More

    ಮನಸ್ಸಿನ ಏಕಾಗ್ರತೆ ಅವಶ್ಯಕ

    ದಾವಣಗೆರೆ : ಚಂಚಲ ಮನಸ್ಸು ಸತ್ಯವನ್ನು ಗ್ರಹಿಸಲು ಸಾಧ್ಯವಿಲ್ಲ. ಸತ್ಯವನ್ನು ಗ್ರಹಿಸದೆ ಪರಮಾತ್ಮನನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಚಿತ್ತದ ಏಕಾಗ್ರತೆಯೆ ಇದಕ್ಕೆ ಪರಿಹಾರ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಹೇಳಿದರು.
     ಸಾಲಿಗ್ರಾಮ ಕೂಟ ಮಹಾ ಜಗತ್ತಿನ ದಾವಣಗೆರೆ ಅಂಗ ಸಂಸ್ಥೆ ವತಿಯಿಂದ ನಗರದ ಶ್ರೀ ಕೃಷ್ಣ ಕಲಾಮಂದಿರದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಶ್ರೀ ನರಸಿಂಹ ಜಯಂತಿ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಉಪನ್ಯಾಸ ನೀಡಿದರು.
     ಶಾಸ್ತ್ರಾಧ್ಯಯನ, ಭಕ್ತಿ ಸಮರ್ಪಣೆ, ಭಗವದ್ ಸಾಕ್ಷಾತ್ಕಾರ, ಸತ್ಯಾನ್ವೇಷಣೆ ಇದೆಲ್ಲದಕ್ಕೂ ಚಿತ್ತ ಏಕಾಗ್ರತೆ ಅವಶ್ಯಕ. ಇದು ಉಂಟಾದಾಗ ಯಾವುದೂ ಕಷ್ಟ ಎನಿಸುವುದಿಲ್ಲ ಎಂದರು.
     ಅಧ್ಯಯನ, ಧ್ಯಾನ, ಆರಾಧನೆ, ಭಜನೆ, ಶ್ರವಣ ಇದೆಲ್ಲವೂ ಏಕಾಗ್ರತೆಯಿಂದ ಮಾತ್ರ ಮನನ ಸಾಧ್ಯ ಎಂಬುದನ್ನು ಅವರು ಸ್ವಾರಸ್ಯಕರ ಉದಾಹರಣೆಗಳ ಸಹಿತ ವಿವರಿಸಿದರು.
     ಕೂಟ ಮಹಾ ಜಗತ್ತು ದಾವಣಗೆರೆ ಅಂಗಸಂಸ್ಥೆಯ ನೂತನ ಅಧ್ಯಕ್ಷ ಮೋತಿ ಎನ್. ರಾಘವೇಂದ್ರ, ಪದಾಧಿಕಾರಿಗಳಾದ ಕೆ. ಶಿವರಾಮ ಕಾರಂತ, ಬಾಲಕೃಷ್ಣ ವೈದ್ಯ, ಸುಬ್ರಹ್ಮಣ್ಯ ಹೊಳ್ಳ, ಶ್ರೀನಿವಾಸ ಕಾರಂತ, ಮೋತಿ ಪಿ. ಪರಮೇಶ್ವರ್ ರಾವ್, ಕೇಶವಮೂರ್ತಿ ಕಾರಂತ, ಮೋತಿ ಆರ್. ಸುಬ್ರಮಣ್ಯ, ಗುರು ಪ್ರಸಾದ್ ಭಾಗವಹಿಸಿದ್ದರು.
     ರೋಹಿಣಿ ಹೊಳ್ಳ ಮತ್ತು ಸಂಗಡಿಗರು ಭಜನೆ ನೆರವೇರಿಸಿದರು. ಹರೀಶ್ ಹೊಳ್ಳ ಮತ್ತು ಇತರರು ಪೂಜೆಯನ್ನು, ಹರೀಶ್ ಐತಾಳ್ ತಂಡದವರು ಚಂಡೆ ಸೇವೆಯನ್ನು ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts