More

    ಸುಚೇಂದ್ರ ಪ್ರಸಾದ್​ ಜತೆಗೆ ಬಿರುಕು, ಮತ್ತೊಂದು ಮದುವೆಯಾಗಿದ್ದಾರಾ ಪವಿತ್ರಾ ಲೋಕೇಶ್​?

    ಬೆಂಗಳೂರು: ಕನ್ನಡ ಮಾತ್ರವಲ್ಲದೇ ಟಾಲಿವುಡ್​​ನಲ್ಲೂ ಛಾಪು ಮೂಡಿಸಿರುವ ನಟಿ ಪವಿತ್ರಾ ಲೋಕೇಶ್​ ಅವರ ಮದುವೆ ಕುರಿತ ವಿಚಾರ ಭಾರೀ ಸದ್ದು ಮಾಡುತ್ತಿದೆ.ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿ, ಸದ್ಯ ತೆಲುಗಿನಲ್ಲಿಯೂ ಪೋಷಕ ನಟಿಯಾಗಿ ಗುರುತಿಸಿಕೊಂಡಿರುವ ಪವಿತ್ರ ಲೋಕೇಶ್​ ಹಾಗೂ ಅವರ ಪತಿ ಸುಚೇಂದ್ರ ಪ್ರಸಾದ್​ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ.

    ಸದ್ಯ ತೆಲುಗು ಸೂಪರ್​ಸ್ಟಾರ್​ ಮಹೇಶ್​ ಬಾಬು ಅವರ ಸಹೋದರ ನರೇಶ್​ ಎಂಬುವವರನ್ನು ವರಿಸಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ನರೇಶ್​ ಹಾಗೂ ಪವಿತ್ರಾ ಲೋಕೇಶ್ ಮಹಾಬಲೇಶ್ವರಕ್ಕೆ ತೆರಳಿ ಅಲ್ಲಿ ಗುಟ್ಟಾಗಿ ಮದುವೆಯೂ ಆಗಿದೆ ಎಂದೂ ಕೂಡ ಕೆಲವರು ಹೇಳುತ್ತಿದ್ದಾರೆ. 64 ವರ್ಷದ ನರೇಶ್​ ಜತೆ 43 ವರ್ಷದ ಪವಿತ್ರಾ ಲೋಕೇಶ್​​ ನಿಜಕ್ಕೂ ಮದುವೆಯಾಗಿದ್ದಾರೆಯೇ ಎಂಬ ಬಗ್ಗೆ ಸದ್ಯ ಈ ಇಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿಲ್ಲ.

    150ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಪವಿತ್ರಾ ಲೋಕೇಶ್​, 2007ರಲ್ಲಿ ಸಹ ನಟರಾದ ಸುಚೇಂದ್ರ ಪ್ರಸಾದ್ ಅವರನ್ನು ವರಿಸಿದ್ದಾರೆ. ಸ್ಪಷ್ಟವಾಗಿ ಕನ್ನಡ ಮಾತನಾಡುವ ಮೂಲಕ ಕನ್ನಡಿಗರ ಮನಗೆದ್ದಿರುವ ಅವರ ಬಗ್ಗೆ ಕನ್ನಡಿಗರಿಗೂ ವಿಶೇಷ ಗೌರವವಿದೆ. ಕನ್ನಡವನ್ನು ಆರಾಧಿಸುವ ಇವರು ಕನ್ನಡ ಬಿಟ್ಟು ಬೇರೆ ಯಾವ ಭಾಷೆಯನ್ನು ಬಳಸುವುದಿಲ್ಲ.

    ಈ ಜೋಡಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಜೀವನದಲ್ಲಿ ಕಷ್ಟಗಳನ್ನು ಎದುರಿಸಿದ್ದ ಪವಿತ್ರಾ ಲೋಕೇಶ್​ ಗಂಡ ಮತ್ತು ಮಕ್ಕಳ ಜೊತೆಗೆ ಸುಖ ಜೀವನವನ್ನು ನಡೆಸುತ್ತಿದ್ದಾರೆ ಅಂತಲೇ ಎಲ್ಲರೂ ತಿಳಿದುಕೊಂಡಿದ್ದರು. ಆದರೆ ಈಗ ಹರಡಿರುವ ವದಂತಿ ಪ್ರಕಾರ ಪವಿತ್ರ ಲೋಕೇಶ್​ ನರೇಶ್​​ ಅವರೊಂದಿಗೆ ಮದುವೆಯಾಗಿದ್ದಾರೆ ಎನ್ನಲಾಗಿದೆ.

    ಕೆಲವೊಂದು ಮಾಹಿತಿಗಳ ಪ್ರಕಾರ ಕೆಲ ವರ್ಷಗಳಿಂದ ಸುಚೇಂದ್ರ ಪ್ರಸಾದ್​ ಹಾಗೂ ಪವಿತ್ರ ಲೋಕೇಶ್​ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರಂತೆ. ಅವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡುವುದಕ್ಕೆ ಸುಚೇಂದ್ರ ಪ್ರಸಾದ್​ ಅವರ ಕೋಪಾನೆ ಕಾರಣ ಇರಬಹುದು ಎಂಬ ಪ್ರಶ್ನೆಯೂ ಮೂಡಿದ್ದು, ಸದ್ಯ ಕಾಡ್ಗಿಚ್ಚಿನಂತೆ ಹಬ್ಬಿರುವ ಇದರ ಬಗ್ಗೆ ಇಬ್ಬರು ಅಧಿಕೃತವಾಗಿ ಮಾಹಿತಿ ನೀಡಿದರೆ ಈ ವಿಚಾರಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.

    ಸದ್ಯ ಮಾಹಿತಿಯೊಂದರ ಪ್ರಕಾರ ನರೇಶ್​ ಅವರ ಬಳಿ 6000 ಕೋಟಿ ರೂ. ಆಸ್ತಿ ಇದೆಯಂತೆ, ಇವರ ಮೊದಲ ತಂದೆ ಕೂಡ ಸಾಕಷ್ಟು ಹಣ ಮಾಡಿದ್ದರು, ಎರಡನೇ ಅಪ್ಪ ಕೂಡ ಸೂಪರ್​ ಸ್ಟಾರ್​ ಕೃಷ್ಣ ಅವರ ಬಗ್ಗೆ ಹೇಳಬೇಕಾಗಿಲ್ಲ. ನರೇಶ್ ಅವರಿಗೂ ಇದು ನಾಲ್ಕನೇ ಮದುವೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

    ಪ್ರವಾಸಿಗರಿಗೆ ವಿಶ್ವ ಯೋಗ ದಿನದ ಗಿಫ್ಟ್​: ಇಂದು ತಾಜ್​​ ಮಹಲ್​ ವೀಕ್ಷಣೆಗಿಲ್ಲ ಪ್ರವೇಶ ಶುಲ್ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts