ಟಾಲಿವುಡ್​ ಸೂಪರ್​ಸ್ಟಾರ್​ ಮಹೇಶ್​ ಬಾಬುಗೆ ಆ ಭಾಗದಲ್ಲಿ ಮಚ್ಚೆ ಇದೆಯಂತೆ: ನಟಿಯ ಹೇಳಿಕೆ ವೈರಲ್​! Mahesh Babu

Mahesh Babu

Mahesh Babu : ನಟಿ ದಿವಿ ವದ್ಯ ತೆಲುಗು ಬಿಗ್​​ಬಾಸ್​ನಲ್ಲಿ ಭಾಗವಹಿಸಿ ಜನಪ್ರಿಯತೆ ಪಡೆದವರು. ಅಲ್ಲದೆ, ಸಿನಿಮಾಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡುವ ಮೂಲಕ ಖ್ಯಾತಿ ಗಳಿಸಿದರು. ಇತ್ತೀಚೆಗೆ, ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿರುವ ದಿವಿ, ಅನೇಕ ಆಸಕ್ತಿಕರ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ಬಿಗ್​ಬಾಸ್​ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮುನ್ನ ದಿವಿ, ಮಹೇಶ್ ಬಾಬು ನಟನೆಯ ಮಹರ್ಷಿ ಚಿತ್ರದಲ್ಲಿ ನಟಿಸಿದರು. ಆ ಸಿನಿಮಾ ಮತ್ತು ಮಹೇಶ್ ಬಾಬು ಬಗ್ಗೆ ದಿವಿ ಆಡಿರುವ ಮಾತುಗಳು ವೈರಲ್​ ಆಗುತ್ತಿವೆ. ಅಷ್ಟಕ್ಕೂ ದಿವಿ ಏನು ಹೇಳಿದರು ಎಂಬುದನ್ನು ನಾವೀಗ ತಿಳಿಯೋಣ.
.
ಮಹೇಶ್ ಬಾಬು ಅವರು ಹ್ಯಾಂಡ್​ಸಮ್​. ಮಹರ್ಷಿ ಚಿತ್ರೀಕರಣದ ಸಮಯದಲ್ಲಿ ಎಲ್ಲ ಹುಡುಗಿಯರು ಮಹೇಶ್ ಮತ್ತು ಅವರ ಅಂದದ ಬಗ್ಗೆಯೇ ಮಾತನಾಡುತ್ತಿದ್ದರು. ಇಡೀ ಸಿನಿಮಾ ಸೆಟ್​ನಲ್ಲಿ ಮಹೇಶ್​ ಅವರು ಮಾತ್ರ ಮಿರ ಮಿರ ಮಿಂಚುತ್ತಿದ್ದರು. ಅವರೊಂದಿಗೆ ಹಲವು ಸೀನ್​ಗಳಲ್ಲಿ ನಟಿಸಿದ್ದೇನೆ. ಆ ಚಿತ್ರದಲ್ಲಿ ನನ್ನದು ದೊಡ್ಡ ಪಾತ್ರ. ಆದರೆ, ಎಡಿಟಿಂಗ್‌ನಲ್ಲಿ ಹಲವು ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ ಎಂದು ದಿವಿ ತಿಳಿಸಿದರು.

ಇದನ್ನೂ ಓದಿ: ಬೇರೆ ದೇಶಗಳ ಪರ ಆಡಿ ಸಖತ್​ ಹೆಸರು ಮಾಡಿದ ಭಾರತೀಯ ಮೂಲದ ಟಾಪ್​ 10 ಕ್ರಿಕೆಟಿಗರಿವರು… Indian Origin Cricketers

ಮಾತು ಮುಂದುವರಿಸಿದ ದಿವಿ, ಮಹೇಶ್​ ಬಾಬು ಅವರ ಹಣೆಯ ಮೇಲೆ ಮಚ್ಚೆ ಇದೆ. ನಮ್ಮ ನಡುವಿನ ದೃಶ್ಯದ​ ಶೂಟಿಂಗ್​ ನಡೆಯುತ್ತಿರುವಾಗ, ಗಾಳಿಯಲ್ಲಿ ಮಹೇಶ್​ ಬಾಬು ಅವರ ಕೂದಲು ಹಾರಾಡುತ್ತದೆ. ಆ ಸಮಯದಲ್ಲಿ ನಾನು ಆ ಮಚ್ಚೆಯನ್ನು ನೋಡಿದೆ. ಒಂದು ದೃಶ್ಯದಲ್ಲಿ ಮಹೇಶ್ ಬಾಬು ಜತೆ ಮಾತನಾಡುತ್ತಿರುವಂತೆ ನಟಿಸಬೇಕಾಗಿತ್ತು. ಈ ವೇಳೆ ನಿಮ್ಮ ಹಣೆಯ ಮೇಲಿನ ಮಚ್ಚೆ ತುಂಬಾ ಚೆನ್ನಾಗಿದೆ ಸರ್ ಎಂದು ಹೇಳಿದೆ. ಈ ವೇಳೆ ನನಗೆ ನಗು ತಡೆಯಲಾಗದೇ ನಕ್ಕಿದ್ದೆ. ಅಲ್ಲದೆ, ಇದರಿಂದ ಶೂಟಿಂಗ್​ ಕೂಡ ಕೆಲ ಕಾಲ ಸ್ಥಗಿತವಾಗಿತ್ತು. ಮಹರ್ಷಿ ಚಿತ್ರದ ಹಲವು ನೆನಪುಗಳಿವೆ ಎಂದು ದಿವಿ ವದ್ಯ ಹೇಳಿದ್ದಾರೆ. ಮಹೇಶ್ ಬಾಬು ಅವರ ಮಚ್ಚೆಯ ಬಗ್ಗೆ ದಿವಿ ಮಾಡಿರುವ ಕಾಮೆಂಟ್‌ಗಳು ಇದೀಗ ವೈರಲ್ ಆಗಿವೆ.

