ಆರ್​​. ಅಶ್ವಿನ್​​​ ಪ್ರಕಾರ ಚಾಂಪಿಯನ್ಸ್​ ಟ್ರೋಫಿಯ ಬೆಸ್ಟ್​ ಟೀಮ್ ಇದೇ ನೋಡಿ: ರೋಹಿತ್​ಗೆ ಶಾಕ್​! Champions Trophy

Champions Trophy

Champions Trophy : ಕಿರು ಏಕದಿನ ವಿಶ್ವಕಪ್​ ಎಂದೇ ಖ್ಯಾತಿ ಪಡೆದಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಕಳೆದ ಭಾನುವಾರ (ಮಾರ್ಚ್ 9) ದುಬೈನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಟೀಮ್​ ಇಂಡಿಯಾ, ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಬರೋಬ್ಬರಿ 12 ವರ್ಷಗಳ ನಂತರ ಭಾರತ ಮತ್ತೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು.

ಚಾಂಪಿಯನ್ಸ್​ ಟ್ರೋಫಿ ಗೆದ್ದ ಟೀಮ್​ ಇಂಡಿಯಾಗೆ ಪ್ರಶಂಸೆಯ ಮಹಾಪಪೂರವೇ ಹರಿದು ಬರುತ್ತಿದೆ. ಇದರ ನಡುವೆ ಟೀಮ್​ ಇಂಡಿಯಾದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಈ ಮೆಗಾ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರನ್ನು ಒಟ್ಟಿಗೆ ಸೇರಿಸಿ ತಮ್ಮದೇಯಾದ ತಂಡವನ್ನು ರಚಿಸಿದ್ದಾರೆ. ಹನ್ನೊಂದು ಸದಸ್ಯರ ತಂಡದಲ್ಲಿ ನಾಲ್ವರು ಭಾರತೀಯ ಆಟಗಾರರಿಗೆ ಮಾತ್ರ ಸ್ಥಾನ ನೀಡಲಾಗಿದೆ. ಆದರೆ, ಅಶ್ವಿನ್ ಆಯ್ಕೆ ಮಾಡಿದ ತಂಡದಲ್ಲಿ ನಾಯಕ ರೋಹಿತ್ ಶರ್ಮ ಅವರನ್ನು ಸೇರಿಸಿಕೊಂಡಿಲ್ಲ ಎಂಬುದೇ ಅಚ್ಚರಿಯ ಸಂಗತಿಯಾಗಿದೆ.

ಫೈನಲ್​ ಪಂದ್ಯದಲ್ಲಿ ರೋಹಿತ್ ಶರ್ಮ 74 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅಲ್ಲದೆ, ನಾಯಕತ್ವದ ವಿಷಯದಲ್ಲೂ ತಮ್ಮದೇಯಾದ ಪ್ರಭಾವ ಬೀರಿದರು. ಈ ಟೂರ್ನಿಯಲ್ಲಿ ಆಡಿದ ಎಲ್ಲ ಪಂದ್ಯಗಳನ್ನು ಟೀಮ್​ ಇಂಡಿಯಾ ಗೆಲುವು ಸಾಧಿಸಿತು. ಆದರೂ, ರೋಹಿತ್​ ಶರ್ಮಗೆ ಅಶ್ವಿನ್​ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಅಚ್ಚರಿಯ ಸಂಗರಿ ಏನೆಂದರೆ, ಐಸಿಸಿ ಘೋಷಿಸಿದ ಅತ್ಯುತ್ತಮ ತಂಡದಲ್ಲಿಯೂ ರೋಹಿತ್​ ಸ್ಥಾನ ಪಡೆಯಲಿಲ್ಲ. ಅಶ್ವಿನ್ ಅವರು ನ್ಯೂಜಿಲೆಂಡ್‌ನ ರಾಚಿನ್ ರವೀಂದ್ರ ಮತ್ತು ಇಂಗ್ಲೆಂಡ್‌ನ ಬೆನ್ ಡಕೆಟ್ ಅವರನ್ನು ಆರಂಭಿಕ ಆಟಗಾರರನ್ನಾಗಿ ಹೆಸರಿಸಿದ್ದಾರೆ. ಅದರ ನಂತರದ ಸ್ಥಾನದಲ್ಲಿ ಟೀಮ್​ ಇಂಡಿಯಾ ಸ್ಟಾರ್ ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಹೆಸರಿಸಿದ್ದಾರೆ. ಅಶ್ವಿನ್ ಅವರು ಆಸ್ಟ್ರೇಲಿಯಾದ ಜೋಶ್ ಇಂಗ್ಲಿಷ್ ಅವರನ್ನು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿ ಜಯಿಸಿದ ಬೆನ್ನಲ್ಲೇ ಬೇಸರ ಹೊರಹಾಕಿದ ಸ್ಟಾರ್​ ಬ್ಯಾಟ್ಸ್​ಮನ್​ ಶ್ರೇಯಸ್​ ಅಯ್ಯರ್​! Shreyas Iyer

ಡೇವಿಡ್​ ಮಿಲ್ಲರ್ ಫಿನಿಶರ್​ ಆಗಿ ಅವಕಾಶ ಪಡೆದಿದ್ದಾರೆ. ಆಲ್​ರೌಂಡರ್​ಗಳ ಕೋಟಾದಲ್ಲಿ ಅಜ್ಮತುಲ್ಲಾ ಒಮರ್‌ಜೈ ಮತ್ತು ಮೈಕೆಲ್ ಬ್ರೇಸ್‌ವೆಲ್ ಅವರನ್ನು ಸೇರಿಸಲಾಗಿದೆ. ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ಅವರನ್ನು ವಿಶೇಷ ಸ್ಪಿನ್ನರ್‌ಗಳಾಗಿ ಸ್ಥಾನ ಪಡೆದಿದ್ದಾರೆ. ಅಶ್ವಿನ್, ಕಿವೀಸ್ ವೇಗದ ಬೌಲರ್​ ಮ್ಯಾಟ್ ಹೆನ್ರಿಯನ್ನು ಏಕೈಕ ವೇಗದ ಬೌಲರ್ ಆಗಿ ಆಯ್ಕೆ ಮಾಡಿದ್ದಾರೆ. ಅಶ್ವಿನ್ ತಮ್ಮ ತಂಡದಲ್ಲಿ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಅವರನ್ನು 12 ನೇ ಆಟಗಾರನನ್ನಾಗಿ ಆಯ್ಕೆ ಮಾಡಿದರು. ಆದಾಗ್ಯೂ, ಐಸಿಸಿ ತನ್ನ ಘೋಷಿತ ತಂಡದ ನಾಯಕನಾಗಿ ಮಿಚೆಲ್​ ಸ್ಯಾಂಟ್ನರ್ ಅವರನ್ನು ಆಯ್ಕೆ ಮಾಡಿರುವುದು ಗಮನಾರ್ಹ.

ಆರ್. ಅಶ್ವಿನ್ ಅವರ ಅತ್ಯುತ್ತಮ ಚಾಂಪಿಯನ್ಸ್ ಟ್ರೋಫಿ ತಂಡ ಈ ಕೆಳಕಂಡಂತಿದೆ
ರಾಚಿನ್ ರವೀಂದ್ರ, ಬೆನ್ ಡಕೆಟ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಜೋಶ್ ಇಂಗ್ಲಿಸ್, ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜೈ, ಮೈಕೆಲ್ ಬ್ರೇಸ್‌ವೆಲ್, ಕುಲದೀಪ್​ ಯಾದವ್, ವರುಣ್ ಚಕ್ರವರ್ತಿ, ಮ್ಯಾಟ್ ಹೆನ್ರಿ.

12 ನೇ ಆಟಗಾರ: ಮಿಚೆಲ್ ಸ್ಯಾಂಟ್ನರ್.

ಐಪಿಎಲ್​ ಆರಂಭಕ್ಕೂ ಮುನ್ನವೇ ಸಂಚಲನಾತ್ಮಕ ನಿರ್ಧಾರ ತೆಗೆದುಕೊಂಡ ಕನ್ನಡಿಗ ಕೆ.ಎಲ್​. ರಾಹುಲ್​! KL Rahul

ಟಾಲಿವುಡ್​ ಸೂಪರ್​ಸ್ಟಾರ್​ ಮಹೇಶ್​ ಬಾಬುಗೆ ಆ ಭಾಗದಲ್ಲಿ ಮಚ್ಚೆ ಇದೆಯಂತೆ: ನಟಿಯ ಹೇಳಿಕೆ ವೈರಲ್​! Mahesh Babu

Share This Article

ಮಕ್ಕಳು ಪ್ರತಿದಿನ ತಿನ್ನಲೇ ಬೇಕಾದ ಹಣ್ಣುಗಳಿವು..ಕಾರಣ ಹೀಗಿದೆ | Fruits

Fruits: ಮಕ್ಕಳ ಮೆದುಳಿನ ಬೆಳವಣಿಗೆ ಮತ್ತು ನೆನಪಿನ ಶಕ್ತಿ ಹೆಚ್ಚಿಸಲು ಹಣ್ಣುಗಳು ಬಹಳ ಪ್ರಯೋಜನಕಾರಿ. ಹಣ್ಣುಗಳಲ್ಲಿ…

ನೀವು ಕೂಡ ಇದೇ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈರುಳ್ಳಿ ತಿನ್ನಲೇಬೇಡಿ.. onion

onion : ಈರುಳ್ಳಿಯಿಂದ ಹಲವು ಪ್ರಯೋಜನಗಳಿವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈರುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು.…

ನೀವು ಹೆಚ್ಚಾಗಿ ಹೈ ಹೀಲ್ಸ್ ಧರಿಸುತ್ತೀರಾ? ಹುಷಾರಾಗಿರಿ.. heels

heels : ಮಹಿಳೆಯರು ತಮ್ಮ ಬಟ್ಟೆಗಳಿಗೆ ಹೊಂದಿಕೆಯಾಗುವಂತೆ ಹೈ ಹೀಲ್ಸ್ ಧರಿಸಿ ಸ್ಟೈಲಿಶ್ ಆಗಿ ಕಾಣುವುದು…