ಮಿದುಳಿನ ನರಗಳು ಛಿದ್ರ, ತೀವ್ರ ರಕ್ತಸ್ರಾವ! ತಾಯಿಯ ಸಾವು ಅಪಘಾತವಲ್ಲ.. ಪುತ್ರಿ ಗಂಭೀರ ಆರೋಪ | Housewife Death

Housewife Death: ಕಳೆದ ಒಂದು ತಿಂಗಳಿನಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಗೃಹಿಣಿ ಕಡೆಗೂ ಸಾವಿನಲ್ಲಿ ಅಂತ್ಯ ಕಂಡಿದ್ದು ಮಗಳ ಕಣ್ಣೀರಿಗೆ ಕಾರಣವಾಗಿದೆ. ಮರಣೋತ್ತರ ಪರೀಕ್ಷೆಗೆ ಒತ್ತಾಯಿಸಿದ ಮಗಳು, ಇದು ಕೊಲೆಯಲ್ಲ ಸಾವು ಎಂದು ಆರೋಪಿಸಿದ್ದಳು. ವರದಿಯು ಇದು ಕೊಲೆಯಲ್ಲ ಸಾವು ಎಂದು ಒತ್ತಿ ಹೇಳಿರುವುದು ಇದೀಗ ಮಹಿಳೆಯ ಪತಿಯನ್ನು ಬಂಧಿಸುವಂತೆ ಮಾಡಿದೆ. ಇದು ಆಕಸ್ಮಿಕ ಸಾವಲ್ಲ ಬದಲಿಗೆ ಕೊಲೆ ಎಂಬ ಶಂಕೆ ವ್ಯಕ್ತವಾಗಿದ್ದು, ತಂದೆ ವಿರುದ್ಧವೇ ಮಗಳು ಗಂಭೀರ ಆರೋಪ ಎಸಗಿದ್ದಾಳೆ.

ಇದನ್ನೂ ಓದಿ: ಪ್ರಾಣಿಗಳು ಹಲ್ಲುಜ್ಜಲ್ಲ, ಆದರೂ ಅಷ್ಟು ಸ್ವಚ್ಛ ಹೇಗೆ? ಪ್ರಾಣಿಗೂ ಮನುಷ್ಯನ ಹಲ್ಲಿಗಿರುವ ವ್ಯತ್ಯಾಸವೇನು? | Toothbrushes

ಕೇರಳದ ಚೇರ್ತಲದಲ್ಲಿ ಸಾಜಿ (46) ಎಂಬ ಮಹಿಳೆಯ ತಲೆಬುರುಡೆ ಮತ್ತು ಮಿದುಳಿನ ನಡುವಿನ ನರಗಳು ಛಿದ್ರವಾಗಿ, ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಆಕೆಯ ಪತಿ ಸೋನಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಬಂಧನಕ್ಕೆ ಒಳಪಡಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 105ರ ಅಡಿಯಲ್ಲಿ ಸೋನಿ ವಿರುದ್ಧ ಪ್ರಕರಣ ದಾಖಲಾಗಿದೆ.

ಒಂದು ತಿಂಗಳ ಹಿಂದೆ ಮನೆಯಲ್ಲಿ ಬಿದ್ದು ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಕಳೆದ ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು. ಈ ಕುರಿತು ಮಗಳು ಅನುಮಾನ ವ್ಯಕ್ತಪಡಿಸಿದ್ದು, ಅಮ್ಮನ ಸಾವು ಸಾವಲ್ಲ. ಇದೊಂದು ಕೊಲೆ ಎಂದು ಆರೋಪಿಸಿದ್ದಳು. ಸಾವಿನ ಸುತ್ತ ನಿಗೂಢತೆ ಇದೆ ಎಂದು ಆರೋಪಿಸಿದ ಬೆನ್ನಲ್ಲೇ ಹೂತ್ತಿದ್ದ ಮಹಿಳೆಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ವರದಿಯಲ್ಲಿ ಮೃತ ಸಾಜಿ ತಲೆಯ ಹಿಂಭಾಗದಲ್ಲಿ ಗಂಭೀರ ಗಾಯವಾಗಿರುವುದು ವರದಿಯಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ: ಶರವು ದೇವಸ್ಥಾನದಲ್ಲಿ ಕಾಪ ದೇವಸ್ಥಾನದ ಹೊರಕಾಣಿಕೆ ಸಂಗ್ರಹಣಾ ಕಚೇರಿಯ ಉದ್ಘಾಟನೆ

ತಂದೆ ಸೋನಿ ನನ್ನ ತಾಯಿಯನ್ನು ಕ್ರೂರವಾಗಿ ಥಳಿಸಿ, ಆಕೆಯ ತಲೆಯನ್ನು ಗೋಡೆಗೆ ಬಡಿದಿದ್ದರಿಂದಲೇ ತಾಯಿ ಸಾವನ್ನಪಿದರು. ಮತ್ತೊಬ್ಬ ಮಹಿಳೆಯೊಂದಿಗಿನ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕಾಗಿ ನಮ್ಮ ತಂದೆ ಅಮ್ಮನ ಮೇಲೆ ಭೀಕರವಾಗಿ ಹಲ್ಲೆ ನಡೆಸಿರುವುದಾಗಿ ಪುತ್ರಿ ಪೊಲೀಸರ ಬಳಿ ಆರೋಪಿಸಿದ್ದಾಳೆ. ಸದ್ಯ ಆರೋಪಿ ತಂದೆಯನ್ನು ಬಂಧಿಸಿರುವ ಖಾಕಿ ಪಡೆ, ಹೆಚ್ಚಿನ ತನಿಖೆ ಕೈಗೊಳ್ಳಲಿದ್ದೇವೆ ಎಂದು ಮೃತರ ಕುಟುಂಬಕ್ಕೆ ಭರವಸೆ ನೀಡಿದ್ದಾರೆ,(ಏಜೆನ್ಸೀಸ್).

1934ರಲ್ಲಿ ಒಂದು ಸೈಕಲ್​ ಬೆಲೆ ಎಷ್ಟಿತ್ತು ಗೊತ್ತಿದ್ಯಾ? ಹಳೆಯ ಬಿಲ್​ ನೋಡಿದ್ರೆ ನಿಮ್ಮ ಹುಬ್ಬೇರೋದು ಖಚಿತ! | Bicycle Bill

Share This Article

ಮನೆಯಲ್ಲೇ ಮಾಡಿ ಟೇಸ್ಟಿ ಹಾಗಲಕಾಯಿ ಉಪ್ಪಿನಕಾಯಿ; ಇಲ್ಲಿದೆ ಸಿಂಪಲ್​ ವಿಧಾನ | Recipe

ಉಪ್ಪಿನಕಾಯಿ ಆಹಾರದ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಉಪ್ಪಿನಕಾಯಿ ಇಲ್ಲದೆ ಊಟ ಸಂಪೂರ್ಣ ಎನ್ನಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ…

ಪ್ರತಿದಿನ 1 ದಾಳಿಂಬೆ ಸೇವನೆಯಿಂದಾಗುವ ಪ್ರಯೋಜನಗಳಿವು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ದಾಳಿಂಬೆ ಪೋಷಕಾಂಶಗಳಿಂದ ತುಂಬಿದೆ ಎಂಬುದು ಮುಚ್ಚಿಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಪ್ರತಿಯೊಬ್ಬರೂ ಇದನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲು…

ಧೂಮಪಾನ ಬಿಡಲು ಮನಸ್ಸಿದ್ದರೂ ಸಾಧ್ಯವಾಗುತ್ತಿಲ್ಲವೇ?; ನಿಮಗಾಗಿಯೇ ಈ ಟ್ರಿಕ್ಸ್​ | Health Tips

ಪ್ರತ್ಯಕ್ಷವಾಗೋ ಅಥವಾ ಪರೋಕ್ಷವಾಗೋ ನಾವೆಲ್ಲರೂ ನಿಷ್ಕ್ರಿಯ ಧೂಮಪಾನಿಗಳು. ಏಕೆಂದರೆ ನಮ್ಮ ಸುತ್ತಲೂ ಯಾವಾಗಲೂ ಯಾರಾದರೂ ಸಿಗರೇಟ್…