ಆಂಧ್ರ ಪ್ರದೇಶದ, ಕರ್ನೂಲಿನ 24 ವರ್ಷದ ರವಿ ತೇಜ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಭಾಸ್ ಕಟ್ಟಾಭಿಮಾನಿ ಎಂದು ಗುರುತಿಸಲಾಗಿದೆ. ಹೌದು, ದಕ್ಷಿಣ ಭಾರತದ ಬಾಹುಬಲಿ, ನಟ ಡಾರ್ಲಿಂಗ್ ಪ್ರಭಾಸ್ ಅಭಿನಯದ 'ಸಾಹೋ' ಸಿನಿಮಾದಲ್ಲಿ ಒಂದು ಡೈಲಾಗ್ ಇದೆ. ತಮ್ಮತ್ತ ಗುಂಡು ಹಾರಿಸುತ್ತಿರುವವರ ಕುರಿತು ನಟಿ ಶ್ರದ್ಧಾ ಕಪೂರ್ ಪ್ರಭಾಸ್ ಅವರನ್ನು 'ಯಾರವರು?' ಎಂದು ಕೇಳುತ್ತಾರೆ. ಅದಕ್ಕೆ, ಪ್ರಭಾಸ್ ಅವರು 'ನನ್ನ ಫ್ಯಾನ್ಸ್' ಎನ್ನುತ್ತಾರೆ. ಇನ್ನು, ನಟಿ 'ಇಷ್ಟೊಂದು ವೈಯಲೆಂಟ್ ಅಭಿಮಾನಿಗಳಾ?' ಎಂದು ಕೇಳಿದಾಗ, 'ಅವರು ನನ್ನ ಡೈ ಹಾರ್ಡ್ ಫ್ಯಾನ್ಸ್' ಎನ್ನುತ್ತಾರೆ ಡಾರ್ಲಿಂಗ್. ಈ ಡೈಲಾಗ್ನಂತೆಯೇ ಪ್ರಭಾಸ್ ಅವರ ಅಭಿಮಾನಿ ಅತ್ಮಹತ್ಯೆ ಮಾಡಿಕೊಂಡಿರುವುದು ಸದ್ಯ ಎಲ್ಲರನ್ನೂ ಶಾಕ್ ಮಾಡಿದೆ. ಕರ್ನೂಲಿನ ತಿಲಕ್ ನಗರದ ನಿವಾಸಿಯಾಗಿದ್ದ 24 ವರ್ಷದ ರವಿ ತೇಜ ಆತ್ಮಹತ್ಯೆ ಮಾಡಿಕೊಂಡು ತನ್ನ ಕುಟುಂಬವನ್ನು ಶೋಕ ಸಾಗರಕ್ಕೆ ದೂಡಿದ್ದಾನೆ.