್ನಿಯಿನ್​ ಸೆಲ್ವನ್​ ಸಿನಿಮಾಗಳಲ್ಲಿ ನಟಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

ನಾಗಚೈತನ್ಯ ಅವರು ಸದ್ಯ ಥ್ಯಾಂಕ್​ ಯು ಸಿನಿಮಾದ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಆಮೀರ್​ ಖಾನ್​ ಅಭಿನಯದ ಲಾಲ್​ ಸಿಂಗ್​ ಛಡ್ಡಾ ಸಿನಿಮಾದಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net