More

    ಥಾಯ್​ ಭಾಷೆಗೆ ಡಬ್​ ಆದ ‘777 ಚಾರ್ಲಿ; ಡಿ.1ಕ್ಕೆ ಥಾಯ್ಲೆಂಡ್​ನಲ್ಲಿ ಬಿಡುಗಡೆ

    ಬೆಂಗಳೂರು: ರಕ್ಷಿತ್​ ಶೆಟ್ಟಿ ಅಭಿನಯದ ಮತ್ತು ನಿರ್ಮಾಣದ ‘777 ಚಾರ್ಲಿ’ ಇನ್ನೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರವು ಥಾಯ್​ ಭಾಷೆಗೆ ಡಬ್​ ಆಗಿದ್ದು, ಡಿ. 1ಕ್ಕೆ ಥಾಯ್ಲೆಂಡ್​ನಲ್ಲಿ ಬಿಡುಗಡೆ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮೂಲಕ ಕನ್ನಡ ಚಿತ್ರವೊಂದು ಥಾಯ್​ ಭಾಷೆಗೆ ಡಬ್​ ಆದ ಹೆಗ್ಗಳಿಕೆ ‘777 ಚಾರ್ಲಿ’ ಚಿತ್ರಕ್ಕೆ ಸಿಕ್ಕಿದೆ.

    ‘777 ಚಾರ್ಲಿ’ ಚಿತ್ರವು ಜೂನ್​ 10ರಂದು ಭಾರತದಾದ್ಯಂತ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟದ ಸದಸ್ಯರಾದ ಆರ್​. ಅಶೋಕ್​, ಬಿ.ಸಿ. ನಾಗೇಶ್​, ಕೆ. ಸುಧಾಕರ್​ ಮುಂತಾದವರ ಜತೆಗೆ ಚಿತ್ರ ನೋಡಿ ಭಾಗವುಕರಾಗಿದ್ದರು. ಆ ನಂತರ ರಾಜ್ಯ ಸರ್ಕಾರವು ಚಿತ್ರಕ್ಕೆ ಶೇ. 100ರಷ್ಟು ತೆರಿಗೆ ವಿನಾಯ್ತಿ ಘೋಷಿಸಿ ಆದೇಶ ಹೊರಡಿಸಿತ್ತು.

    ಇದನ್ನೂ ಓದಿ: ಅಭಿನಯಕ್ಕೆ ಆಮೀರ್​ ಗುಡ್​ಬೈ? ‘ಚಾಂಪಿಯನ್​’ ಚಿತ್ರದಲ್ಲಿ ನಟಿಸಲು ಹಿಂದೇಟು …

    ಬರೀ ಮುಖ್ಯಂಮತ್ರಿಗಳಷ್ಟೇ ಅಲ್ಲ, ರಜನಿಕಾಂತ್​ ಜಾನ್​ ಅಬ್ರಹಾಂ, ಬೋನಿ ಕಪೂರ್​ ಸೇರಿದಂತೆ ಹಲವು ಸೆಲೆಬ್ರಿಟಿಗಳು ಚಿತ್ರ ನೋಡಿ ರಕ್ಷಿತ್​ ಮತ್ತು ಚಿತ್ರತಂಡದವರಿಗೆ ಶುಭ ಹಾರೈಸಿದ್ದರು. ಇನ್ನು, ರಜನಿಕಾಂತ್​ ರಕ್ಷಿತ್​ಗೆ ಫೋನ್​ ಮಾಡಿ ಚಿತ್ರದ ಮೇಕಿಂಗ್​, ಅದರಲ್ಲಿ ಅಡಗಿರುವ ಒಳಾರ್ಥ

    ಇನ್ನು, ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಮತ್ತು ಯಶಸ್ಸು ನೋಡಿ ರಕ್ಷಿತ್​ ಎರಡು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದ್ದರು. ಪ್ರಮುಖವಾಗಿ, ಬಂದ ಲಾಭದಲ್ಲಿ ಶೇ. 5ರಷ್ಟನ್ನು ಅವರು ಚಾರ್ಲಿಗಾಗಿ ಎತ್ತಿಡುವುದರ ಜತೆಗೆ, ಶೇ. 10ರಷ್ಟನ್ನು ಅವರು ಚಿತ್ರಕ್ಕೆ ದುಡಿದ ಕಲಾವಿದರು ಮತ್ತು ತಂತ್ರಜ್ಞರಿಗೆ ಕೊಡುವುದಕ್ಕೆ ತೀರ್ಮಾನಿಸಿದ್ದರು.

    ಇದನ್ನೂ ಓದಿ: ಡಿಂಗ್ರಿ ನಾಗರಾಜ್​ ಮೇಲೆ ನಟಿಯ ಗಂಭೀರ ಆರೋಪ

    ಈಗ ಚಿತ್ರ ಇನ್ನೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರವನ್ನು ನೋಡಿ ಮೆಚ್ಚಿರುವ ಥಾಯ್ಲೆಂಡ್​ ದೇಶದ ಚಿತ್ರ ವಿತರಣಾ ಸಂಸ್ಥೆಯಾದ ಗೋಲ್ಡನ್​ ಎ ಎಂಟರ್​ಟೈನ್​ಮೆಂಟ್​ ಕೋ ಲಿಮಿಟೆಡ್​, ಚಿತ್ರದ ಡಬ್ಬಿಂಗ್​ ಹಕ್ಕುಗಳನ್ನು ಪಡೆದಿದ್ದು, ಥಾಯ್​ ಭಾಷೆಗೆ ಡಬ್​ ಮಾಡಿದೆ. ಚಿತ್ರವು ಡಿ. 1ರಂದು ಥಾಯ್ಲೆಂಡ್​ನಾದ್ಯಂತ ಬಿಡುಗಡೆ ಮಾಡಲಿದ್ದು, ಮೊದಲ ಹಂತವಾಗಿ ಚಿತ್ರದ ಟ್ರೇಲರ್​ ಸಹ ಬಿಡುಗಡೆ ಮಾಡಿದೆ.

    ‘777 ಚಾರ್ಲಿ’ ಚಿತ್ರವನ್ನು ಪರಂವಾ ಸ್ಟುಡಿಯೋಸ್​ನಡಿ ರಕ್ಷಿತ್​ ಶೆಟ್ಟಿ ನಿರ್ಮಿಸಿದ್ದು, ಕಿರಣ್​ ರಾಜ್​ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಕ್ಷಿತ್​ ಜತೆಗೆ ಸಂಗೀತಾ ಶೃಂಗೇರಿ, ರಾಜ್​ ಬಿ ಶೆಟ್ಟಿ, ಭಾರ್ಗವಿ ನಾರಾಯಣ್​, ದಾನಿಶ್​ ಸೇಠ್​, ಗೋಪಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ್ದಾರೆ.

    ಮಗಳ ತುಟಿಗೆ ಮುತ್ತು ಕೊಟ್ಟು ಟ್ರೋಲ್​ ಆದ ಐಶ್ವರ್ಯಾ ರೈ … ಯಾಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts