More

    ಆತಂಕ ತಂದ ಹಕ್ಕಿಗಳ ಸಾವು

    ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

    ಅಶೋಕ ಉಪ್ಪಾರ ಹಗರಿಬೊಮ್ಮನಹಳ್ಳಿ

    ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ವಲಸೆ ಬರುವ ದೇಶ-ವಿದೇಶಿ ಹಕ್ಕಿಗಳು ಬೇಟೆಗಾರರ ಗುರಿಗೆ ಬಲಿಯಾಗುತ್ತಿದ್ದು. ಪಕ್ಷಿಪ್ರೇಮಿಗಳಲ್ಲಿ ಆತಂಕ ತಂದೊಡ್ಡಿವೆ. ಇದಲ್ಲದೆ ಕಲುಷಿತ ನೀರಿನಲ್ಲಿರುವ ಸೋಂಕಿನಿಂದಲೂ ಪಕ್ಷಿಗಳು ಜೀವ ಕಳೆದುಕೊಳ್ಳುತ್ತಿವೆ.

    ರಾಮ್ಸರ್ ಜೌಕು  ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಅಂಕಸಮುದ್ರ ಪಕ್ಷಿಧಾಮದಲ್ಲಿ ದೇಶ-ವಿದೇಶದಿಂದ 185ಕ್ಕೂ ಹೆಚ್ಚು ಪ್ರಭೇದ ಹಕ್ಕಿಗಳು ವಲಸೆ ಬರುತ್ತವೆ. ಅಹಾರಕ್ಕಾಗಿ ತುಂಗಭದ್ರಾ ಹಿನ್ನೀರು ಪ್ರದೇಶದ ಮೇಲೆ ಅವಲಂಬಿತವಾಗಿವೆ. ಜಲಾಶಯದ ಹಿನ್ನೀರು ಪ್ರದೇಶ ಹೊಸಪೇಟೆಯಿಂದ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿಯವರೆಗೆ ವ್ಯಾಪಿಸಿದೆ. ಈ ಭಾಗದಲ್ಲಿ ಅಂಕಸಮುದ್ರ ಪಕ್ಷಿಧಾಮ ಸೇರಿದಂತೆ ಹಲವು ಕೆರೆಗಳು ಪಕ್ಷಿಗಳ ಆಶ್ರಯ ತಾಣವಾಗಿವೆ. ಜಲಾಶಯ, ಕೆರೆಗಳಲ್ಲಿ ನೀರಿಲ್ಲದಿದ್ದರೂ ದೇಶ-ವಿದೇಶಿ ಪಕ್ಷಿಗಳು ಇಲ್ಲಿ ವಿಹರಿಸುವುದು ಸಾಮಾನ್ಯವಾಗಿದೆ. ಆದರೆ, ತುಂಗಭದ್ರಾ ನೀರಿನ ಅಂಗಳದಲ್ಲಿ ಅಲ್ಲಲ್ಲಿ ಪಕ್ಷಿಗಳು ಸತ್ತು ಬೀಳುತ್ತಿವೆ.

    ಹಿನ್ನೀರು ಪ್ರದೇಶದಲ್ಲಿ ಪಕ್ಷಿಗಳು ಸಾಯುತ್ತಿರುವ ದೃಶ್ಯಗಳು ಮನಕಲಕುವಂತಿದೆ. ಭೀಕರ ಬರದಲ್ಲಿ ನೀರು, ಅಹಾರವಿಲ್ಲದೆ ಪಕ್ಷಿಗಳ ಸಾವು ಸಹಜವೆನ್ನಬಹುದು. ಆದರೆ, ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಇದಾವುದಕ್ಕೂ ಕೊರತೆಯಿಲ್ಲ. ಆದರೆ, ಮಾಂಸದಾಸೆಗೆ ಬೇಟೆಗಾರರಿಂದ ವಿಶೇಷವಾಗಿ ಅಳಿವಿನಂಚಿನಲ್ಲಿರುವ ಅಪರೂಪದ ಹಕ್ಕಿಗಳು ಬಲಿಯಾಗುತ್ತಿವೆ. ಇದರ ಜತೆಗೆ ಕಲುಷಿತ ನೀರಿನಲ್ಲಿ ಸೋಂಕು ಹೆಚ್ಚಾದ ಪರಿಣಾಮವೂ ಪಕ್ಷಿಗಳ ಸಾವಿಗೆ ಕಾರಣವಾಗಿದೆ.

