More

    ಹಿಂದಿ ಚಿತ್ರಕ್ಕೆ ತೆರಿಗೆ ವಿನಾಯತಿ ನೀಡಿದ್ದೀರಿ, ‘ಜೇಮ್ಸ್’ಗೂ ನೀಡಿ: ಸಿಎಂಗೆ ಅಪ್ಪು ಅಭಿಮಾನಿಗಳ ಒತ್ತಾಯ

    ಬೆಂಗಳೂರು: ಪವರ್ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ ಹೀರೋ ಆಗಿ ಅಭಿನಯಿಸಿರುವ ಕೊನೆಯ ಸಿನಿಮಾ ಜೇಮ್ಸ್ಮೂರೇ ದಿನಗಳಲ್ಲಿ ತೆರೆಗಪ್ಪಳಿಸಲಿದೆ. ಈ ಚಿತ್ರವನ್ನು ಹಲವು ಅದ್ಧೂರಿ ರೀತಿಗಳಲ್ಲಿ ಅಭಿಮಾನಿಗಳು ಸ್ವಾಗತಿಸಲು ರೆಡಿಯಾಗಿದ್ದಾರೆ. ಅಂದಹಾಗೆ, ರಾಜ್ಯ ಸರ್ಕಾರ ನಿನ್ನೆಯಷ್ಟೆ ಹಿಂದಿ ಸಿನಿಮಾ ದಿ ಕಶ್ಮೀರ್ ಫೈಲ್ಸ್ಗೆ ತೆರಿಗೆ ವಿನಾಯಿತಿ ಘೋಷಿಸಿತ್ತು. ಹೀಗಾಗಿ, ‘ಜೇಮ್ಸ್ಚಿತ್ರದ ಮೇಲೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಅಪ್ಪು ಅಭಿಮಾನಿಗಳು ಸಿಎಂ ಬಸವರಾಜ ಬೊಮ್ಮಾಯಿ ಅವರ ಬಳಿ ಒಂದು ಮನವಿ ಮಾಡಿದ್ದಾರೆ.
    ಹೌದು, ಹಿಂದಿ ಚಿತ್ರಕ್ಕೆ ತೆರಿಗೆ ವಿನಾಯತಿ ನೀಡಿದ ಹಾಗೆ ಪುನೀತ್ ಗೌರವಾರ್ಥವಾಗಿ ಅವರ ಕೊನೆಯ ಸಿನಿಮಾ ಆದ ಜೇಮ್ಸ್ಗೂ ತೆರಿಗೆ ವಿನಾಯಿತಿ ನೀಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ಅಭಿಮಾನಿಗಳ ಬೇಡಿಕೆಯ ಮೂಲಕ ಜೇಮ್ಸ್‘ ಚಿತ್ರವನ್ನು ಕಡಿಮೆ ಟಿಕೆಟ್ ದರದಲ್ಲಿ ಹೆಚ್ಚಿನ ಮಂದಿ ನೋಡುವಂತಾಗಬೇಕು. ಸರ್ಕಾರ ಈ ಹಿಂದೆ ಹಲವು ಕನ್ನಡ ಸಿನಿಮಾಗಳಿಗೆ ತೆರಿಗೆ ವಿನಾಯಿತಿ ಘೋಷಿಸಿದೆ. ಹೌದು, ಶೈಕ್ಷಣಿಕ-ಐತಿಹಾಸಿಕ ಸಿನಿಮಾಗಳಿಗೆ ತೆರಿಗೆ ವಿನಾಯಿತಿಯ ಲಾಭ ದೊರೆಕುವುದು ಸಹಜ. ಆದರೆ, ವಾಣಿಜ್ಯ ಚಿತ್ರಗಳಿಗೆ ತೆರಿಗೆ ವಿನಾಯಿತಿ ದೊರೆತಿದ್ದೆ ಇಲ್ಲ.
    ಅಂದಹಾಗೆ, ನಟ ಪುನೀತ್ ರಾಜ್‌ಕುಮಾರ್ ಅವರು ಸರ್ಕಾರದ ಯಾವುದೇ ಜಾಹೀರಾತುಗಳಿಗೆ ಸಂಭಾವನೆ ಪಡೆಯದೆ ಉಚಿತವಾಗಿ ಅಭಿನಯಿಸಿ ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪಿಸುವ ಕಾರ್ಯಕ್ಕೆ ನೆರವಾಗಿದ್ದರು. ಇದೇ ಆಧಾರದಲ್ಲಿ ಅವರ ಕೊನೆಯ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಬೇಕೆಂಬುದು ಅಭಿಮಾನಿಗಳ ಒತ್ತಾಯ. ಇನ್ನು, ಸರ್ಕಾರ ಹಾಗೂ ವಿಶೇಷವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೂಡಾ ಪುನೀತ್ ರಾಜ್​ಕುಮಾರ್ ಅವರ ಬಗ್ಗೆ ಬಹಳ ಅಕ್ಕರೆ, ಪ್ರೀತಿ ಇದೆ.
    ಇನ್ನು, ಅಪ್ಪು ಅಗಲಿದ ಸಂದರ್ಭದಲ್ಲಿ ಸಹ ಸರ್ಕಾರ ದೊಡ್ಡ ಮಟ್ಟದಲ್ಲಿ ನೆರವು ನೀಡಿದ್ದು, ಸಿಎಂ ಅವರು ಪುನೀತ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನಪ್ರಶಸ್ತಿ ಘೋಷಿಸಿದ್ದರು. ನಂತರ, ಬೆಂಗಳೂರಿನಲ್ಲಿ 12 ಕಿಮಿ ಉದ್ದದ ರಸ್ತೆಗೆ ಶ್ರೀ ಪುನೀತ್ ರಾಜ್​ಕುಮಾರ್ ರಸ್ತೆ ಎಂದು ನಾಮಕರಣ ಮಾಡಲು ಒಪ್ಪಿಗೆ ಸೂಚಿಸಿದರು. ಹೀಗಾಗಿ, ‘ಜೇಮ್ಸ್ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡುವ ಮೂಲಕ ಮತ್ತೊಮ್ಮೆ ಅಪ್ಪುಗೆ ಗೌರವ ಸಲ್ಲಿಸುತ್ತಾರಾ ಸಿಎಂ ಎಂಬುದನ್ನು ಕಾದು ನೋಡಬೇಕಿದೆ.

    The Kashmir Filesಗೆ ತೆರಿಗೆ ವಿನಾಯತಿ ನೀಡಿದ ಸಿಎಂ, ಸ್ಪೀಕರ್ ವತಿಯಿಂದ ಸಚಿವರು-ಶಾಸಕರಿಗೆ ಸ್ಪೆಷಲ್ ಶೋ!

    ನಾನು ತುಂಬ ಲಕ್ಕಿ, ವಿಚ್ಛೇದನವಾದರೂ ಈಗಲೂ ಇಬ್ಬರು ಪತ್ನಿಯರೂ ನನ್ನ ಜತೆಗಿದ್ದಾರೆ: ಅಮಿರ್ ಖಾನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts