ಮಹಾಕುಂಭಮೇಳದಲ್ಲಿ ಹೊಳೆದ ಐಡಿಯಾ; ಚಾಹ ಮಾರಿ ದಿನಕ್ಕೆ 5 ಸಾವಿರ ಲಾಭಗಳಿಸಿದ ಯುವಕ!: ಇತನ ಕಾಯಕಕ್ಕೆ ನೆಟ್ಟಿಗರು ಫಿದಾ | Mahakumbh Mela

dk - 2025-02-13T120754.998
Published on

Mahakumbh Mela: ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಒಂದಿಲ್ಲೊಂದು ಹೊಸ ಸಂಗತಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿವೆ. ಇದೀಗ ಚಾಹ ಅಂಗಡಿಯಿಟ್ಟು ಪ್ರತಿದಿನ 5 ಸಾವಿರ ರೂ. ಲಾಭ ಮಾಡುತ್ತಿರುವ ಯುವಕನ ಹೇಳಿಕೆಗಳು ಸೋಷಿಯಲ್​ ವೇದಿಕೆಯಲ್ಲಿ ಭಾರಿ ಸದ್ದು ಮಾಡುತ್ತಿದೆ.

ಹೌದು, ಮಹಾಕುಂಭ ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಗಳಲ್ಲಿ ಒಂದಾಗಿದೆ. ಪ್ರತಿದಿನ ಇಲ್ಲಿಗೆ ಕೋಟ್ಯಾಂತರ ಜನರು ಭೇಟಿ ನೀಡುತ್ತಾರೆ. ಹೀಗಾಗಿ, ಇಲ್ಲಿನ ಸಾವಿರಾರು ಜನರ ಬದುಕಿನ ದಾರಿ ಕೂಡ ಹುಡುಕಿಕೊಳ್ಳುತ್ತಾರೆ. ಅದರಂತೆ ಶುಭಂ ಪ್ರಜಾಪತ್​ ಎಂಬ ಯುವಕ ಟೀ ಮಾರುವ ಮತ್ತು ವಾಟರ್​ ಬಾಟಲಿ ಮಾರುವ ಒಂದು ಸಣ್ಣ ಅಂಗಡಿಯನ್ನು ರಸ್ತೆಯ ಬದಿಯಲ್ಲಿ ಹಾಕಿಕೊಂಡಿದ್ದಾನೆ. ಈ ಯುವಕ ಒಂದು ಟೀ ಅನ್ನು 10 ರೂ. ಮಾರಾಟ ಮಾಡುತ್ತಿದ್ದಾನೆ. ಮುಂಜಾನೆಯಿಂದ ಸಂಜೆಯವರೆಗೆ 5 ಸಾವಿರ ರೂ. ಲಾಭಗಳಿಸುವುದಾಗಿ ಯುವಕ ಶುಭಂ ಪ್ರಜಾಪತ್ ಹೇಳಿಕೊಂಡಿದ್ದಾನೆ.

ವಿಡಿಯೋದಲ್ಲಿ ಏನಿದೆ..?

ಇತನ ದುಡಿಮೆಗೆ ಕುಂಭಮೇಳ ವೇದಿಕೆಯಾಗಿದ್ದು, ಅತನ ಹೇಳಿಕೆಯ ಪ್ರಕಾರ, ಬೆಳಗ್ಗೆ ದೊಡ್ಡ ಮಟ್ಟದ ಜನಸಂಖ್ಯೆಯಲ್ಲಿರುತ್ತಾರೆ. ಮಧ್ಯ್ಹಾನದ ಬಳಿಕ ಕಡಿಮೆ ಜನ ಸಂದಣಿ ಹೊಂದಿರುತ್ತಾರೆ. ಹಾಗಾಗಿ ಇದೀಗ ಸಲ್ಪ ರೆಸ್ಟ್​ ಸಿಕ್ಕಿದೆ. ಸಂಜೆ ಮತ್ತೆ ಜನ ಸೇರುತ್ತಾರೆ ಎಂದು ಹೇಳುತ್ತಾ.. ಒಂದು 7 ಸಾವಿರ ರೂ. ಕಲೆಕ್ಷನ್​ ಆಗಿದೆ. ಅದರಲ್ಲಿ ಎಲ್ಲ ರೀತಿಯ ಖರ್ಚು ತೆಗೆದು 5 ಸಾವಿರ ರೂ. ಲಾಭವಾಗಿದೆ ಎಂದು ಹೇಳಿಕೊಂಡಿದ್ದಾರೆ. ​

ಇದೀಗ ಈ ಯುವಕನ ಹೇಳಿಕೆಗಳು ಸೋಷೊಯಲ್​ ಮೀಡಿಯಾದಲ್ಲಿ ಭಾರಿ ವೈರಲ್​ ಆಗಿವೆ. ಅಲ್ಲದೆ, ಇತನ ಕಾಯಕಕ್ಕೆ ನೆಟ್ಟಿಜನ್​ ಫಿದಾ ಆಗಿದ್ದು, ತರೇಹವಾರಿ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ. ಒಬ್ಬ ಬಳಕೆದಾರ ದಿನಕ್ಕೆ 5000 ರೂ.* 30 ದಿನ = 1,50,000 ರೂ. ವಾಹ್​! ಎಂದಿದ್ದಾನೆ. ಮತ್ತೊಬ್ಬರು ಡಾಲಿ ಚಾಯ್​ ವಾಲ ಬದಲಾಯಿ ಕುಂಭ್​ ಛಾಯ್​ ಚಾಲ ಎಂದು ತಮಾಷೆ ಮಾಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net