ನವದೆಹಲಿ: ದೇಶದ ಉತ್ತರ ರಾಜ್ಯಗಳಲ್ಲಿ ಈ ಬಾರಿ ಬಿಸಿಗಾಳಿಗೆ ಜನ ತತ್ತರಿಸಿ ಹೋಗಿದ್ದಾರೆ. ದೆಹಲಿ, ಪಂಜಾಬ್ ಮತ್ತು ಹರಿಯಾಣ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇದರಿಂದ ಆ ಭಾಗದ ಜನರು ಹೊರಗೆ ಬರಲು ಭಯಪಡುತ್ತಿದ್ದಾರೆ. ಆದರೆ ಎಷ್ಟೇ ಮಳೆ, ಗಾಳಿ, ರಣಬಿಸಿಲಿದ್ದರೂ ಟ್ರಾಫಿಕ್ ಪೊಲೀಸರು ಮಾತ್ರ ರಸ್ತೆಗಳಲ್ಲಿ ನಿಂತೇ ಕರ್ತವ್ಯ ನಿರ್ವಹಿಸಬೇಕಾಗಿದೆ. ಅವರ ಕಷ್ಟ ಅರಿತು ವಿಶೇಷವಾದ ಎಸಿ ಜಾಕೆಟ್‌ಗಳನ್ನು ಒದಗಿಸಲಾಗಿದೆ. ಇವುಗಳನ್ನು ಧರಿಸುವುದರಿಂದ ಬಿಸಿಲಿನ ತಾಪದಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ಅಧಿಕಾರಿಗಳು.
ಇದನ್ನೂ ಓದಿ: ತಿರುಪತ್ತೂರಿನ ಶಾಲೆಗೆ ಬಂದ ಚಿರತೆ..! ಬಳಿಕ ನಡೆದಿದ್ದೇನು?
ದೆಹಲಿ ಬಳಿಯ ಗುರುಗಾಂವ್ನಲ್ಲಿ ಸಂಚಾರಿ ಪೊಲೀಸರಿಗೆ ಈ ಕೂಲಿಂಗ್ ಜಾಕೆಟ್‌ಗಳನ್ನು ವಿತರಿಸಲಾಗಿದೆ. ಹೀಗಾಗಿ ಈಗ ಪೊಲೀಸ್ ಸಿಬ್ಬಂದಿ ಈ ಜಾಕೆಟ್ ಧರಿಸಿ ಕೂಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಜಾಕೆಟ್ ಈ ಬೇಸಿಗೆಯಲ್ಲಿ ಸೂರ್ಯನ ಶಾಖದಿಂದ ರಕ್ಷಿಸುತ್ತದೆ. ಈ ಜಾಕೆಟ್ ನ ವಿಶೇಷತೆ ಎಂದರೆ 8 ಗಂಟೆಗಳ ಕಾಲ ಆರಾಮದಾಯಕ ತಾಪಮಾನವನ್ನು ಕಾಯ್ದುಕೊಳ್ಳಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಜಾಕೆಟ್ ಒಳಗೆ ಅಂಗಿಯೊಂದಿಗೆ ಧರಿಸಬೇಕು ಎಂದು ಹೇಳಲಾಗಿದೆ.
#WATCH | Gurugram: Gurugram Police wear cooling jackets to beat the heat as the heat wave continues across the nation. pic.twitter.com/xKLiElzyOm
— ANI (@ANI) June 15, 2024
ಈ ಜಾಕೆಟ್ ಎರಡು ಸಣ್ಣ ಫ್ಯಾನ್ಗಳನ್ನು ಹೊಂದಿದೆ. ಈ ಜಾಕೆಟ್ ಕಿಟ್‌ನ ಒಟ್ಟು ತೂಕ 500 ಗ್ರಾಂ. ಇದು ಲಿ-ಐಯಾನ್ ಬ್ಯಾಟರಿಯನ್ನು ಸಹ ಹೊಂದಿದೆ. ಈ ಜಾಕೆಟ್ ಪಿಸಿಎಂ ತಂತ್ರಜ್ಞಾನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಈ ತಂತ್ರಜ್ಞಾನದೊಂದಿಗೆ 15 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ತಾಪಮಾನವನ್ನು ಒದಗಿಸುತ್ತದೆ.
ಜಾಕೆಟ್‌ಗಳಿಗಾಗಿ ತಯಾರಿಸಲಾದ ಪಿಸಿಎಂ ಪೌಚ್‌ಗಳನ್ನು ರೆಫ್ರಿಜರೇಟರ್‌ನಲ್ಲಿ ಇರಿಸುವ ಮೂಲಕ ಸುಲಭವಾಗಿ ರೀಚಾರ್ಜ್ ಮಾಡಬಹುದು. ಆದರೆ, ಈ ಜಾಕೆಟ್ ಗಳ ಬಗ್ಗೆ ತಿಳಿದ ಹಲವರು ಈ ಐಡಿಯಾ ಕೆಟ್ಟದ್ದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ನಮಗೂ ಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅವುಗಳನ್ನು ಎಲ್ಲಿ ತಯಾರಿಸಲಾಗುತ್ತದೆ ಮತ್ತು ಹೇಗೆ ತೆಗೆದುಕೊಳ್ಳುವುದು ಎಂದು ಅವರು ಕೇಳುತ್ತಿದ್ದಾರೆ.
ಶಾರ್ವರಿ ದೃಢಹೆಜ್ಜೆ..ಮಹಿಳಾ ಪ್ರಧಾನ ಚಿತ್ರದಲ್ಲಿ ಆಲಿಯಾ ಭಟ್ಗೆ ಸಾಥ್!