More

    ಬಾಲ ಕಲಾವಿದರೆಲ್ಲ ಒಂದೇ ವೇದಿಕೆಯಲ್ಲಿ; ಅಪ್ಪು ನೆನಪಲ್ಲಿ ಮಕ್ಕಳ ಚಿತ್ರೋತ್ಸವ

    ಬೆಂಗಳೂರು: ಪುನೀತ್​ ರಾಜಕುಮಾರ್​ ನೆನಪಲ್ಲಿ ರಾಜ್ಯಾದ್ಯಂತ ಹತ್ತು ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಪುನೀತ್​ ಅವರು ಬಾಲನಟನಾಗಿ ಗುರುತಿಸಿಕೊಂಡಿದ್ದರಿಂದ, ಅವರ ನೆನಪಲ್ಲಿ 2023ರ ಜನವರಿ 26ರಿಂದ ಮೂರು ದಿನಗಳ ಕಾಲ ಮಕ್ಕಳ ಚಿತ್ರೋತ್ಸವವನ್ನು ಆಯೋಜಿಸಲಾಗಿದೆ. ಉಲ್ಲಾಸ್​ ಸ್ಕೂಲ್​ ಆಫ್​ ಸಿನಿಮಾಸ್​ ಈ ಚಿತ್ರೋತ್ಸವವನ್ನು ಆಯೋಜಿಸಿದೆ.

    ಇದನ್ನೂ ಓದಿ: ಅಶ್ಲೀಲ ಮೆಸೇಜ್​ ಆರೋಪ; ರಾಣಿ ವಿರುದ್ದ ಕೇಸ್​ ಹಾಕಲು ಡಿಂಗ್ರಿ ನಾಗರಾಜ್​ ತೀರ್ಮಾನ

    ವಿಶೇಷವೆಂದರೆ, ಇತ್ತೀಗೆ ಈ ಚಿತ್ರೋತ್ಸವದ ಪೂರ್ವಭಾವಿಯಾಗಿ ಚಂದನವನದ ಬಾಲನಟರನ್ನೆಲ್ಲ ಒಟ್ಟು ಗೂಡಿಸಿ ಮಕ್ಕಳ ಚಲನಚಿತ್ರೋತ್ಸವ ಲೋಗೋ ಲಾಂಚ್ ಮಾಡಿಸಲಾಯಿತು. ಮಾಸ್ಟರ್ ಮಂಜುನಾಥ್, ರೋಹಿತ್, ಸುನೀಲ್ ರಾವ್, ವಿಜಯ್​ ರಾಘವೇಂದ್ರ, ಮಾಸ್ಟರ್ ಆನಂದ್, ವಿನಾಯಕ ಜೋಶಿ, ಹೇಮಾ ಪಂಚಮುಖಿ, ಎಸ್.ಎಸ್. ಕೀರ್ತನ, ನಟರಾಜ್ ಗುಬ್ಬಿ, ರೇಖಾ, ಎಂ.ಎಸ್​. ಉಮೇಶ್​, ಅರ್ಜುನ್​ ಸೇರಿದಂತೆ ಹಲವು ಕಲಾವಿದರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

    ಈ ಚಿತ್ರೋತ್ಸವ ಯಾಕೆ ಎಂದು ಉಲ್ಲಾಸ್​ ಸ್ಕೂಲ್​ನ ಉಲ್ಲಾಸ್​ ಹೀಗೆ ವಿವರಿಸುತ್ತಾರೆ. ‘ಮಕ್ಕಳ ಚಿತ್ರಗಳಿಗೆ ಆದ್ಯತೆ ಕಡಿಮೆಯಾಗುತ್ತಿದೆ. ಎಲ್ಲಾ ಚಿತ್ರೋತ್ಸವಗಳಿಗೂ 10-15 ಚಿತ್ರಗಳನ್ನು ಕಳುಹಿಸಿದರೂ, ಒಂದೂ ಸಿನಿಮಾ ಆಯ್ಕೆ ಆಗುವುದಿಲ್ಲ. ಮಕ್ಕಳ ಚಿತ್ರಗಳಿಗೆ ಆದ್ಯತೆ ನೀಡುವ ದೃಷ್ಟಿಕೋನದಿಂದ ಉಲ್ಲಾಸ್ ಸ್ಕೂಲ್ ಸಿನಿಮಾಸ್ ವತಿಯಿಂದ ಇದೇ ಮೊದಲ ಬಾರಿಗೆ ಮಕ್ಕಳ ಚಲನಚಿತ್ರೋತ್ಸವ ಆಯೋಜಿಸಲಾಗಿದೆ. ಈ ಬಾರಿ ಅಪ್ಪು ಅವರ ಸ್ಮರಣಾರ್ಥ ಕೇವಲ ಕನ್ನಡ ಸಿನಿಮಾಗಳನ್ನು ಮಾತ್ರ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಮಾಡಲಾಗುವುದು’ ಎಂದು ಹೇಳುತ್ತಾರೆ.

    ಲೋಗೋ ಬಿಡುಗಡೆ ಮಾಡಿ ಮಾತನಾಡಿದ ನಟ ವಿಜಯ್​ ರಾಘವೇಂದ್ರ, ‘ನಾವು ತುಂಬಾ ಅದೃಷ್ಟವಂತ ತಲೆಮಾರು ಅಂತ ಹೇಳೋಕೆ ಇಷ್ಟಪಡುತ್ತೀನಿ. ಮುಂದಿನ ತಲೆಮಾರಿನ ಮಕ್ಕಳಿಗೆ ಈ ರೀತಿಯ ಸಪೋರ್ಟ್​ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಇವತ್ತು ಬಹಳ ವರ್ಷಗಳ ನಂತರ ಎಲ್ಲಾ ಬಾಲನಟರೂ ಒಂದೇ ವೇದಿಕೆಯಲ್ಲಿ ಮತ್ತೆ ಸೇರುವಂತಾಯ್ತು. ಬಾಲನಟರಾಗಿದ್ದಾಗ ನಿರ್ದೇಶಕರಿಂದ, ಹಿರಿಯ ಕಲಾವಿದರಿಂದ ಸಿಕ್ಕ ಸಪೋರ್ಟ್, ತರಬೇತಿ ನಮ್ಮನ್ನು ಇಲ್ಲಿಯವರೆಗೆ ಕರೆತಂದು ನಿಲ್ಲಿಸಿವೆ. ಮಕ್ಕಳ ಚಿತ್ರಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆರಂಭವಾಗಿರುವ ಮಕ್ಕಳ ಚಲನಚಿತ್ರೋತ್ಸವ ಯಶಸ್ವಿಯಾಗಲಿ’ ಎಂದು ಅವರು ಶುಭ ಹಾರೈಸಿದರು.

    ಇದನ್ನೂ ಓದಿ: ಅಭಿನಯಕ್ಕೆ ಆಮೀರ್​ ಗುಡ್​ಬೈ? ‘ಚಾಂಪಿಯನ್​’ ಚಿತ್ರದಲ್ಲಿ ನಟಿಸಲು ಹಿಂದೇಟು …

    ಈ ಕಾರ್ಯಕ್ರಮದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ಮಾಜಿ ಅಧ್ಯಕ್ಷರಾದ ಎಸ್​.ಎ. ಚಿನ್ನೇಗೌಡ, ಸುಂದರ್ ರಾಜ್, ಎಂ.ಎನ್. ಕುಮಾರ್, ಟಿ ಪಿ ಸಿದ್ದರಾಜು ಸೇರಿದಂತೆ ಹಲವರು ಭಾಗಿಯಾಗಿದ್ದರು.

    ಮಗಳ ತುಟಿಗೆ ಮುತ್ತು ಕೊಟ್ಟು ಟ್ರೋಲ್​ ಆದ ಐಶ್ವರ್ಯಾ ರೈ … ಯಾಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts