ಶ್ರೀ-ಅದಿತಿ ಜೋಡಿಯ 'ಗಜಾನನ ಆ್ಯಂಡ್ ಗ್ಯಾಂಗ್' ಜೂ. 3ಕ್ಕೆ ಬಿಗ್ ಸ್ಕ್ರೀನ್ ಗೆ ಎಂಟ್ರಿ

Published on
ಬೆಂಗಳೂರು: ಕಳೆದ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಕನ್ನಡ ಸಿನಿಮಾ 'ಗಜಾನನ ಆ್ಯಂಡ್ ಗ್ಯಾಂಗ್' ಮುಂಬರುವ ಜೂನ್ 3 ರಂದು ತೆರೆಗೆ ಬರಲು ರೆಡಿಯಾಗಿದೆ. ಒಂದು ಕಾಲೇಜು ಕಥೆ ಆಧಾರಿತ ಚಿತ್ರ ಇದಾಗಿದ್ದು, ನಟ ಶ್ರೀ ಮಹದೇವ್ ಮತ್ತು ನಟಿ ಅದಿತಿ ಪ್ರಭುದೇವ ಅವರು ನಾಯಕ-ನಾಯಕಿಯಾಗಿ ಮಿಂಚಲಿದ್ದಾರೆ. ಇನ್ನು, 'ನಮ್ ಗಣಿ ಬಿ.ಕಾಂ ಪಾಸ್' ಖ್ಯಾತಿಯ ಅಭಿಷೇಕ್ ಶೆಟ್ಟಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅಂದಹಾಗೆ, ದೇಶಾದ್ಯಂತ ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ, ಜನವರಿಯಿಂದ ಸಿನಿಮಾ ಹಾಲ್‌ಗಳು 50 ಪ್ರತಿಶತ ಆಕ್ಯುಪೆನ್ಸಿ ದರದೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಿದ್ದರಿಂದ, ಬಿಡುಗಡೆಯ ದಿನಾಂಕವನ್ನು ತಳ್ಳಲು ನಿರ್ಧರಿಸಿದ ನಿರ್ಮಾಪಕರು ಮತ್ತು ಚಿತ್ರತಂಡ, ಈಗ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.
ಹಾಗಾಗಿ, ಜೂನ್ 3 ರಂದು 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಶ್ರೀ ಮಹಾದೇವ್ ಅವರು ಮೊದಲ ಬಾರಿಗೆ ನಟಿ ಅದಿತಿ ಪ್ರಭುದೇವ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇನ್ನು, ಕಳೆದ ಡಿಸೆಂಬರ್‌ನಲ್ಲಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾದ ಈ ಚಿತ್ರದ ಟ್ರೈಲರ್ ಸಿನಿಪ್ರಿಯರ ಕುತೂಹಲವನ್ನು ಗಳಿಸಿತ್ತು. ನಟಿ ಮೇಘನಾ ರಾಜ್ ಅವರು ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದರು. ಈ ಸಿನಿಮಾಗೆ ಪ್ರದ್ದ್ಯೋತ್ತನ್ ಅವರು ಸಂಗೀತ ನಿರ್ದೇಶನ ಮಾಡಿದ್ದು, ಲೀಲಾ ಅವರ ಛಾಯಾಗ್ರಹಣವಿದೆ. ಹಾಗೆಯೇ, ವಿಜೆಟ್ ಚಂದ್ರು ಅವರು ಸಂಕಲನ ಮತ್ತು ಥ್ರಿಲ್ಲರ್ ಮಂಜು ಅವರು ಫೈಟ್ ಮಾಸ್ಟರ್ ಆಗಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net