ಕರೊನಾ ಪೀಡಿತರ ನೆರವಿಗಾಗಿ ಓಟಕ್ಕಿಳಿದ ಸ್ಯಾಂಡಲ್​ವುಡ್ ನಟಿ

2c7e9952-93e4-4ee6-ab6d-14ac75de9aca
Published on

ಬೆಂಗಳೂರು: ಕರೊನಾ ಮಹಾಮಾರಿಯಿಂದಾಗಿ ಇವತ್ತು ವಿಶ್ವವೇ ತಲ್ಲಣಿಸಿದೆ. ಅನೇಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಈ ರೀತಿ ತೊಂದರೆಗೊಳಗಾದವರಿಗೆ ಸಹಾಯ ಮಾಡುವ ಅನೇಕ ಸಮಾಜ ಸೇವೆಯ ಕೆಲಸಗಳೂ ಸಹ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಸ್ಯಾಂಡಲ್ವುಡ್ ನಟಿ ಸುಮನ್ ನಗರ್‌ಕರ್ ಸಹ ಮುಂದೆ ಬಂದು ಬೆಂಗಳೂರು ರನ್ನರ್ಸ್ ಆಯೋಜಿಸಿರುವ ರನ್ 2020-ಮೂವ್ 2 ಫೀಡ್ ಂಡ್ ರೈಸ್ ಅಭಿಯಾನದಲ್ಲಿ ಪತಿ ಗುರು ಅವರೊಂದಿಗೆ ಭಾಗವಹಿಸಿದ್ದಾರೆ.

ಜುಲೈ 1ರಿಂದ 20ರವರೆಗೆ ಒಟ್ಟು ಇಪ್ಪತ್ತು ದಿನಗಳ ಕಾಲ ಇಪ್ಪತ್ತು ರನ್ನರ್ಸ್ ಪ್ರತಿದಿನ ಇಪ್ಪತ್ತು ಕಿಲೋಮೀಟರ್ ಓಡಿ ಈ ಮೂಲಕ ಹಣ ಸಂಗ್ರಹಣೆ ಮಾಡಿ, ಹಾಗೆ ಸಂಗ್ರಹಣೆಯಾದ ಹಣವನ್ನ ಬಡವರಿಗೆ, ದಿನಗೂಲಿಯವರಿಗೆ, ಕಷ್ಟದಲ್ಲಿರುವವರಿಗೆ ಸಾಯಿ ವಿಶ್ವನಾಥ್ ಮೆಮೋರಿಯಲ್ ಟ್ರಸ್ಟಿನ ಮೂಲಕ ದಿನಸಿ ಪದಾರ್ಥ ಸರಬರಾಜು ಮಾಡಲಿದ್ದಾರೆ. ಅಂದಹಾಗೆ, ನಟಿ ಸುಮನ್ ಈಗಾಗಲೇ ಹಲವು ಮ್ಯಾರಥಾನ್‌ಗಳಲ್ಲಿ ಭಾಗವಹಿಸಿದ ಅನುಭವ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net