ಸಲ್ಮಾನ್​ ಖಾನ್​ ‘ಬೀಯಿಂಗ್​ ಹ್ಯೂಮನ್​’ ಚಾರಿಟಿಯ ಅಸಲಿ ಮುಖ ಬಹಿರಂಗ!

being
Published on

ಒಂದೇ ಒಂದು ಸಾವು ಇಡೀ ಬಾಲಿವುಡ್​ ಅನ್ನೇ ನಡುಗಿಸುತ್ತಿದೆ. ಸ್ಟಾರ್​ ಕಲಾವಿದರ, ನಿರ್ದೇಶಕ, ನಿರ್ಮಾಪಕರ ಅಸಲಿ ಮುಖ ಹೊರಬೀಳುತ್ತಿದೆ. ನೆಟ್ಟಿಗರು ಜಾಲತಾಣದಲ್ಲಿ ಸ್ಟಾರ್​ಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇತ್ತೀಚೆಗಷ್ಟೇ ಸಲ್ಮಾನ್​ ಖಾನ್​ ಕುಟುಂಬ ನನ್ನನ್ನು ಹಾಳು ಮಾಡಿತು ಎಂದು ಬಹಿರಂಗವಾಗಿ ಹೇಳಿಕೊಂಡಿದ್ದ ನಿರ್ದೇಶಕ ಅಭಿನವ್​ ಕಶ್ಯಪ್​, ಇದೀಗ ಸಲ್ಮಾನ್​ ಖಾನ್​ ಒಡೆತನದ ಬೀಯಿಂಗ್​ ಹ್ಯೂಮನ್​ ಸಂಸ್ಥೆಯ ಅಸಲಿ ಮುಖವನ್ನು ಬಿಚ್ಚಿಟ್ಟಿದ್ದಾರೆ. ನಿಜಕ್ಕೂ ಆ ಅಸಲಿಯತ್ತು ಶಾಕ್​ ಮೂಡಿಸಿದರೂ ಅಚ್ಚರಿ ಇಲ್ಲ! ಹಾಗಾದರೆ ಏನದು? ಜಾಲತಾಣದಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ ಅಭಿನವ್​.

‘ಜನಾಬ್​ ಸಲೀಮ್​ ಖಾನ್​ ಅವರ ಬಹು ದೊಡ್ಡ ಕನಸು ಬೀಯಿಂಗ್​ ಹ್ಯೂಮನ್​. ಈ ಚಾರಿಟಿ ಹೆಸರಿನಲ್ಲಿ ನಡೆಯುತ್ತಿರುವುದು ಕೇವಲ ಶೋ ಆಫ್​. ಪ್ರದರ್ಶನಕ್ಕೆ ಮಾತ್ರ! ‘ದಬಾಂಗ್​’ ಚಿತ್ರದ ಶೂಟಿಂಗ್​ ವೇಳೆ ನಾನು ಕಣ್ಣಾರೆ ಕಂಡ ಸತ್ಯ ಇದು. ನನ್ನ ಮುಂದೆ ಸಲ್ಮಾನ್​ ಖಾನ್​ ಕೇವಲ ಐದು ಸೈಕಲ್​ ವಿತರಣೆ ಮಾಡಿದ್ದರು. ಮಾರನೇ ದಿನ ಪತ್ರಿಕೆಗಳಲ್ಲಿ ದೊಡ್ಡದಾಗಿ 500 ಬಡಮಕ್ಕಳಿಗೆ ಸೈಕಲ್​ ವಿರಣೆ ಮಾಡಿದ ಸಲ್ಮಾನ್​ ಎಂಬ ಸುದ್ದಿ ಪ್ರಕಟವಾಗಿತ್ತು. ಈ ಒಂದು ಕೆಲಸದಿಂದ ಸಲ್ಮಾನ್​ ಅವರನ್ನು ನೋಡುವ ದೃಷ್ಟಿಯೇ ಬೇರೆಯಾಗಿತ್ತು. ಕೋರ್ಟ್ ವಿಚಾರಣೆ ಮೇಲೆಯೂ ಈ ಕೆಲಸ ಪ್ರಭಾವ ಬೀರಿತ್ತು ಎಂದರೆ ನೀವು ನಂಬಲೇ ಬೇಕು’ ಎನ್ನುತ್ತಾರೆ ಅಭಿನವ್​.

ಇದಷ್ಟೇ ಅಲ್ಲ ಇನ್ನೊಂದು ಘಟನೆಯನ್ನೂ ಅಭಿನವ್​ ವಿವರಿಸುತ್ತಾರೆ. ‘ಬೀಯಿಂಗ್​ ಹ್ಯೂಮನ್​ನಲ್ಲಿ 500 ರೂ. ಬೆಲೆ ಬಾಳುವ ಜೀನ್ಸ್ ಪ್ಯಾಂಟ್​ ಅನ್ನು 5000 ರೂ.ಗೆ ಮಾರಾಟ ಮಾಡುತ್ತಾರೆ. ನನಗೆ ಆವತ್ತೇ ಅನಿಸಿತ್ತು, ಚಾರಿಟಿ ಹೆಸರಿನಲ್ಲಿ ಈ ಮಟ್ಟದ ಹಣ ಎಗರಿಸುತ್ತಿದ್ದಾರಲ್ಲ ಎಂದು. ಮುಗ್ದ ಜನ ಮಾತ್ರ ಕಡಿಮೆ ಮೊತ್ತದ ಬಟ್ಟೆಗೆ ದೊಡ್ಡ ಬೆಲೆ ನೀಡಿ ಪಡೆದುಕೊಳ್ಳುತ್ತಿದ್ದರು. ಹಾಗಾಗಿ ಇಂಥ ಒಂದು ದೊಡ್ಡ ಜಾಲವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು. ಈ ಬಗ್ಗೆ ಸರ್ಕಾರ ಏನೇ ಮಾಹಿತಿ ನೀಡಿದರೂ ನಾನು ಕೊಡಲು ಸಿದ್ಧ’ ಎಂದು ಅಭಿನವ್​ ಕೋರಿಕೊಂಡಿದ್ದಾರೆ.

ನೆಪೋಟಿಸಂ ನಡುಕ ಶುರುವಾಗುತ್ತಿದ್ದಂತೆ, ಸುಶಾಂತ್​ ಸಿಂಗ್​ ಅವರ ಅಭಿಮಾನಿಗಳು ಬೀಯಿಂಗ್​ ಹ್ಯೂಮನ್​ ಬಟ್ಟೆ ಅಂಗಡಿಗಳ ಮುಂದೆ, ಪ್ರತಿಭಟನೆ ಮಾಡುತ್ತಿದ್ದು, ಪೋಸ್ಟರ್​ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net