More

    300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ 92 ವರ್ಷದ ಹಿರಿಯ ನಟ ಮನ್ನವ ಬಾಲಯ್ಯ ನಿಧನ

    ಹೈದರಾಬಾದ್: ಟಾಲಿವುಡ್​ನ ಹಿರಿಯ ನಟ ಮನ್ನವ ಬಾಲಯ್ಯ ಅವರು ಶನಿವಾರ (ಏಪ್ರಿಲ್ 8 ರಂದು) ಬೆಳಗ್ಗೆ ತೆಲಂಗಾಣದ ಹೈದರಾಬಾದ್​ನ ಯೂಸುಫ್‌ಗುಡದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. 1930 ರಲ್ಲಿ ಏಪ್ರಿಲ್ 9 ರಂದು ಜನಿಸಿದ ನಟನಿಗೆ ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿದ್ದವು ಎಂದು ವರದಿಯಾಗಿದೆ. ಮಲ್ಲಿಶ್ವರಿ, ‘ಅನ್ನಮಯ್ಯಸೇರಿದಂತೆ ಹಲವಾರು ತೆಲುಗಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ಮತ್ತು 300ಕ್ಕೂ ಹೆಚ್ಚು ತೆಲುಗು ಚಿತ್ರಗಳಲ್ಲಿ ಮನ್ನವ ಬಾಲಯ್ಯ ಅವರು ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಕೇವಲ ನಟನೆ ಅಲ್ಲದೇ ಮನ್ನವ ಬಾಲಯ್ಯ ಅವರು ನಿರ್ದೇಶಕ, ನಿರ್ಮಾಪಕ, ಬರಹಗಾರನಾಗಿಯೂ ಗುರುತಿಸಿಕೊಂಡಿದ್ದಾರೆ.
    ಹಲವು ಟಾಲಿವುಡ್ ಸೆಲೆಬ್ರಿಟಿಗಳು, ನಟರು, ಚಲನಚಿತ್ರ ನಿರ್ಮಾಪಕರು, ಗಾಯಕರು ಸೇರಿದಂತೆ ಚಿತ್ರರಂಗದ ಬಂಧುಗಳು ನಟ ಮನ್ನವ ಬಾಲಯ್ಯ ಅವರ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದರು. ಮನ್ನವ ಬಾಲಯ್ಯ ಅವರು ಚೆನ್ನೈನ ಗಿಂಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ BE-ಮೆಕ್ಯಾನಿಕಲ್ ಅಧ್ಯಯನ ಮಾಡಿದ್ದು, ಕಾಲೇಜು ನಾಟಕಗಳಲ್ಲಿ ರಂಗ ಕಲಾವಿದರಾಗಿದ್ದರು. ಬಳಿಕ ಅವರು ತೆಲುಗು ಚಲನಚಿತ್ರ ಬರಹಗಾರ ಮತ್ತು ನಿರ್ದೇಶಕರಾದ ತಾಪಿ ಚಾಣಕ್ಯ ಅವರ ಮಾರ್ಗದರ್ಶನದೊಂದಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟರು ಎನ್ನಲಾಗಿದೆ

    ನಟ ಮನ್ನವ ಬಾಲಯ್ಯ ಅವರು 1958 ರಲ್ಲಿ ಸಾರಥಿ ಸ್ಟುಡಿಯೋಸ್ ನಿರ್ಮಿಸಿದ ‘ಎತ್ತುಕು ಪೈ ಎತ್ತು’ ಚಿತ್ರದ ಮೂಲಕ ತೆಲುಗು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಇನ್ನು, ಅಂದಿನಿಂದ ಪಾರ್ವತಿ ಕಲ್ಯಾಣಂ, ಭಾಗ್ಯದೇವತೆ, ಕುಂಕುಮ ರೇಖಾ, ಚೆಲ್ಲಲಿ ಕಾಪುರಂ, ನೀರಾಮು ಶಿಕ್ಷ, ಚುಟ್ಟಾಲು ಉನ್ನಾರು ಜಾಗರ್​ತ, ಅಲ್ಲುರಿ ಸೀತಾ ರಾಮ ರಾಜು ಸೇರಿದಂತೆ ಹಲವು ಚಿತ್ರಗಳಲ್ಲಿನ ಅವರ ಪಾತ್ರಗಳನ್ನು ಸಿನಿಪ್ರೇಕ್ಷಕರು ಇಂದಿಗೂ ತುಂಬಾ ಪ್ರೀತಿಯಿಂದ ಸ್ಮರಿಸುತ್ತಾರೆ.
    ಜತೆಗೆ, ‘ಚೆಲ್ಲೆಲಿ ಕಾಪುರಂ’ ಸಿನಿಮಾದಲ್ಲಿನ ತಮ್ಮ ಪಾತ್ರಕ್ಕಾಗಿ ಅವರು ಆಂಧ್ರಪ್ರದೇಶ ಸರ್ಕಾರದಿಂದ ಸುವರ್ಣ ನಂದಿ ಪ್ರಶಸ್ತಿಯನ್ನು ಪಡೆದರು. ಈ ಸಿನಿಮಾಗೆ ಅವರೇ ಕಥೆಯನ್ನು ಸಹ ಬರೆದು ಎನ್ನಲಾಗಿದೆ. ಇನ್ನು, ಇವರು 2012 ರ ಪ್ರತಿಷ್ಠಿತ ರಘುಪತಿ ವೆಂಕಯ್ಯ ಪ್ರಶಸ್ತಿಯನ್ನು ಪಡೆದರು. ನಟ ಮನ್ನವ ಬಾಲಯ್ಯ ಅವರು ಕೊನೆಯದಾಗಿ 2013 ರಲ್ಲಿ ರಾಮಾಚಾರಿಎಂಬ ತೆಲುಗು ಚಿತ್ರದಲ್ಲಿ ಎಪಿ ಮುಖ್ಯಮಂತ್ರಿ ಹರಿಶ್ಚಂದ್ರ ಪ್ರಸಾದ್ ಪಾತ್ರದಲ್ಲಿ ಕಾಣಿಸಿಕೊಂಡರು

    50 ಸ್ನೇಹಿತರ ಜತೆ ಯುರೋಪ್​ನಲ್ಲಿ 40ನೇ ಬರ್ತಡೇ ಆಚರಣೆ ಮಾಡಿಕೊಂಡ ನಟ ಅಲ್ಲು ಅರ್ಜುನ್!

    ಕೈ ಜಾರಿದ ವಿಲ್ ಸ್ಮಿತ್​ಗೆ 10 ವರ್ಷ ಬ್ಯಾನ್! ಬಾಯಿ ಜಾರಿದ ಕ್ರಿಸ್ ರಾಕ್​ಗೆ ಶಿಕ್ಷೆ ಯಾಕಿಲ್ಲ?

    ಚಿತ್ರಮಂದಿರಗಳ ಮಾಲೀಕರಿಂದಲೂ ತಿರಸ್ಕರಿಸಲ್ಪಟ್ಟ RGV ಸಿನಿಮಾ! ‘ಡೇಂಜರಸ್’ಗೆ ನೋ ರಿಲೀಸ್; ಕಾರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts