More

    ಫ್ರೇಯ್ಡ್ ಹೆಮ್ ಕಾರ್ಸೆಟ್ ಟಾಪ್ ಮತ್ತು ಹೈ-ವೇಸ್ಟ್ಡ್ ಪ್ಯಾಂಟ್​​​ ತೊಟ್ಟು ಹೊಸ ಟ್ರೆಂಡ್​​​​ ಸೆಟ್​​ ಮಾಡಿದ ಅನನ್ಯಾ ಪಾಂಡೆ..!

    ಫ್ಯಾಷನ್ ಐಕಾನ್ ಅನನ್ಯ ಪಾಂಡೆ ಪೋಟೋಸ್​​ ಇದೀಗ ಸೋಷಿಯಲ್​​ ಮೀಡಿಯಾದಲ್ಲಿ ಸಖತ್​​ ವೈರಲ್​ ಆಗುತ್ತಿದೆ. ಅನನ್ಯಾ ಪಾಂಡೆ ಒಂದಿಲ್ಲೊಂದು ಫ್ಯಾಷನ್ ಸೆನ್ಸ್​​ಗಾಗಿಯೇ ಸದಾ ಸುದ್ದಿಯಲ್ಲಿರ್ತಾರೆ. ಇದೀಗ ಕ್ರೀಮಿಶ್​ ಬಣ್ಣದ ಡ್ರೆಸ್​​​ನಲ್ಲಿ ಅನನ್ಯಾ ಕ್ಯಾಮೆರಾಗೆ ಪೋಸ್​​ ಕೊಟ್ಟ ಪೋಟೋಗಳು ಸಖತ್​​ ವೈರಲ್​ ಆಗಿವೆ.


    ಅನನ್ಯಾ ಪಾಂಡೆ ಸುಂದರವಾದ ಕಾರ್ಸೆಟ್​ ಟಾಪನ್ನ ಧರಿಸಿದ್ದು, ಪಾಂಡೆ ಉಡುಪಿನ ಜತೆಗೆ ಸ್ಟೈಲಿಷ್​ ಈಸಿ ಗೋಯಿಂಗ್​​ ಲುಕ್​​ ಕೊಟ್ಟಿದ್ದಾರೆ. ಕಾರ್ಸೆಟ್ ಟಾಪ್ ಅನನ್ಯಾಗೆ ಸಖತ್ತಾಗಿ ಕಾಣಿಸುತ್ತಿದ್ದು, ಅನನ್ಯಾ ಸ್ಟನ್ನಿಂಗ್​ ಲುಕ್ಸ್​​ಗೆ ಫ್ಯಾನ್ಸ್​​ ಫಿದಾ ಆಗಿದ್ದಾರೆ.


    ಅನನ್ಯಾ ಸಾಂಪ್ರದಾಯಿಕ ಮತ್ತು ಆಧುನಿಕ ಉಡುಪು ಯಾವುದೇ ಇರ್ಲಿ, ಎಲ್ಲಾ ರೀತಿಯ ಉಡುಗೆಯಲ್ಲೂ ಸಖತ್​​ ಹಾಟ್​​​​ ಆಗಿಯೇ ಕಾಣಿಸಿಕೊಳ್ಳುತ್ತಾರೆ.
    ಡ್ರೀಮ್ ಗರ್ಲ್ 2-ಸ್ಟಾರ್ ತಾನು ಅತ್ತುತ್ತಮ ಫ್ಯಾಷನ್​​ ಸೆನ್ಸ್​​ ಹೊಂದಿದ ಹುಡುಗಿ ಅನ್ನೋದನ್ನ ಪ್ರೂವ್​​ ಮಾಡುತ್ತಲೇ ಇದ್ದಾರೆ.

    ಅನನ್ಯಾ ಒಟ್ಟಾರೆಯಾಗಿ ಈ ಒಂದು ಕೂಲ್​​ ಲುಕ್​​ನಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದು, ಫ್ಯಾನ್ಸ್​​ ಅನನ್ಯಾ ಫೋಟೋಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್​​ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts