More

    ಬಿಡುಗಡೆಯಾಯ್ತು `ಲಾ’ ಚಿತ್ರದ ಟ್ರೇಲರ್

    ಪುನೀತ್ ರಾಜಕುಮಾರ್ ನಿರ್ಮಾಣದ `ಲಾ’ ಚಿತ್ರವು ಅಮೇಜಾನ್ ಪ್ರೈಮ್‍ನಲ್ಲಿ ಇದೇ 17ರಂದು ಸ್ಟ್ರೀಮ್ ಆಗಲಿದೆ. ಚಿತ್ರ ಬಿಡುಗಡೆಗೆ ಇನ್ನು ಕೆಲವೇ ದಿನಗಳಿದ್ದರೂ, ಟ್ರೇಲರ್ ಹೊರಬಂದಿಲ್ಲ ಎನ್ನುತ್ತಿದ್ದವರಿಗೆ, ಇದೀಗ `ಲಾ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಯೂಟ್ಯೂಬ್‍ನ ಅಮೇಜಾನ್ ಪ್ರೈಮ್ ಚಾನಲ್‍ನಲ್ಲಿ ಈಗಾಗಲೇ ಟ್ರೇಲರ್ ಬಿಡುಗಡೆಯಾಗಿದ್ದಾಗಿದೆ.

    ಇದನ್ನೂ ಓದಿ: ಕಂಗನಾ ಅವನ್ನೇ ಹೋಲುತ್ತದೆ ಈ ಮುದ್ದು ಗೊಂಬೆ

    ಸಾಮಾನ್ಯವಾಗಿ ಕನ್ನಡ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಆ ನಂತರ ಓವರ್ ದಿ ಟಾಪ್‍ಯಲ್ಲಿ (ಓಟಿಟಿ) ಬಿಡುಗಡೆಯಾಗುತ್ತಿದ್ದವು. ಆದರ್ಶ್ ಈಶ್ವರಪ್ಪ ನಿರ್ದೇಶನದ `ಭಿನ್ನ’ ಚಿತ್ರವು ಚಿತ್ರಮಂದಿರಗಳಿಗಿಂತ ಮುಂಚಿವಾಗಿ ಜೀ5ನಲ್ಲಿ ಪ್ರೀಮಿಯರ್ ಆಗಿತ್ತು. ಈಗ `ಲಾ’ ಚಿತ್ರ ಸಹ ಅದೇ ದಾರಿ ಹಿಡಿದಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೇ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಎರಡನೇ ಕನ್ನಡ ಚಿತ್ರ ಇದಾಗಿದ್ದು, ನೇರವಾಗಿ ಅಮೇಜಾನ್ ಪ್ರೈಮ್‍ನಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ ಇದಾಗಿದೆ.

    `ಲಾ’ ಎಂಬ ಹೆಸರೇ ಹೇಳುವಂತೆ, ಇದೊಂದು ಕೋರ್ಟ್‍ರೂಂ ಡ್ರಾ ಆಗಿದ್ದು, ಈ ಚಿತ್ರದ ಮೂಲಕ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್, ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ರಾಗಿಣಿ ಈ ಚಿತ್ರದಲ್ಲಿ ನಂದಿನಿ ಎನ್ನುವ ಪಾತ್ರ ಮಾಡಿದ್ದಾರೆ. `ನಂದಿನಿ ಒಬ್ಬ ದೃಢ ಮತ್ತು ಗಟ್ಟಿ ಹೃದಯದ ಯುವತಿಯಾಗಿದ್ದು, ಕಠಿಣ ಪರಿಸ್ಥಿತಿಯನ್ನು ದೃಢ ನಿಶ್ಚಯದೊಂದಿಗೆ ಹೇಗೆ ಗೆಲ್ಲುತ್ತಾಳೆ ಎನ್ನುವುದೇ ಈ ಚಿತ್ರದ ಕಥೆ ಎನ್ನುತ್ತಾರೆ ರಾಗಿಣಿ.

    ಇದನ್ನೂ ಓದಿ: ಕಿವಿ ಕೇಳಿಸಲ್ಲ, ಮಾತು ಬರಲ್ಲ … ಏನಾಯ್ತು ರವಿವರ್ಮಗೆ?

    ರಾಗಿಣಿ ಜತೆಗೆ ಅವಿನಾಶ್, ಸುಧಾರಾಣಿ, ಅಚ್ಯುತ್ ಕುಮಾರ್, ರಾಜೇಶ್ ನಟರಂಗ, ಮುಖ್ಯಮಂತ್ರಿ ಚಂದ್ರು ಮುಂತಾದ ಪ್ರತಿಭಾವಂತರ ದಂಡೇ ಈ ಚಿತ್ರದಲ್ಲಿ ನಟಿಸಿದೆ. ಇನ್ನು ರಘು ಸಮರ್ಥ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ ಮಾಡಿದ್ದಾರೆ. ಪಿಆರ್‍ಕೆ ಪ್ರೊಡಕ್ಷನ್ಸ್‍ನಡಿ ಈ ಚಿತ್ರವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಎಂ. ಗೋವಿಂದು ಜತೆಯಾಗಿ ನಿರ್ಮಾಣ ಮಾಡಿದ್ದಾರೆ.

    ಟ್ರೋಲ್​ಗೆ ಆಹಾರವಾದ್ರು ಕಾಮಿಡಿ ಕಿಲಾಡಿ ನಯನಾ; ಫೇಸ್​ಬುಕ್​ನಲ್ಲಿ ಹಿಗ್ಗಾಮುಗ್ಗಾ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts