

ಇತ್ತೀಚಿಗೆ ರೀಲಿಸ್ ಆದ ಕಲ್ಕಿ ಮತ್ತು ಸಲಾರ್ ಸಿನಿಮಾಗಳ ಹಿಟ್ ಬಳಿಕ ಪ್ಯಾನ್ ಇಂಡಿಯಾ ಸೂಪರ್ಸ್ಟಾರ್ ಪ್ರಭಾಸ್ ಪ್ರಸ್ತುತ ಒಂದರ ಮೇಲೊಂದರಂತೆ ಸರಣಿ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಇದೀಗ ಮುಂಬರುವ ರಾಜಾ ಸಾಬ್ ಸಿನಿಮಾದ ಶೂಟಿಂಗ್ನಲ್ಲಿದ್ದಾರೆ. ಇದೆಲ್ಲರ ನಡುವೆ ಮತ್ತೊಂದು ಚಿತ್ರದಲ್ಲಿ ಗೆಸ್ಟ್ರೋಲ್ ಮಾಡಿದ್ದು, ಅದರಲ್ಲಿನ ನಟನೆಗೆ ಒಂದು ರೂಪಾಯಿ ಕೂಡ ಸಂಭಾವನೆ ಪಡೆದಿಲ್ಲ ಎನ್ನಲಾಗಿದೆ.
ಹೌದು, ಬಾಹುಬಲಿ ಸಿನಿಮಾ ಬರುವ ಮುನ್ನ ವರ್ಷಕ್ಕೆ ಒಂದು ಸಿನಿಮಾ ಮಾತ್ರ ಮಾಡಬೇಕು ಎಂದು ತಮಗೆ ತಾವೆ ಷರತ್ತು ಹಾಕಿಕೊಂಡಿದ್ದರು. ಆದರೆ, ಇದೀಗ ಹಾಗಿಲ್ಲ. ಇದರ ವೇಗ ಹೆಚ್ಚಿಸಿದ್ದಾರೆ. ಪ್ರಭಾಸ್ ಕೈಯಲ್ಲಿ ಹಲವಾರು ಚಿತ್ರಗಳಿವೆ. ವರ್ಷಕ್ಕೆ ಎರಡ್ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.ಪ್ರಭಾಸ್ ನಟನೆಯ ಕೊನೆಯ ಚಿತ್ರಗಳು ಈಗಾಲೇ ಬಿಡುಗಡೆಯಾಗಿದ್ದು, ಮೂರನೇ ಸಿನಿಮಾದಲ್ಲಿ ಬ್ಯೂಸಿ ಆಗಿದ್ದಾರೆ. ಅದು ಕೂಡ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ.
ಈ ಮಧ್ಯೆ ಟಾಲಿವುಡ್ ಹಿರಿಯ ನಟ ಮೋಹನ್ ಬಾಬು ಪುತ್ರ ಮಂಚು ವಿಷ್ಣು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ 'ಕಣ್ಣಪ್ಪ' ಚಿತ್ರದಲ್ಲಿ ಪ್ರಭಾಸ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿನ ನಟನೆಗಾಗಿ ಪ್ರಭಾಸ್ ಒಂದು ರೂಪಾಯಿ ಕೂಡ ಸಂಭಾವನೆ ಪಡೆದಿಲ್ಲ ಎಂಬ ಮಾಹಿತಿ ಹೊರ ಬಿದ್ದಿದೆ.
ಅದಕ್ಕೆ ಕಾರಣ ಮಂಚು ವಿಷ್ಣು ಅವರ ಕುಟುಂಬವು ಪ್ರಭಾಸ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಮಂಚು ಮೋಹನ್ ಬಾಬು ಅವರನ್ನು ಪ್ರಭಾಸ್ ಅವರ ಸೋದರ ಮಾವ ಎಂದು ಕರೆಯಲಾಗುತ್ತದೆ. ಈ ಇಬ್ಬರು ಬುಜ್ಜಿಗಡು ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಂಬಂಧದಿಂದಾಗಿ ಪ್ರಭಾಸ್ ಕಣ್ಣಪ್ಪ ಚಿತ್ರದಲ್ಲಿ ನಟಿಸಲು ಒಂದು ರೂಪಾಯಿ ಕೂಡ ತೆಗೆದುಕೊಳ್ಳಲಿಲ್ಲ ಎನ್ನಲಾಗಿದೆ. ಇನ್ನು ಕಣ್ಣಪ್ಪ ಸಿನಿಮಾ ಕೂಡ ಶೀಘ್ರವೇ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.(ಏಜೆನ್ಸೀಸ್)