

ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಒಂದು ಬಗೆಹರಿಯಲಾರದ ಸಮಸ್ಯೆಯೆಂದರೆ ಅದು ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ. ಕಳೆದ ತಿಂಗಳ 14ರಂದು ಸುಶಾಂತ್, ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಅವರ ಸಾವಿಗೆ ಕಾರಣವೇನಿರಬಹುದು ಎಂಬ ಚರ್ಚೆ ಜೋರಾಗಿ ನಡೆಯುತ್ತಲೇ ಇದೆ.
ಈಗ ಮಾಜಿ ರೀಸರ್ಚ್ ಆ್ಯಂಡ್ ಅನಾಲಿಸಿಸ್ (ರಾ) ಅಧಿಕಾರಿ ಎನ್.ಕೆ. ಸೂದ್ ಅವರು, ಸುಶಾಂತ್ ಸಾವಿನ ಹಿಂದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇದ್ದಾರೆ ಎಂಬ ರೋಚಕ ಮಾಹಿತಿಯನ್ನು ನೀಡಿದ್ದಾರೆ. ಇಷ್ಟಕ್ಕೂ ಸುಶಾಂತ್‍ಗೂ ಮತ್ತು ದಾವೂದ್‍ಗೂ ಎಲ್ಲಿಂದೆಲ್ಲಿಯ ಸಂಬಂಧ ಎಂಬ ಪ್ರಶ್ನೆ ಬರಬಹುದು. ಈ ವಿಷಯವಾಗಿ ಸೂದ್ ಅವರು ಒಂದು ವಿಡಿಯೋ ಮಾಡಿ, ಅದರಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ದಾವೂದ್ ಇಬ್ರಾಹಿಂ ದೇಶ ಬಿಟ್ಟಿದ್ದರೂ, ಈಗಲೂ ಮುಂಬೈ ಮತ್ತು ಬಾಲಿವುಡ್‍ನ್ನು ದೂರದಿಂದಲೇ ನಿಯಂತ್ರಿಸುತ್ತಿದ್ದಾನಂತೆ. ಅಷ್ಟೇ ಅಲ್ಲ, ಎಷ್ಟೋ ಜನ ಬಾಲಿವುಡ್ ಸೆಲೆಬ್ರಿಟಿಗಳಿಗೂ ಮತ್ತು ದಾವೂದ್ ಗ್ಯಾಂಗ್‍ಗೂ ನಿಕಟವಾದ ಸಂಪರ್ಕವಿದೆ ಎಂದು ಸೂದ್ ಆರೋಪ ಮಾಡಿದ್ದಾರೆ. ದಾವೂದ್ ಗ್ಯಾಂಗ್‍ನವರು ಆಯೋಜಿಸುವ ಹಲವು ಇವೆಂಟ್ ಮತ್ತು ಪಾರ್ಟಿಗಳಲ್ಲಿ ಬಾಲಿವುಡ್‍ನ ಹಲವು ಸೆಲೆಬ್ರಿಟಿಗಳು ಭಾಗವಹಿಸುತ್ತಾರಂತೆ. ಹಾಗೆ ಭಾಗವಹಿಸುವುದಕ್ಕೆ ಕೋಟಿಕೋಟಿ ಹಣ ಪಡೆಯುತ್ತಾರಂತೆ.
ಸುಶಾಂತ್‍ಗೆ ಇತ್ತೀಚಿನ ಕೆಲವು ತಿಂಗಳುಗಳಲ್ಲಿ ದಾವೂದ್ ಕಡೆಯಿಂದ ಬೆದರಿಕೆ ಕರೆಗಳು ಬರುತ್ತಿದ್ದು, ಅದೇ ಕಾರಣಕ್ಕೆ ಅವರು 50ಕ್ಕೂ ಹೆಚ್ಚು ಬಾರಿ ತಮ್ಮ ಸಿಮ್ ಬದಲಿಸಿರುವ ಸಾಧ್ಯತೆ ಇದೆ ಎಂದು ಸೂದ್ ಹೇಳಿಕೊಂಡಿದ್ದಾರೆ. ಆ ಭಯದಿಂದಲೇ ಸುಶಾಂತ್ ತಮ್ಮ ಮನೆಯಲ್ಲಿ ಮಲಗುವುದಕ್ಕಿಂತ ಹೆಚ್ಚಾಗಿ ಎಷ್ಟೋ ಬಾರಿ ತಮ್ಮ ಕಾರ್‍ನಲ್ಲಿ ಮಲಗುತ್ತಿದ್ದರು ಎಂದು ಸೂದ್ ಹೇಳಿದ್ದಾರೆ.
ಇದನ್ನೂ ಓದಿ: ಬಿಡುಗಡೆಯಾಯ್ತು `ಲಾ' ಚಿತ್ರದ ಟ್ರೇಲರ್
ಇನ್ನು ಸುಶಾಂತ್ ಅವರದ್ದು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ ಎಂದು ಆರೋಪ ಮಾಡಿರುವ ಸೂದ್, `ಸುಶಾಂತ್ ಅವರ ಮನೆಯ ಸಿಸಿಟಿವಿ ಒಂದು ದಿನಕ್ಕೆ ಮುಂಚೆ ಬಂದ್ ಮಾಡಲಾಗಿತ್ತು. ಇನ್ನು ಅವರ ಮನೆಯ ಡೂಪ್ಲಿಕೇಟ್ ಕೀಗಳು ಸಹ ಎಲ್ಲೋ ಮಿಸ್ ಆಗಿವೆ. ಇವಿಷ್ಟು ಸಾಕು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಹೇಳುವುದಕ್ಕೆ. ಸುಶಾಂತ್‍ಗೆ ಏನು ಸಮಸ್ಯೆಯಿತ್ತು ಎಂಬುದು ಅವರ ಗೆಳತಿ ರಿಯಾ ಚಕ್ರವರ್ತಿ, ಸ್ನೇಹಿತ ಸಂದೀಪ್ ಸಿಂಗ್ ಮತ್ತು ಮನೆಗೆಲಸದವರಿಗೆ ಚೆನ್ನಾಗಿ ಗೊತ್ತಿತ್ತು. ಅವರಾದರೂ ಸುಶಾಂತ್‍ಗೆ ಸಹಾಯ ಮಾಡಬಹುದಿತ್ತು. ಆದರೆ, ಯಾರೂ ಸುಶಾಂತ್ ಸಹಾಯಕ್ಕೆ ಬರಲಿಲ್ಲ' ಎಂದು ಸೂದ್ ಹೇಳಿದ್ದಾರೆ.
ಇನ್ನು ಮುಂಬೈ ಪೊಲೀಸ್¸, ಸುಶಾಂತ್ ಸಾವಿನ ಕುರಿತಾಗಿ ಮಾಡುತ್ತಿರುವ ವಿಚಾರಣೆ ಒಂದು ದೊಡ್ಡ ನಾಟಕ ಎಂದು ಕರೆದಿರುವ ಅವರು, `ಮುಂಬೈ ಪೊಲೀಸರು ನಿಯತ್ತಾಗಿ ವಿಚಾರಣೆ ಮಾಡುತ್ತಿರುವ ಫೋಸ್ ಕೊಡುತ್ತಿದ್ದಾರೆ. ಅಸಲಿಗೆ ಅವರು ನಿಜವಾದ ಅಪರಾಧಿಯನ್ನು ಬಚಾವ್ ಮಾಡುತ್ತಿದ್ದಾರೆ' ಎಂದು ಸೂದ್ ಆರೋಪಿಸಿದ್ದಾರೆ.