ಸಾಲ ವಸೂಲಿಗೆ ಬಂದ ಬ್ಯಾಂಕ್​ ಉದ್ಯೋಗಿಯನ್ನೇ ಮದುವೆಯಾದ ವಿವಾಹಿತ ಮಹಿಳೆ!: ನಡೆದಿದ್ದೇನು ಗೊತ್ತೆ? | Marries

blank

Marries:ಬ್ಯಾಂಕ್​ನಲ್ಲಿ ಪಡೆದ ಸಾಲವನ್ನು ವಸೂಲಿ ಮಾಡಲು ಬಂದ ಬ್ಯಾಂಕ್​ ಉದ್ಯೋಗಿ ಜತೆ ವಿವಾಹಿತೆಯೊಬ್ಬಳು ಓಡಿಹೋಗಿ ಮದುವೆಯಾಗಿರುವ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ.

ಸಾಲದ ಹಣ ಪಡೆಯಲು ಬ್ಯಾಂಕ್​ ಉದ್ಯೋಗಿ ಆಕೆಯ ಮೆನೆಗೆ ಹೋಗುತ್ತಿದ್ದನು. ಈ ಸಮಯದಲ್ಲಿ ಇಬ್ಬರು ಪ್ರೀತಿಗೆ ಸಿಲುಕಿದ್ದು, ಕಳೆದ 5 ತಿಂಗಳಿಂದ ರಹಸ್ಯವಾಗಿ ಭೇಟಿಯಾಗುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇದೀಗ ಇವರ ವಿವಾಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ:Haveri | ಹಾವೇರಿ ಬಸ್ ನಿಲ್ದಾಣ, ಬ್ಯಾಡಗಿ APMCಯಲ್ಲಿ ತೂಕದಲ್ಲಿ ಮೋಸ, ಹೆಚ್ಚುವರಿ ಶುಲ್ಕ ವಸೂಲಿ ಮೂಲಕ ಹಗಲು ದರೋಡೆ

ಈ ಇಡೀ ಘಟನೆ ಮಂಗಳವಾರ(ಫೆ.11) ರಂದು ನಡೆದಿದೆ. ವಿವಾಹಿತ ಮಹಿಳೆ ಜುನಾಯಿ ಮುನ್ಸಿಪಾಲ್ ಕೌನ್ಸಿಲ್​ನ ತ್ರೀಪುರಾರ್​ ಸಿಂಗ್​ ಘಾಟ್​ನ ಇಂದ್ರ ಕುಮಾರಿ. ಇಲ್ಲಿನ ಲಚುವಾಲ್​ ಪೊಲೀಸ್​ಠಾಣೆ ವ್ಯಾಪ್ತಿಯ ಜಜ್ಜಾಲ್​ ಗ್ರಾಮ ನಿವಾಸಿಯಾದ ಬ್ಯಾಂಕ್​ ಉದ್ಯೋಗಿ ಪವನ್​ ಕುಮಾರ್ ಎಂದು ಗುರುತಿಸಲಾಗಿದೆ. ಈ ಇಬ್ಬರು ತ್ರೀಪುರಾರ್​ ಸಿಂಗ್​ ಘಾಟ್​ನ ಬಾಬಾ ಭೂಥೇಶ್ವರ್​ನಾಥ್​ ದೇವಸ್ಥಾನದಲ್ಲಿ ಪ್ರೇಮ ವಿವಾಹವಾಗಿದ್ದಾರೆ.

ಬ್ಯಾಂಕ್​ನಿಂದ ಸಾಲ ಪಡೆದಿದ್ದ ಮಹಿಳೆ..

ಪವನ್ ಕುಮಾರ್ ಬ್ಯಾಂಕಿನ ಆಕೌಂಟ್​ ಸೆಕ್ಷನ್​ನಲ್ಲಿ ಕೆಲಸ ಮಾಡುತ್ತಾನೆ. ವಿವಾಹಿತ ಮಹಿಳೆ ಇಂದ್ರ ಕುಮಾರಿ ಸಾಲ ಪಡೆದಿದ್ದರು. ಸಾಲ ವಸೂಲಾತಿಗಾಗಿ ಪವನ್ ಆಗಾಗ್ಗೆ ಇಂದ್ರಕುಮಾರಿ ಅವರ ಮನೆಗೆ ಭೇಟಿ ನೀಡುತ್ತಿದ್ದರು. ಈ ಸಮಯದಲ್ಲಿ ಇಂದ್ರ ಕುಮಾರಿ ಪವನ್‌ನನ್ನು ಪ್ರೀತಿಸುತ್ತಿದ್ದಳು ಮತ್ತು ಇಬ್ಬರೂ ಮೊಬೈಲ್ ಕರೆಗಳಲ್ಲಿ ಗಂಟೆಗಟ್ಟಲೆ ಮಾತನಾಡಲು ಪ್ರಾರಂಭಿಸಿದರು. ಅವರಿಬ್ಬರೂ ಸುಮಾರು ಐದು ತಿಂಗಳುಗಳ ಕಾಲ ರಹಸ್ಯವಾಗಿ ಭೇಟಿಯಾಗುತ್ತಲೇ ಇದ್ದರು. ಫೆಬ್ರವರಿ 4 ರಂದು ಇಂದ್ರ ಕುಮಾರಿ ತನ್ನ ಗಂಡನನ್ನು ಬಿಟ್ಟು ಪವನ್ ಕುಮಾರ್ ಜೊತೆ ಓಡಿಹೋಗಿದ್ದಳು ಎಂದು ವರದಿಯಾಗಿದೆ.

ಇದನ್ನೂ ಓದಿ:ಅತ್ಯಂತ ಭ್ರಷ್ಟ ದೇಶಗಳ ಪಟ್ಟಿ ಬಿಡುಗಡೆ; ಇದರಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ? ಹೀಗಿದೆ ವಿವರ | Corrupt Nations

ಇಂದ್ರ ಕುಮಾರಿ 2022ರಲ್ಲಿ ವಿವಾಹವಾದರು ಎಂದು ಹೇಳಲಾಗುತ್ತಿದೆ. ಆಕೆಯ ಪತಿ ಮದ್ಯ ಸೇವಿಸಿದ ಆಕೆಯನ್ನು ಹೊಡೆಯುತ್ತಿದ್ದನು. ಇದರಿಂದಾಗಿ ಆಕೆಗೆ ಬ್ಯಾಂಕ್ ಉದ್ಯೋಗಿಯೊಂದಿಗಿನ ಆಪ್ತತೆ ಹೆಚ್ಚಾಯಿತು. ಕೊನೆಗೆ ಇಬ್ಬರೂ ಒಟ್ಟಿಗೆ ಇರಲು ನಿರ್ಧರಿಸಿ ಮದುವೆಯಾದರು. ಮದುವೆಯ ನಂತರ ಇಂದ್ರ ಕುಮಾರಿ ತನ್ನ ಮಾಜಿ ಪತಿ ಮತ್ತು ಇತರ ಕುಟುಂಬ ಸದಸ್ಯರಿಂದ ಜೀವ ಬೆದರಿಕೆ ಎದುರಿಸುತ್ತಿರುವುದಾಗಿ ಹೇಳಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ.(ಏಜೆನ್ಸೀಸ್​)

‘ಮನೆಯಲ್ಲಿ​ ಮಹಿಳೆಯರ ಹಾಸ್ಟೆಲ್…​’; ನಟ ಚಿರಂಜೀವಿ ಹೇಳಿಕೆಗೆ ಭಾರೀ ಆಕ್ರೋಶ, ನೆಟ್ಟಿಗರು​ ಕಿಡಿ | Chiranjeevi Statement

Share This Article

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…

ಜಗತ್ತಿನ ಈ 5 ಜನರ ಮುಂದೆ ಯಾವಾಗಲೂ ಮೌನವಾಗಿರಬೇಕಂತೆ! ಚಾಣಕ್ಯ ನೀತಿ ಬಗ್ಗೆ ತಿಳಿಯಿರಿ | Chanakya Niti

Chanakya Niti : ಚಾಣಕ್ಯ ಎಂದ ಕ್ಷಣ ಕಣ್ಣ ಮುಂದೆ ಬರುವುದೆ ಚಾಣಕ್ಷ್ಯತನ, ಬುದ್ಧಿವಂತಿಕೆ. ಹಾಗಾಗಿ,…

ಮಾವಿನಹಣ್ಣು ತಿಂದು ಈಸಿಯಾಗಿ ದೇಹದ ತೂಕ ಇಳಿಸಬಹುದು! ಹೊಸ ಅಧ್ಯಯನ.. mango

mango: ತೂಕ ಇಳಿಸಿಕೊಳ್ಳಲು ಬಯಸುವ ಜನರು ಹೆಚ್ಚಾಗಿ ಮಾವಿನಹಣ್ಣನ್ನು ತಪ್ಪಿಸುತ್ತಾರೆ. ಆದರೆ ಇತ್ತೀಚಿನ ಅಧ್ಯಯನವು ತೂಕ…