

ಬೆಂಗಳೂರು: ಕನ್ನಡ ಚಿತ್ರಗಳ ಆರ್ಭಟ ಜೋರಾಗಿದೆ. ಈ ವರ್ಷ ಕೆಲವು ತಿಂಗಳಗಳ ಕಾಲ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ಬಹಳ ಕಡಿಮೆ. ಹಾಗೆಯೇ ಕೆಲವು ತಿಂಗಳುಗಳಲ್ಲಿ ಹಲವು ಚಿತ್ರಗಳು ಬಿಡುಗಡೆಯಾಗಿವೆ. ಈ ತಿಂಗಳು 20ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಆ ಪೈಕಿ ಈ ಶುಕ್ರವಾರ (ನ. 17) ಏಳು ಚಿತ್ರಗಳು ಬಿಡುಗಡೆಯಾಗಲಿಕ್ಕಿದೆ. ಅದರಲ್ಲಿ ಐದು ಹೊಸ ಚಿತ್ರಗಳಾದರೆ, ಎರಡು ಹಳೆಯ ಸೂಪರ್ ಹಿಟ್ ಚಿತ್ರಗಳು ಮರುಬಿಡುಗಡೆಯಾಗುತ್ತಿವೆ.
ಇದಲ್ಲದೆ, ರವೀಂದ್ರ ವಂಶಿ ನಿರ್ದೇಶನದ 'ಮಠ' ಈ ವಾರ ಬಿಡುಗಡೆಯಾಗುತ್ತಿರುವ ಇನ್ನೊಂದು ಪ್ರಮುಖ ಚಿತ್ರ. ಗುರುಪ್ರಸಾದ್, ತಬಲಾ ನಾಣಿ, ಸಾಧು ಕೋಕಿಲ, ಮಂಡ್ಯ ರಮೇಶ್ ಮುಂತಾದವರು ನಟಿಸಿರುವ ಈ ಚಿತ್ರದಲ್ಲಿ ಕರ್ನಾಟಕದಲ್ಲಿರುವ ಮಠಗಳ ಬಗ್ಗೆ ಹಾಗೂ ಅಲ್ಲಿ ನಡೆದಂತ ನೈಜ ಘಟನೆಗಳನ್ನು ಆಧರಿಸಿ ಕಥೆ-ಚಿತ್ರಕಥೆ ರಚಿಸಲಾಗಿದೆ. ಈ ಚಿತ್ರವನ್ನು 25 ಜಿಲ್ಲೆಗಳಲ್ಲಿ ಚಿತ್ರೀಕರಣ ಮಾಡಲಾಗಿರುವುದು ವಿಶೇಷ.
ಹಿರಿಯ ನಿರ್ದೇಶಕ ವೇಮಗಲ್ ಜಗನ್ನಾಥ ರಾವ್ ನಿರ್ದೇಶನದ 'ಆವರ್ತ', 'ಖಾಸಗೀ ಪುಟಗಳು' ಮತ್ತು 'ಕುಳ್ಳನ ಹೆಂಡತಿ' ಎಂಬ ಹೊಸಬರ ಚಿತ್ರಗಳು ಈ ವಾರ ಬಿಡುಗಡೆಯಾಗುತ್ತಿರುವ ಇನ್ನಿತರ ಚಿತ್ರಗಳು.
ಈ ಏಳು ಚಿತ್ರಗಳ ಪೈಕಿ ಪ್ರೇಕ್ಷಕರ ಕೃಪಾಕಟಾಕ್ಷ ಹೊಸ ಚಿತ್ರಗಳ ಮೇಲಿರುತ್ತದೋ ಅಥವಾ ಹಳೆಯ ಚಿತ್ರಗಳನ್ನೇ ಇನ್ನೊಮ್ಮೆ ಕಣ್ತುಂಬಿಕೊಳ್ಳುತ್ತಾರೋ ಎಂಬುದು ಶುಕ್ರವಾರ ಗೊತ್ತಾಗಲಿದೆ.