More

    ನಾನು ತುಂಬ ಲಕ್ಕಿ, ವಿಚ್ಛೇದನವಾದರೂ ಈಗಲೂ ಇಬ್ಬರು ಪತ್ನಿಯರೂ ನನ್ನ ಜತೆಗಿದ್ದಾರೆ: ಅಮಿರ್ ಖಾನ್

    ಮುಂಬೈ: ಬಾಲಿವುಡ್ ನಟ ಆಮಿರ್ ಖಾನ್ ಕೇವಲ ತಮ್ಮ ಸಿನಿಮಾಗಳಿಂದ ಅಲ್ಲದೇ ಅವರ ವೈಯಕ್ತಿಕ ಜೀವನದ ಹಲವು ಕಾರಣಗಳಿಂದಲೂ ಬಹಳಷ್ಟು ಬಾರಿ ಸುದ್ದಿಯಲ್ಲಿರುತ್ತಾರೆ. ಈಗಾಗಲೇ, ನಟ ಆಮಿರ್​ಗೆ ಎರಡು ಬಾರಿ ಮದುವೆಯಾಗಿ ವಿಚ್ಛೇದನವೂ ಪಡೆದಿದ್ದಾರೆ. ಹೌದು, ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಎರಡನೇ ಪತ್ನಿ ಕಿರಣ್ ರಾವ್ ಅವರಿಂದ ಆಮಿರ್ ವಿಚ್ಛೇದನ ಪಡೆದಿದ್ದು, ಅದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಹೌದು, 15 ವರ್ಷಗಳು ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿದ್ದ ಈ ದಂಪತಿ ನಡುವೆ ಅದೆಂಥ ಮನಸ್ತಾಪ ಮೂಡಿತು ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡಿತು. ಆಮಿರ್ ಬೇರೆ ಹುಡುಗಿ ಜೊತೆ ಡೇಟಿಂಗ್​ ಮಾಡುತ್ತಿರುವುದೇ ಈ ಡಿವೋರ್ಸ್​ಗೆ ಕಾರಣ ಎಂಬ ಸುದ್ದಿಗಳು ಹರಿದಾಡಿದ್ದರವು. ಆದರೆ, ಸದ್ಯ ಅಮಿರ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮನಸ್ಸು ಬಿಚ್ಚಿ ಸಂದರ್ಶನವೊಂದರಲ್ಲಿ ಮಾತಾಡಿದ್ದಾರೆ.
    ಅಂದಹಾಗೆ, ಅಮಿರ್ ನಟಿಸಿರುವ ‘ಲಾಲ್ ಸಿಂಗ್ ಛಡ್ಡಾ’ ಚಿತ್ರ ರಿಲೀಸ್​ಗೆ ರೆಡಿಯಾಗಿದೆ. ಹಾಗಾಗಿ, ಸಿನಿಮಾದ ರಿಲೀಸ್ ಕುರಿತು ಒಂದು ಮಾಧ್ಯಮದಲ್ಲಿ ನೀಡಿದ ಸಂದರ್ಶನದಲ್ಲಿ ನಟ ಎರಡು ಡಿವೋರ್ಸ್​ಗಳ ಬಗ್ಗೆ ಎದ್ದ ಪ್ರಶ್ನೆಗಳಿಗೆ ಉತ್ತರಿಸಿ ಜೆತೆಗೆ ಅನೇಕ ಬೇರೆ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ. ತಮ್ಮ ಇಷ್ಟು ದಿನದ ಮೌನ ಮುರಿದ ಅಮಿರ್ ಖಾನ್, ”ಕಿರಣ್ ಮತ್ತು ನನ್ನ ನಡುವೆ ಪ್ರೀತಿ ಇದೆ. ಪರಸ್ಪರ ಗೌರವ ಇದೆ. ಈ ಸಂಬಂಧವನ್ನು ಜನರು ಅರ್ಥ ಮಾಡಿಕೊಳ್ಳೋಕೆ ಆಗಲ್ಲ. ಯಾಕೆಂದರೆ ಬೇರ್ಪಟ್ಟ ಬಳಿಕ ಯಾವುದೇ ಜೋಡಿಯ ನಡುವೆ ಈ ರೀತಿ ಸಂಬಂಧ ಇರುವುದಿಲ್ಲ. ಆದರೆ, ಗಂಡಹೆಂಡತಿ ರೂಪದಲ್ಲಿ ನಮ್ಮ ಸಂಬಂಧ ಇಲ್ಲ. ನಾವು ಒಂದೇ ಕುಟುಂಬದವರ ರೀತಿ ಇದ್ದೇವೆ. ಅವರು ನಮ್ಮದೇ ಬಿಲ್ಡಿಂಗ್​ನ ಇನ್ನೊಂದು ಫ್ಲೋರ್​ನಲ್ಲಿ ವಾಸವಾಗಿದ್ದಾರೆ’ ಎಂದು ತಮ್ಮ ಎರಡನೇ ಪತ್ನಿಯ ಬಗ್ಗೆ ಆಮಿರ್ ಖಾನ್ ಹೇಳಿದ್ದಾರೆ.
    ಇನ್ನು, ತಮ್ಮ ಮೊದಲ ಪತ್ನಿ ರೀನಾ ದತ್ತ ಬಗ್ಗೆಯೂ ಆಮಿರ್ ಮಾತಾಡಿದ್ದಾರೆ. 1986 ರಲ್ಲಿ ರೀನಾ ದತ್ತ ಅವರನ್ನು ಮದುವೆ ಮಾಡಿಕೊಂಡಿದ್ದ ಅಮಿರ್ ಖಾನ್ 2002 ರಲ್ಲಿ ವಿಚ್ಛೇದನ ಪಡೆದುಕೊಂಡರು. ”ನಾನು ತುಂಬ ಲಕ್ಕಿ. ನನ್ನ ಮೊದಲ ಹೆಂಡತಿ ರೀನಾ ಮತ್ತು ನಾನು ಆ ಸಮಯದಲ್ಲಿ ಚಿಕ್ಕವರಾಗಿದ್ದೆವು. ಇಬ್ಬರೂ ಜೊತೆಯಾಗಿ ಬೆಳೆದೆವು. ಪರಸ್ಪರ ಬೇರೆ ಆದ ಬಳಿಕವೂ ನಾವು ಜೊತೆಯಾಗಿ ಇದ್ದೇವೆಎಂದು ಮೊದಲ ಪತ್ನಿಯ ಬಗ್ಗೆ ನಟ ಆಮಿರ್ ಖಾನ್ ಹೇಳಿದ್ದಾರೆ. ಮೊದಲ ಪತ್ನಿ ರೀನಾ ದತ್ತ ಅವರಿಂದ ಸಾರಾ ಖಾನ್ ಮತ್ತು ಜುನೈದ್ ಖಾನ್ ಎಂಬ ಇಬ್ಬರು ಮಕ್ಕಳು ಅಮಿರ್ ಖಾನ್​ಗಿದ್ದಾರೆ. ಎರಡನೇ ಪತ್ನಿ ಕಿರಣ್ ರಾವ್ ಅವರಿಗೆ ಕೂಡಾ ಒಬ್ಬ ಮಗನಿದ್ದು ಅವರ ಹೆಸರು ಆಜಾದ್ ರಾವ್ ಖಾನ್. ಜತೆಗೆ, ”ಇಬ್ಬರು ಪತ್ನಿಯರಿಂದ ವಿಚ್ಛೇದನ ಪಡೆಯಲು, ಮೂರನೇ ವ್ಯಕ್ತಿಗಳು ಕಾರಣ ಅಲ್ಲಎಂದು ಸಹ ನಟ ಆಮಿರ್ ಖಾನ್ ಹೇಳಿದ್ದಾರೆ.

    100 ಎಕರೆ, 52,000 ಅಡಿಯ ಎಲ್​ಇಡಿ ಸ್ಕ್ರೀನ್! RRR ಪ್ರೀ-ರಿಲೀಸ್ ಇವೆಂಟ್​ನ ವಿಶೇಷತೆ, ಅತಿಥಿಗಳು ಯಾರು?

    #AppuLivesOn: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊಳಗಿದ ‘ನೀನೇ ರಾಜಕುಮಾರ’! ವಿಡಿಯೋ ವೈರಲ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts