ಅನುಭವವು ನನ್ನ ನಾಯಕತ್ವದ ಪಾತ್ರದಲ್ಲಿ... RCB ಕ್ಯಾಪ್ಟನ್ ಆದ ಬೆನ್ನಲ್ಲೇ ರಜತ್​ ಪಾಟಿದಾರ್​ ಮೊದಲ ಪ್ರತಿಕ್ರಿಯೆ

Rajat Patidhar
Published on

ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ ಆರಂಭವಾಗುವುದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದದ್ದು, ಎಲ್ಲಾ ತಂಡಗಳು ಅಗತ್ಯ ತಯಾರಿಯನ್ನು ಆರಂಭಿಸಿದೆ. ಇನ್ಣೂ ಈ ಬಾರಿಯ ಟೂರ್ನಿಯಲ್ಲಿ ಕಪ್ ಗೆಲ್ಲಬೇಕೆಂಬ ಹಂಬಲದೊಂದಿಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ (RCB) ಕಣಕ್ಕಿಳಿಯುತ್ತಿದ್ದು, ಅಭಿಮಾನಿಗಳ ಬಹುವರ್ಷದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಜ್ಜಾಗುತ್ತಿದೆ. ಆದರೆ, ಖಾಲಿ ಇದ್ದ ನಾಯಕನ ಸ್ಥಾನ ಯಾರಿಗೆ ಕೊಡಲಾಗುತ್ತದೆ ಎಂಬ ಬಗ್ಗೆ ಚರ್ಚೆಗಳು ಕ್ರೀಡಾವಲಯದಲ್ಲಿ ಜೋರಾಗಿ ನಡೆದಿದ್ದವು. ನಾಯಕನ ಸ್ಥಾನಕ್ಕೆ ಪ್ರಮುಖವಾಗಿ ವಿರಾಟ್ ಕೊಹ್ಲಿ ಹೆಸರು ಕೇಳಿ ಬಂದಿತಾದರು ಅಂತಿವಾಗಿ ಫ್ರಾಂಚೈಸಿಯು ರಜತ್ ಪಾಟಿದಾರ್​ಗೆ ನಾಯಕನ ಪಟ್ಟವನ್ನು ನೀಡಿದೆ.

ಮಧ್ಯಪ್ರದೇಶ ಮೂಲದ 31 ವರ್ಷದ ರಜತ್​ ಪಾಟಿದಾರ್​ ಇತ್ತೀಚೆಗೆ ದೇಶೀಯ ಟಿ20 ಕ್ರಿಕೆಟ್​ ಟೂರ್ನಿ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿಯಲ್ಲಿ ತನ್ನ ತವರು ರಾಜ್ಯ ತಂಡದ ನಾಯಕರಾಗಿ ಫೈನಲ್​ಗೇರಿಸಿದ್ದರು. ಅಲ್ಲದೆ ಬ್ಯಾಟಿಂಗ್​ನಲ್ಲೂ ಮಿಂಚಿ 428 ರನ್​ಗಳೊಂದಿಗೆ ಟೂರ್ನಿಯ 2ನೇ ಗರಿಷ್ಠ ರನ್​ ಸ್ಕೋರರ್​ ಆಗಿದ್ದರು. ಅಲ್ಲದೇ, ಕಳೆದ ಐಪಿಎಲ್​ ಸೀಸನ್​ನಲ್ಲಿ ಆರ್​ಸಿಬಿ ಪರ ಪಾಟೀದರ್​ ಅತ್ಯುತ್ತಮ ಪ್ರದರ್ಶನ ನೀಡಿದರು. ಈ ಹಿನ್ನೆಲೆಯಲ್ಲಿ ರಜತ್​ ಪಾಟಿದಾರ್​, ಆರ್​ಸಿಬಿ ನಾಯಕತ್ವದ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದರು. ಅಂತಿಮವಾಗಿ ಫ್ರಾಂಚೈಸಿ (RCB) ಅವರನ್ನೇ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.

ಇನ್ನೂ ಆರ್​ಸಿಬಿ (RCB) ತಂಡದ ನಾಯಕನಾಗಿರುವ ಬಗ್ಗೆ ಮಾತನಾಡಿರುವ ರಜತ್​​ ಪಾಟಿದಾರ್​, ನಮ್ಮಲ್ಲಿ ನಾಯಕರ ಗುಂಪಿದ್ದು, ಅವರ ಅನುಭವ ಮತ್ತು ಆಲೋಚನೆಗಳು ನನ್ನ ಹೊಸ ನಾಯಕತ್ವದ ಪಾತ್ರಕ್ಕೆ ಖಂಡಿತವಾಗಿಯೂ ಸಹಾಯ ಮಾಡುತ್ತದೆ. ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಅವರಿಂದ ಕಲಿಯಲು ನನಗೆ ಇದೊಂದು ಉತ್ತಮ ಅವಕಾಶವಾಗಿದೆ. ಅವರ ಆಲೋಚನೆಗಳು ಮತ್ತು ಅನುಭವವು ನನ್ನ ನಾಯಕತ್ವದ ಪಾತ್ರದಲ್ಲಿ ಖಂಡಿತವಾಗಿಯೂ ಸಹಾಯ ಮಾಡುತ್ತದೆ. ಮೈದಾನದಲ್ಲಿ ನಮ್ಮಿಬ್ಬರ ಪಾರ್ಟ್​ನರ್​ಶಿಪ್​ ಮುಂದುವರೆಸಲು ಎದುರು ನೋಡುತ್ತಿದ್ದೇನೆ. 

ಕಳೆದ ವರ್ಷ ನಾನು ಹಾಗೂ ಮೋ ಬೊಬಾಟ್ ನಾಯಕತ್ವದ ವಿಚಾರವಾಗಿ ಮಾತನಾಡಿದ್ದೆವು. ಮೊದಲಿಗೆ ನನಗೆ ಕೇಳಿದಾಗ ನಾನು ರಾಜ್ಯ ತಂಡವನ್ನು ಮುನ್ನಡೆಸಲು ಬಯಸುತ್ತೇನೆ ಎಂದು ಹೇಳಿದ್ದೆ. ಆದ್ದರಿಂದ, ನಾನು ನಾಯಕತ್ವ ವಹಿಸಿಕೊಳ್ಳಬಹುದು ಎಂಬ ಸುಳಿವು ಅಲ್ಲಿಂದ ಸಿಕ್ಕಿತು. ಆದ್ದರಿಂದ ವಿರಾಟ್ ಅಥವಾ ನಾನು ನಾಯಕತ್ವ ವಹಿಸಿಕೊಳ್ಳಬಹುದು ಎಂಬ ಮಾಹಿತಿ ಸಿಕ್ಕಾಗ, ನಾನು ಅದರ ಬಗ್ಗೆ ತುಂಬಾ ಸಂತೋಷಪಟ್ಟೆ ಎಂದು ಆರ್​ಸಿಬಿ (RCB) ತಂಡದ ನೂತನ ನಾಯಕ ರಜತ್​ ಪಾಟಿದಾರ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net