ನಟ, ನಿರ್ದೇಶಕ ಕಿರಣ್​ ಶ್ರೀನಿವಾಸ್​ಗೆ ಮೋಸ ! 'ಸ್ನೇಹರ್ಷಿ' ಚಿತ್ರದ ಕೆಲ ಕಲಾವಿದರ ವಿರುದ್ಧ ನಟನ ಆರೋಪವೇನು?

IMG_2508
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಕಿರಣ್ ನಾರಾಯಣ್ ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಸಿನಿಮಾ ‘ಸ್ನೇಹರ್ಷಿ’. ಕರೊನಾ ಮೊದಲೇ ಸಿನಿಮಾ ಪ್ರಾರಂಭವಾಗಿದ್ದರೂ, ಲಾಕ್‌ಡೌನ್ ಹೊಡೆತದಿಂದ ಚೇತರಿಸಿಕೊಂಡು ಈಗ ಬಿಡುಗಡೆಗೆ ರೆಡಿಯಾಗಿದೆ.

‘ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ಆಗಬೇಕಿತ್ತು. ಕರೊನಾ ಲಾಕ್‌ಡೌನ್ ಬಳಿಕ ಚಿತ್ರತಂಡದಲ್ಲಿದ್ದ ಕೆಲವರ ಮೋಸ, ಕೆಲ ಕಲಾವಿದರು ಮತ್ತು ತಂತ್ರಜ್ಞರ ಅಸಹಕಾರ ಸೇರಿ ಹಲವು ಕಾರಣಗಳಿಂದ ‘ಸ್ನೇಹರ್ಷಿ’ ಬಿಡುಗಡೆ ತಡವಾಯಿತು’ ಎಂದು ಬೇಸರದಿಂದ ಹೇಳಿಕೊಳ್ಳುತ್ತಾರೆ ಕಿರಣ್ ಶ್ರೀನಿವಾಸ್. ಚಿತ್ರದಲ್ಲಿ ಪ್ರತಿನಿತ್ಯ ಎಲ್ಲರೂ ಅನುಭವಿಸುವ ಆದರೆ ಯಾರೂ ಮುಕ್ತವಾಗಿ ಹೇಳಿಕೊಳ್ಳದ ಸಮಸ್ಯೆಯ ಕುರಿತು ಚಿತ್ರದಲ್ಲಿ ಬೆಳಕು ಚೆಲ್ಲಿದ್ದಾರಂತೆ ಕಿರಣ್.

ನಗರಗಳಲ್ಲಿ ಜನರು ಎದುರಿಸುವ ಬ್ಲೂ ಕಾಲರ್ ಪ್ರಾಬ್ಲಂ ಸುತ್ತ ಕಥೆ ಸಾಗುತ್ತದೆ. ಚಿತ್ರದಲ್ಲಿ ಕಿರಣ್‌ಗೆ ಯುವನಟಿ ಸಂಜನಾ ನಾಯಕಿಯಾಗಿದ್ದು, ಸುಧಾ ಬೆಳವಾಡಿ, ನಾಗತಿಹಳ್ಳಿ ಜಯಪ್ರಕಾಶ್, ರಂಗನಾಥ್ ಸಂಪತ್, ಉಮೇಶ್, ಚಕ್ರವರ್ತಿ, ದೇವಕಿ, ಸೌಮ್ಯ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ನಾಗತಿಹಳ್ಳಿ ಪ್ರತಿಭಾ ಕಥೆ ಬರೆದಿದ್ದು, ರವಿ ಕಿಶೋರ್ ಛಾಯಾಗ್ರಹಣ, ಆಕಾಶ್ ಸಂಗೀತ, ಶ್ರೀಕಾಂತ್ ಸಂಕಲನವಿರುವ ‘ಸ್ನೇಹರ್ಷಿ’ ಇದೇ ತಿಂಗಳ 14ರಂದು ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net