More

    ಲಾಸ್ ಏಂಜಲೀಸ್‌ನ ಅಕಾಡೆಮಿ ಮ್ಯೂಸಿಯಂ ಗಾಲಾದಲ್ಲಿ ಸಖತ್​​​ ಹಾಟ್​​ ಆಗಿ ಕಾಣಿಸಿಕೊಂಡ ಬಾಲಿವುಡ್​​​ ನಟಿ ದೀಪಿಕಾ; ಇನ್ಸ್​​ಟಾಗ್ರಾಂ ಫೋಟೋಸ್​​​ ವೈರಲ್​..!

    ದೀಪಿಕಾ ಪಡುಕೋಣೆ ಸ್ಟೈಲ್​​ಗೆ ತುಂಬಾನೆ ಫ್ಯಾನ್​ ಫಾಲೋವರ್ಸ್​​ ಇದ್ದಾರೆ. ಇದೀಗ ಬಾಲಿವುಡ್ ಬ್ಯೂಟಿ ದೀಪಿಕಾ ಮತ್ತೆ ತಮ್ಮ ಫ್ಯಾಷನ್​ ಸೆನ್ಸ್​​ಗಾಗಿ ಸುದ್ದಿಯಲ್ಲಿದ್ದಾರೆ. ನಟಿ ಲಾಸ್ ಏಂಜಲೀಸ್‌ನ ಅಕಾಡೆಮಿ ಮ್ಯೂಸಿಯಂ ಗಾಲಾದಲ್ಲಿ ಭಾಗವಹಿಸಿ ವರ್ಷದ ಕೊನೆಯಲ್ಲಿ ಮತ್ತೊಮ್ಮೆ ತಮ್ಮ ಫ್ಯಾಷನ್​​ಗಾಗಿಯೇ ಸುದ್ದಿಯಲ್ಲಿದ್ದಾರೆ.


    ಅಕಾಡೆಮಿ ಮ್ಯೂಸಿಯಂ ಗಾಲಾ ಆಸ್ಕರ್ ನಂತರ ವಿಶ್ವದ ಎರಡನೇ ಅತಿದೊಡ್ಡ ವೇದಿಕೆಯಾಗಿದ್ದು, ಈ ವೇದಿಕೆಯಲ್ಲಿ ದೀಪಿಕಾ ಸಖತ್​​​ ಹಾಟ್​​ ಆಗಿ ಕಾಣಿಸಿಕೊಂಡಿದ್ದಾರೆ.


    ದೀಪಿಕಾ ಪಡುಕೋಣೆ ನೀಲಿ ವೆಲ್ವೆಟ್ ಗೌನ್​​​​ನಲ್ಲಿ ಸ್ಟನ್ನಿಂಗ್​​ ಆಗಿ ಕಾಣಿಸಿಕೊಂಡಿದ್ದು, ದೀಪಿಕಾ ಲುಕ್ಸ್​​​ಗೆ ಫ್ಯಾನ್ಸ್​​ ಫಿದಾ ಆಗಿದ್ದಾರೆ. ಒನ್-ಶೋಲ್ಡರ್ ಗೌನ್ ಅನ್ನು ದೀಪಿಕಾ ಧರಿಸಿದ್ದು, ಸದ್ಯ ಆಕೆ ಈ ಗೌನ್​ನಲ್ಲಿ ಮಿಂಚಿರುವ ಪೋಟೋಗಳು ಸೋಷಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.


    ಲಿಯೊನಾರ್ಡೊ ಡಿಕಾಪ್ರಿಯೊ, ಲುಪಿಟಾ ನ್ಯೊಂಗೊ, ಡುವಾ ಲಿಪಾ, ಸೆಲೆನಾ ಗೊಮೆಜ್, ಓಪ್ರಾ ವಿನ್‌ಫ್ರೇ, ಮೆರಿಲ್ ಸ್ಟ್ರೀಪ್, ಹೈಲಿ ಬೈಬರ್, ಡೆಮಿ ಮೂರ್, ಕೆಂಡಾಲ್ ಜೆನ್ನರ್ ಮತ್ತು ಅನೇಕ ಹಾಲಿವುಡ್ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್‌ನಲ್ಲಿ ಈ ಹಿಂದೆ ಕ್ಯಾಮೆರಾಗೆ ಪೋಸ್​​ ಕೊಟ್ಟಿದ್ದು, ಇದೀಗ ಬಾಲಿವುಡ್​​ ನಟಿ ದೀಪಿಕಾ, ಮತ್ತೊಮ್ಮೆ ತಮ್ಮ ಫ್ಯಾಷನ್​​ ಸೆನ್ಸ್​​​ಗೆ ಸುದ್ದಿಯಲ್ಲಿದ್ದಾರೆ.


    ದೀಪಿಕಾ ಪಡುಕೋಣೆ ತಮ್ಮ ಇನ್ಸ್​​​ಟಾಗ್ರಾಂ ಖಾತೆಯಲ್ಲಿ ಈ ಪೋಟೋಗಳನ್ನ ಹಂಚಿಕೊಂಡಿದ್ದು, ಅಭಿಮಾನಿಗಳು ದೀಪಿಕಾ ಫೋಟೋಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್​​ ಮಾಡುತ್ತಿದ್ದಾರೆ.


    ಇತ್ತೀಚೆಗೆ ಲಂಡನ್​ಗೆ ತೆರಳಿದ್ದ ದೀಪಿಕಾ, ತಮ್ಮ ಸ್ನೇಹಿತರ ಜೊತೆ ಸ್ವಲ್ಪ ಸಮಯ ಕಳೆದು ತಮ್ಮ ಟ್ರಿಪ್​​​ನ ಪೋಟೋಗಳನ್ನೂ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts