

ಮುಂಬೈ: ಬಾಲಿವುಡ್ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ತಮ್ಮ ಸೆಲೆಬ್ರಿಟಿ ಚಾಟ್ ಶೋ ಕಾಫಿ ವಿಥ್ ಕರಣ್ನ 7ನೇ ಸೀಸನ್ ಜುಲೈ 7 ರಂದು OTT ಗೆ ಬರಲಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ಸೋಶಿಯಲ್ ಮಾಧ್ಯಮ ಖಾತೆಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಹಿಂದಿಯ ಕ್ರೇಜಿ ಟಾಕ್ ಶೋ 'ಕಾಫಿ ವಿಥ್ ಕರಣ್' ಸೀಸನ್ 7 ಪ್ರಾರಂಭವಾಗಲಿದೆ ಎಂಬ ಸುದ್ದಿ ತಿಳಿದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅವರು ತಮ್ಮ ಸೆಲೆಬ್ರಿಟಿ ಚಾಟ್ ಶೋ 'ಕಾಫಿ ವಿಥ್ ಕರಣ್' ಕಾರ್ಯಕ್ರಮದ ಏಳನೇ ಸೀಸನ್ ಜುಲೈ 7 ರಂದು ಡಿಸ್ನಿ + ಹಾಟ್ಸ್ಟಾರ್ನಲ್ಲಿ ಪ್ರಸಾರ ಆಗಲಿದೆ ಎಂದು ಟ್ವಿಟರ್ನಲ್ಲಿ ಘೋಷಿಸಿದ್ದಾರೆ.
ಕಾಫಿ ವಿಥ್ ಕರಣ್ ಮೊದಲ ಬಾರಿಗೆ ಟಿವಿ ಚಾನೆಲ್ ಸ್ಟಾರ್ ವರ್ಲ್ಡ್ ನಲ್ಲಿ 2004 ರಲ್ಲಿ ಪ್ರಥಮ ಪ್ರದರ್ಶನಗೊಂಡಿತು. 2019 ರವರೆಗೆ ಸ್ಮಾಲ್ ಸ್ಕ್ರೀನ್ ಮೇಲೆ ಆರು ಸೀಸನ್ಗಳನ್ನು ಪ್ರಸಾರ ಮಾಡಿತು.