ಬಂಟ್ವಾಳ: ಕೊಳವೆಬಾವಿ ಕೊರೆಯುವ ಯಂತ್ರವಿರುವ ಘನಗಾತ್ರದ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಚಾಲಕ ಮೃತಪಟ್ಟು,ಸಹಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಅಲ್ಲಿಪಾದೆಯಲ್ಲಿ ರಾತ್ರಿ ವೇಳೆ ನಡೆದಿದೆ.
ನಾವೂರ ಸಮೀಪದ ಪರಾರಿ ಜಯಪೂಜಾರಿ ( 55) ಮೃತಪಟ್ಟ ವ್ಯಕ್ತಿಯಾಗಿದ್ದು,ಇವರ ಮಗ ರಕ್ಷಿತ್ ಸಹಸವಾರನಾಗಿದ್ದು,ಈತನಿಗೆ ಗಾಯವಾಗಿದ್ದು,ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಕೂಟರ್ ನಲ್ಲಿ ತಂದೆ ಮಗ ಸಂಚಾರ ಮಾಡುತ್ತಿರುವ ವೇಳೆ ಲಾರಿ ಡಿಕ್ಕಿಯಾಗಿದೆ ಎಂದು ಹೇಳಲಾಗಿದೆ. ಅತೀವೇಗ ಮತ್ತು ನಿರ್ಲಕ್ಷ್ಯ ತನದ ಚಾಲನೆಯೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಸ್ಥಳಕ್ಕೆ ಟ್ರಾಫಿಕ್ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
TAGGED:Police