ಅಂದರೆ, "70 ಲಕ್ಷ ಖರ್ಚು ಮಾಡಿ, ಕೃಷ್ಣ ನೀ ಬೇಗನೆ ಬಾರೋ ಸಿನಿಮಾವನ್ನು ನಾನು ಸಿನಿಮಾಸ್ಕೋಪ್, 7.1 ಸೌಂಡ್ ಎಫೆಕ್ಟ್, ಡಿ ಐ, ಕಲರಿಂಗ್ ಎಲ್ಲಾ ಮಾಡಿಸಿ, ಹೊಚ್ಚ ಹೊಸ ಸಿನಿಮಾದ ಹಾಗೆ 150 ಚಿತ್ರಮಂದಿರಗಳಲ್ಲಿ ರೀ-ರಿಲೀಸ್ ಮಾಡುತ್ತೇನೆ. ಆಗ, ಈ ಸಿನಿಮಾ ಈಸ್ಟ್‌ಮನ್ ಕಲರ್ ಇತ್ತು. ಈಗಿನ ಟ್ರೆಂಡ್ ಇದೆಯಲ್ಲಾ ಹಾಗೇ ಸಿನಿಮಾಗಳನ್ನು ಮಾಡುತ್ತಿದ್ದೇನೆ. ಏಪ್ರಿಲ್ ಮೊದಲ ವಾರ ಅಥವಾ ಎರಡನೇ ವಾರ ಈ ಸಿನಿಮಾವನ್ನು ರೀ-ರಿಲೀಸ್ ಮಾಡುತ್ತಿದ್ದೇನೆ." ಎಂದು ತಿಳಿಸಿದರು ಮುನಿರಾಜು. ಅಂದಹಾಗೆ, "ನಾನು ಅಣ್ಣಾವ್ರ ಸಿನಿಮಾಗಳನ್ನು ರೀ-ರಿಲೀಸ್ ಮಾಡುತ್ತಿದ್ದೆ. ವಿಷ್ಣುವರ್ಧನ್ ಸಿನಿಮಾಗಳನ್ನು ರೀ-ರಿಲೀಸ್ ಮಾಡಬೇಕು ಅಂತ ಅಭಿಮಾನಿಗಳು ಕೇಳಿಕೊಂಡಿದ್ದರು. ಅವರಿಗಾಗಿ, ಈ ಸಿನಿಮಾಗೆ ಡಿಜಿಟಲ್ ಟಚ್ ಕೊಟ್ಟು ರಿಲೀಸ್ ಮಾಡುತ್ತಿದ್ದೇನೆ. ಅದ್ದೂರಿಯಾಗಿ ಬಿಡುಗಡೆ ಮಾಡುತ್ತಿದ್ದೇನೆ", ಎಂದು ಮುನಿರಾಜು ಹೇಳಿದ್ದಾರೆ.