ನನಗೆ ಮಹೇಶ್ ಬಾಬು ಹಾವು ರಾಜಮೌಳಿ ಚಿತ್ರದಲ್ಲಿ ನಟಿಸಬೇಕು ಅಂತ ಆಸೆ ಇದೆ. ರಾಜಮೌಳಿ ಚಿತ್ರದಲ್ಲಿ ನಟಿಸಬೇಕು ಅಂತ ನನಗೆ ಮೊದಲಿನಿಂದಲೂ ಆಸೆ ಇತ್ತು. ಈ ಚಿತ್ರಕ್ಕಾಗಿ ನಾನು ತುಂಬಾ ಪ್ರಯತ್ನಿಸುತ್ತಿದ್ದೇನೆ. ರಾಜಮೌಳಿ ತಂಡದಲ್ಲಿ ನನಗೆ ತಿಳಿದಿರುವ ಎಲ್ಲರನ್ನೂ ನಾನು ಒಂದು ಪಾತ್ರಕ್ಕಾಗಿ ಕೇಳುತ್ತಿದ್ದೇನೆ. ಅವಕಾಶ ಸಿಕ್ಕರೆ ಆಡಿಷನ್ ಕೂಡ ಮಾಡುತ್ತೇನೆ. ಆ ಚಿತ್ರದಲ್ಲಿ ನಾನು ನಟಿಸಬೇಕು ಅಂತ ದಿವಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. (ಏಜೆನ್ಸೀಸ್​)

ಬೇಸಿಗೆಯಲ್ಲಿ ಕಲ್ಲಂಗಡಿ ತಿನ್ನುವಾಗ ಯಾವುದೇ ಕಾರಣಕ್ಕೂ ಈ ಮಿಸ್ಟೇಕ್​ ಮಾಡ್ಬೇಡಿ: ಮಾಡಿದ್ರೆ ಆರೋಗ್ಯಕ್ಕೆ ಅಪಾಯ! Watermelon

ಬೇರೆ ದೇಶಗಳ ಪರ ಆಡಿ ಸಖತ್​ ಹೆಸರು ಮಾಡಿದ ಭಾರತೀಯ ಮೂಲದ ಟಾಪ್​ 10 ಕ್ರಿಕೆಟಿಗರಿವರು… Indian Origin Cricketers

Share This Article

ಒಂದು ದಿನಕ್ಕೆ ಒಬ್ಬರು ಎಷ್ಟು ಸಿಹಿ ತಿನ್ನಬೇಕು? ಇದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳೊದೇನು? ಇಲ್ಲಿದೆ ಮಾಹಿತಿ..| WHO

WHO: ನೀವು ಪ್ರತಿದಿನ ಸಿಹಿ ತಿನ್ನುತ್ತಿದ್ದೀರಾ? ದಿನಂಪ್ರತಿ ಸಿಹಿತಿಂಡಿಗಳು-ಚಾಕಲೇಟ್​ ಸೇರಿದಂತೆ ಸಿಹಿ ಪಾನೀಯಗಳು ಸೇವನೆಯ ಅಭ್ಯಾಸವು…

ಅಡುಗೆಮನೆಯಲ್ಲಿ ಈ ಫೋಟೋವನ್ನು ಇಟ್ಟರೆ, ಮನೆಯಲ್ಲಿ ಅದೃಷ್ಟ, ಸಂಪತ್ತು ಸದಾ ತುಂಬಿರುತ್ತದಂತೆ! Vastu Tips

Vastu Tips: ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ವಾಸ್ತು ತತ್ವಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು…

ಫ್ರಿಡ್ಜ್​​​ನಲ್ಲಿಟ್ಟ ಮಾಂಸ ತಿನ್ನುತ್ತಿದ್ದೀರಾ? ನೀವು ಇದನ್ನು ಖಂಡಿತ ತಿಳಿದುಕೊಳ್ಳಬೇಕು..meat

meat: ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯಲ್ಲೂ ರೆಫ್ರಿಜರೇಟರ್‌ಗಳು ಅತ್ಯಗತ್ಯವಾಗಿರುತ್ತವೆ. ಪ್ರತಿಯೊಂದು ವಸ್ತುವನ್ನು ಫ್ರಿಡ್ಜ್‌ನಲ್ಲಿ ಇಡುವುದನ್ನು ಅವರು…