Children Health : ಎಲ್ಲೆಡೆ ಬೇಸಿಗೆಯ ಬಿಸಿ ಆರಂಭವಾಗಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದ್ದು, ಜನರು ಮನೆಯಿಂದ ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಸುಡುವ ಬಿಸಿಲಿನಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ತಜ್ಞರು ಯಾವಾಗಲೂ ಸೂಚನೆ ನೀಡುತ್ತಾರೆ. ವಿಶೇಷವಾಗಿ ಮಕ್ಕಳನ್ನು ಈ ಸಮಯದಲ್ಲಿ ತುಂಬಾ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಅನಾರೋಗ್ಯ ಕಾಡುತ್ತದೆ.
ಬೇಸಿಗೆಯಲ್ಲಿ ಮಕ್ಕಳನ್ನು ಹೈಡ್ರೀಕರಿಸುವುದು ಬಹಳ ಮುಖ್ಯ. ಅಂದರೆ, ದೇಹದಲ್ಲಿ ನೀರಿನಂಶವನ್ನು ಸಮತೋಲನದಲ್ಲಿ ಇಡಬೇಕು. ಮಕ್ಕಳನ್ನು ಹೈಡ್ರೀಕರಿಸದಿದ್ದರೆ, ಬೇಸಿಗೆಯಲ್ಲಿ ಅವರ ಆರೋಗ್ಯ ಹದಗೆಡಬಹುದು. ಹೀಗಾಗಿ ಬೇಸಿಗೆಯಲ್ಲಿ ಮಕ್ಕಳು ನೀರಿನ ಜೊತೆಗೆ ಆಗಾಗ ಜ್ಯೂಸ್ ಕುಡಿಯಬೇಕು. ನೀವು ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸಿದರೆ, ಬೇಸಿಗೆಯಲ್ಲಿ ಕೂಲ್ ಡ್ರಿಂಕ್ಸ್ ಬದಲಿಗೆ, ಮನೆಯಲ್ಲೇ ತಯಾರಿಸಿದ ಹಣ್ಣಿನ ಜ್ಯೂಸ್ಗಳನ್ನು ನೀಡಿ. ಇದು ಮಕ್ಕಳ ಆರೋಗ್ಯವನ್ನು ಸುಧಾರಿಸುವುದಲ್ಲದೆ, ದಿನವಿಡೀ ಅವರನ್ನು ಫ್ರೆಶ್ ಆಗಿಡುತ್ತದೆ. ಬೇಸಿಗೆಯಲ್ಲಿ ಮಕ್ಕಳಿಗೆ ನೀಡಲು ಸೂಕ್ತವಾದ 4 ವಿಶೇಷ ರೀತಿಯ ಜ್ಯೂಸ್‌ಗಳಿವೆ. ಅವುಗಳ ಬಗ್ಗೆ ನಾವೀಗ ತಿಳಿದುಕೊಳ್ಳೋಣ.
ಕಿತ್ತಳೆ ಹಣ್ಣಿನ ಜ್ಯೂಸ್
ಕಿತ್ತಳೆ ಹಣ್ಣಿನ ಜ್ಯೂಸ್ನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ಮಗುವಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಕಿತ್ತಳೆ ಹಣ್ಣಿನ ಜ್ಯೂಸ್, ನಿಮ್ಮ ದೇಹವನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡುತ್ತದೆ. ಈ ಬೇಸಿಗೆಯಲ್ಲಿ ಮಕ್ಕಳಿಗೆ ಕಿತ್ತಳೆ ಹಣ್ಣಿನ ರಸವನ್ನು ನೀಡಬೇಕು. ಇದು ಮಗುವನ್ನು ದಿನವಿಡೀ ಫ್ರೆಶ್ ಆಗಿ ಇಡುತ್ತದೆ.
ಕಲ್ಲಂಗಡಿ ಜ್ಯೂಸ್
ಬೇಸಿಗೆಯಲ್ಲಿ ಮಕ್ಕಳಿಗೆ ಕಲ್ಲಂಗಡಿ ಜ್ಯೂಸ್ ಉತ್ತಮ ಆಯ್ಕೆಯಾಗಿದೆ. ಕಲ್ಲಂಗಡಿಯಲ್ಲಿ ಹೆಚ್ಚಿನ ನೀರಿನ ಅಂಶವಿದೆ. ಇದು ಮಕ್ಕಳನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ಇದರ ಜೊತೆಗೆ, ಕಲ್ಲಂಗಡಿ ರಸದಲ್ಲಿ ವಿಟಮಿನ್ ಸಿ ಮತ್ತು ಲೈಕೋಪೀನ್ ಸಮೃದ್ಧವಾಗಿದೆ. ಇವು ಮಕ್ಕಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಕಲ್ಲಂಗಡಿ ರಸವು ಮಕ್ಕಳ ಹೊಟ್ಟೆಯನ್ನು ತಂಪಾಗಿರಿಸುತ್ತದೆ. ಮಕ್ಕಳು ದಿನವಿಡೀ ತಾಜಾತನದಿಂದ ಇರುತ್ತಾರೆ.
ಪಪ್ಪಾಯ ಜ್ಯೂಸ್
ಪಪ್ಪಾಯಿಯಲ್ಲಿ ಪಪೈನ್ ಎಂಬ ಕಿಣ್ವವಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದಿಷ್ಟೇ ಅಲ್ಲದೆ, ಪಪ್ಪಾಯಿಯಲ್ಲಿ ವಿಟಮಿನ್ ಸಿ ಮತ್ತು ಪೊಟ್ಯಾಸಿಯಂ ಸಮೃದ್ಧವಾಗಿದೆ. ಇವು ಮಕ್ಕಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಪಪ್ಪಾಯಿ ಜ್ಯೂಸ್ ಅನ್ನು ಬೆಳಗ್ಗೆ ಮತ್ತು ಸಂಜೆ ಮಕ್ಕಳಿಗೆ ನೀಡಬಹುದು. ಇದರಿಂದ ಯಾವುದೇ ಅನಾರೋಗ್ಯ ಅವರಿಗೆ ಕಾಡುವುದಿಲ್ಲ.
ದ್ರಾಕ್ಷಿ ಜ್ಯೂಸ್
ಮಕ್ಕಳಿಗೆ ದ್ರಾಕ್ಷಿ ಜ್ಯೂಸ್ ತುಂಬಾನೇ ಇಷ್ಟ. ಮಕ್ಕಳಿಗೆ ತಂಪು ಪಾನೀಯದ ಬದಲು ದ್ರಾಕ್ಷಿ ರಸ ನೀಡಬಹುದು. ದ್ರಾಕ್ಷಿಯಲ್ಲಿ ಪೊಟ್ಯಾಸಿಯಂ ಮತ್ತು ವಿಟಮಿನ್ ಸಿ ಇರುತ್ತದೆ. ಇವು ಮಕ್ಕಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರ ಜೊತೆಗೆ, ದ್ರಾಕ್ಷಿ ಜ್ಯೂಸ್ ನಿಮ್ಮನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡುತ್ತದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬುಗೆ ಆ ಭಾಗದಲ್ಲಿ ಮಚ್ಚೆ ಇದೆಯಂತೆ: ನಟಿಯ ಹೇಳಿಕೆ ವೈರಲ್! Mahesh Babu