ದಯಾಮರಣ ದಯಪಾಲಿಸಿ ಎಂದಿದ್ದ ನಟಿ ಜಯಶ್ರೀ ರಾಮಯ್ಯ ಈಗ ಹೇಗಿದ್ದಾರೆ?

collage (1)
Published on

ಬೆಂಗಳೂರು: ಜುಲೈ ತಿಂಗಳಲ್ಲಿ ನಟಿ ಜಯಶ್ರೀ ರಾಮಯ್ಯ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದರು. ಖಿನ್ನತೆಯಿಂದ ಬೇಸತ್ತು ದಯಮರಣ ದಯಪಾಲಿಸಿ ಎಂದು ಅಂಗಲಾಚಿಕೊಂಡಿದ್ದರು. ಅದಾದ ಬಳಿಕ ಕೇಶ ಮುಂಡನ ಮಾಡಿಕೊಂಡು ಮತ್ತೆ ಸುದ್ದಿಯಲ್ಲಿದ್ದರು. ಹಾಗಾದರೆ, ಸದ್ಯ ಜಯಶ್ರೀ ಹೇಗಿದ್ದಾರೆ?

ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿರುವ ಜಯಶ್ರೀ ನಿತ್ಯ ಒಂದಿಲ್ಲೊಂದು ಫೋಟೋಗಳನ್ನು ಶೇರ್​ ಮಾಡಿಕೊಂಡು, ಹ್ಯಾಪಿಯಾಗಿದ್ದಾರೆ. ಅಚ್ಚರಿ ವಿಚಾರ ಏನೆಂದರೆ ಅವರ ಫೇಸ್​ಬುಕ್​ನಲ್ಲೀಗ ಬಹುತೇಕ ಸಕಾರಾತ್ಮಕ ವಿಚಾರದ ವಿಡಿಯೋಗಳು ಮತ್ತು ಹಾಸ್ಯದ ವಿಡಿಯೋ ತುಣುಕುಗಳೇ ಕಾಣಿಸುತ್ತಿವೆ. ಈ ಮೂಲಕ ಖಿನ್ನತೆಯಿಂದ ದೂರವಾಗುತ್ತಿರುವ ಬಗ್ಗೆ ಸೂಚನೆ ನೀಡಿದ್ದಾರೆ.

ಜುಲೈನಲ್ಲಿ ‘ನನ್ನಿಂದಾಗದು, ಇಡೀ ಜಗತ್ತಿಗೆ ಮತ್ತು ಖಿನ್ನತೆಗೆ ಗುಡ್​ಬೈ’ ಎಂದು ಬರೆದುಕೊಂಡಿದ್ದರು.ಈ ರೀತಿ ಪೋಸ್ಟ್ ಮಾಡುತ್ತಿದ್ದಂತೆ ಸಾಕಷ್ಟು ಮಂದಿ ಸ್ನೇಹಿತರು ಜಯಶ್ರೀ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ, ಯಾರ ಕರೆಯನ್ನೂ ಅವರು ಸ್ವೀಕರಿಸುತ್ತಿರಲಿಲ್ಲ.

‘ಕುಟುಂಬದ ಸಮಸ್ಯೆಯಾದರೆ, ನನಗೆ ತುಂಬಾ ಮೋಸ ಮಾಡಿದ್ದಾರೆ. ಅಲ್ಲದೆ, ಚಿಕ್ಕ ವಯಸ್ಸಲ್ಲಿ ನನಗೆ ಆಗಬಾರದ ಘಟನೆಯೆಲ್ಲ ನಡೆದಿದೆ. ನನ್ನ ಕೈಯಲ್ಲಿ ಅದ್ಯಾವುದನ್ನೂ ಮರೆಯಲು ಆಗುತ್ತಿಲ್ಲ. ಇದರ ನಡುವೆ ನಾನು ಫೇಸ್​ಬುಕ್​ನಲ್ಲಿ ಕಾಮೆಂಟ್ಸ್​ ನೋಡುತ್ತಿದ್ದೇನೆ. ನನ್ನ ಬಗ್ಗೆ ಕೆಟ್ಟದಾಗಿ ಕಾಮೆಂಟ್​ ಮಾಡುತ್ತಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ನಾನು ತುಂಬಾ ನೋವಿನಲ್ಲಿದ್ದೇನೆ. ನಾನು ನಿರೀಕ್ಷೆ ಮಾಡುತ್ತಿರುವುದೊಂದೆ ನನಗೆ ದಯಾಮರಣವನ್ನು ನೀಡಿ, ನಾನು ಒಳ್ಳೆಯ ಹುಡುಗಿಯಲ್ಲ’ ಎಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net