    ಜಲಾಶಯದ ಹಿನ್ನೀರು ಪ್ರದೇಶ, ಅಂಕಸಮುದ್ರ ಪಕ್ಷಿಧಾಮ ಸೇರಿದಂತೆ ಇತರೆ ಕೆರೆಗಳು ದೇಶ-ವಿದೇಶದ ಹಕ್ಕಿಗಳ ನೆಲಬೀಡಾಗುವ ಜತೆಗೆ ಜೀವವೈವಿಧ್ಯ ತಾಣವಾಗಿದೆ. ಈ ಪ್ರದೇಶದಲ್ಲಿ ಗ್ರೇಟರ್ ಕಾರ್ಮೊರೆಂಟ್, ಲಿಟಲ್ ಕಾರ್ಮೊರೆಂಟ್, ಓರಿಯಂಟಲ್ ಡಾರ್ಟರ್, ಗ್ರೇ ಹೆರಾನ್, ವಿಜಿಲಿಂಗ್ ಡಕ್, ಸ್ಪಾಟ್‌ಬಿಲ್ಡ್ ಡಕ್, ಕೂಂಬ್ ಡಕ್ ಸೇರಿ ಹಲವಾರು ಪ್ರಭೇದದ ಹಕ್ಕಿಗಳು ಇಲ್ಲಿಗೆ ಬಂದು ತೊಟ್ಟಿಲು ತೂಗುತ್ತವೆ. ಅಲ್ಲದೆ, ಹಲವು ಜಾತಿಯ ಮೀನು, ಚಿಟ್ಟೆಗಳಿವೆ. ಹಾವುಗಳು, ಜತೆಗೆ ನೀರುನಾಯಿಗಳು ಕಂಡುಬರುವ ಜೀವವೈವಿಧ್ಯತೆ ತಾಣವೆಂಬ ಹಿರಿಮೆ ಈ ಪ್ರದೇಶಕ್ಕಿದೆ. ಆದರೆ, ವಿಷ ಸೇವಿಸಿ ಪಕ್ಷಿಗಳು ವ ಸಾಯುತ್ತಿರುವುದು ದುರಂತದ ಸಂಗತಿ.

    ಪ್ರಾಣಿ ಪಕ್ಷಿಗಳನ್ನು ಸಾಯಿಸುವುದು ಅಪರಾಧ. ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದು.

    ಎಂ ಎಸ್ ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ

    ತುಂಗಭದ್ರಾ ಜಲಾಶಯದ ಎಣ್ಣೀರು ಪ್ರದೇಶ ಮತ್ತು ಅಂಕಸಮುದ್ರ ಪಕ್ಷಿಧಾಮ ಸೇರಿದಂತೆ ನಾನಾ ಕಡೆ ವಲಸೆ ಹಕ್ಕಿಗಳು ಬರುತ್ತವೆ. ಪಕ್ಷಿಗಳ ಬೇಟೆಯಾಡುವವರ ವಿರುದ್ಧ ನಿಗಾವಹಿಸಲಾಗಿದೆ. ಗಮನಕ್ಕೆ ಬಂದ್ರೆ ಇಲಾಖೆ ಮಾಹಿತಿ ನೀಡಬೇಕು. ಪಕ್ಷಿ ಬೇಟೆಯ ಅಕ್ಷಮ್ಮ. ಬೇಟೆಗಾರರ ವಿರುದ್ಧ ಮುಲಾಜಿಲ್ಲದೆ ಕ್ರಮ ಮುಂದಾಗುತ್ತೇವೆ.

    ಅರ್ಸಲಾನ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ವಿಜಯನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts