Toothbrushes:ಭೂಮಿಯ ಮೇಲೆ ಲಕ್ಷಾಂತರ ಪ್ರಾಣಿಗಳು ಕಂಡುಬರುತ್ತವೆ. ಪ್ರತಿಯೊಂದು ಪ್ರಾಣಿಗೂ ತನ್ನದೇ ಆದ ವಿಶೇಷತೆ ಇರುತ್ತದೆ. ಆದರೆ, ಮನುಷ್ಯನಂತೆ ಪ್ರಾಣಿಗಳು ತಮ್ಮ ಹಲ್ಲುಗಳನ್ನು ಹೇಗೆ ಸ್ವಚ್ಛಗೊಳಿಸುತ್ತವೆ ಎಂದಾದರೂ ಯೋಚನೆ ಮಾಡಿದ್ದಿರಾ? ಹೇಗೆ ಎಂಬುವುದನ್ನು ತಿಳಿಯೋಣ ಬನ್ನಿ..
ಸಾಮಾನ್ಯ ಮನುಷ್ಯ ಬೆಳಗ್ಗೆ ಎದ್ದ ಕೂಡಲೇ ಮೊದಲು ಮಾಡುವ ಕೆಲಸ ಎಂದರೆ ತನ್ನ ದೈನಂದಿನ ಚಟುವಟಿಕೆಗಳು. ಅದರಲ್ಲೂ ಹಲ್ಲುಜ್ಜುವುದು ದೈನಂದಿನ ಆಭ್ಯಾಸಗಳಲ್ಲೊಂದು. ಹಲ್ಲು ಸ್ವಚ್ಛಗೊಳಿಸುವುದರಿಂದ ಬಾಯಿ ಸ್ವಚ್ಛತೆ ಮತ್ತು ಸೋಂಕು ನಿವಾರಣೆಯಾಗುತ್ತದೆ. ಆದರೆ, ಮನುಷ್ಯ ಬ್ರಷ್ನಿಂದ ಹಲ್ಲು ಕ್ಲೀನ್ ಮಾಡಿಕೊಳ್ಳುತ್ತಾರೆ. ಪ್ರಾಣಿಗಳು ಹೇಗೆ ಎಂದು ತಿಳಿದಿಯೇ?
ಪ್ರಾಣಿ ತಜ್ಞರ ಪ್ರಕಾರ, ಪ್ರಾಣಿಗಳ ಹಲ್ಲುಗಳು ಸಾಮಾನ್ಯವಾಗಿ ಬಲ ಮತ್ತು ದಪ್ಪ ಇರುತ್ತದೆ. ಅಲ್ಲದೆ, ಅವು ಹಾಳಾಗುವುದಿಲ್ಲ ಮತ್ತು ಮುರಿಯುವುದಿಲ್ಲ. ಮನುಷ್ಯರಿಗಿಂತ ಪ್ರಾಣಿಗಳ ಹಲ್ಲು ವಿಭಿನ್ನ ಮತ್ತು ಬಲವಾಗಿ ಇರುತ್ತದೆ. ಪ್ರಾಣಿಗಳಿ ತಮ್ಮ ಹಲ್ಲುಗಗಳನ್ನು ಸ್ವಚ್ಛಗೊಳಿಸುವ ಅಗತ್ಯವಿಲ್ಲ. ಏಕೆಂದರೆ ಅವುಗಳು ತಾವೇ ತಿನ್ನುವ ಆಹಾರದ ಮೂಲಕ ಹಲ್ಲು ಸ್ವಚ್ಛಗೊಳಿಸಿಕೊಳ್ಳುತ್ತವೆ.
ಇದನ್ನೂ ಓದಿ:ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಯಶಸ್ವಿ ಆಯೋಜನೆಗೆ ಜಿಲ್ಲಾಧಿಕಾರಿ ಸೂಚನೆ
ಹೌದು, ಮಾನವರು ಬೇಯಿಸಿದ ಆಹಾರ ತಿನ್ನುತ್ತಾರೆ. ಇದರಿಂದ ಹಲ್ಲುಗಳ ಸ್ವಚ್ಛಗೊಳಿಸುವ ಅಗತ್ಯವಿದೆ. ಆದರೆ, ಪ್ರಾಣಿಗಳು ತಮ್ಮ ಆಹಾರವನ್ನು ಅಧಿಕ ಸಮಯದವರೆಗೂ ಬಾಯಿಯಲ್ಲೆ ಅಗೆಯುತ್ತವೆ. ಹುಲ್ಲು, ಮಾಂಸ, ಮೂಳೆ ಸೇರಿದಂತೆ ಎಲ್ಲಾ ತರಹದ ಆಹಾರ ಬಹಳ ಟೈಮ್ ಬಾಯಿಯಲ್ಲೇ ಇಟ್ಟುಕೊಂಡಿರುತ್ತವೆ. ಹೀಹಾಗಿ, ಅವುಗಳು ಹಲ್ಲುಗಳು ಸ್ವಚ್ಛವಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಪ್ರಾಣಿಗಳು ತಿನ್ನುವ ಆಹಾರದಲ್ಲಿ ಅನೇಕ ರೀತಿಯ ಫೈಬರ್ ಅಂಶಗಳು ಇವೆ. ಇದರಿಂದ ನೈಸರ್ಗಿಕವಾಗಿ ಹಲ್ಲು ಕ್ಲೀನ್ ಆಗುತ್ತವೆ.(ಏಜೆನ್ಸೀಸ್)