ಅತ್ಯಂತ ಭ್ರಷ್ಟ ದೇಶಗಳ ಪಟ್ಟಿ ಬಿಡುಗಡೆ; ಇದರಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ? ಹೀಗಿದೆ ವಿವರ | Corrupt Nations

blank

Corrupt Nations: ಭ್ರಷ್ಟಾಚಾರ ಅನ್ನೋದು ನೀರಿನ ಕೆಳಗಿರುವ ಕಸದಂತೆ. ಮೇಲ್ಭಾಗದಲ್ಲಿ ತಿಳಿಯಾಗಿ ಕಂಡರೂ ಒಳಗೆ ರಾಶಿ ರಾಶಿಯಷ್ಟು ಕೊಳಕಿನಿಂದೇ ತುಂಬಿ ಹೋಗಿರುತ್ತದೆ. ಜನರಿಂದ ಹಣ ಪಡೆದು ಜನರಿಗೇ ಚಳ್ಳೆ ಹಣ್ನು ತಿನ್ನಿಸುವ ಭ್ರಷ್ಟ ಪ್ರಕರಣಗಳು ಆಯಾ ದೇಶದ ಹೆಸರನ್ನು ಮುನ್ನೆಲೆಗೆ ತರುವಲ್ಲಿ ಅನುಮಾನವೇ ಇಲ್ಲ ಎಂಬುದಕ್ಕೆ ಈಗ ಪ್ರಕಟವಾಗಿರುವ ‘ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ’ವೇ ಜ್ವಲಂತ ಸಾಕ್ಷಿ. 13 ವಿಭಿನ್ನ ಭ್ರಷ್ಟಾಚಾರ ಸಮೀಕ್ಷೆಗಳಿಂದ ಪಡೆಯಲಾದ ಮೂರು ದತ್ತಾಂಶ ಮೂಲಗಳ ಸಂಯೋಜನೆ ಇದ್ದಾಗಿದ್ದು, ವಿಶ್ವ ಬ್ಯಾಂಕ್ ಮತ್ತು ವಿಶ್ವ ಆರ್ಥಿಕ ವೇದಿಕೆ ಸೇರಿದಂತೆ ವಿವಿಧ ಸಂಸ್ಥೆಗಳು ಈ ದತ್ತಾಂಶವನ್ನು ಸಂಗ್ರಹಿಸಿವೆ.

ಇದನ್ನೂ ಓದಿ: ನೀವಿಬ್ಬರು ಮೊದಲು ಈ ಇಬ್ಬರು ದಿಗ್ಗಜರೊಂದಿಗೆ ಮಾತನಾಡಿ! ವಿರಾಟ್​, ರೋಹಿತ್​ಗೆ ಕಪಿಲ್​ ಕಿವಿಮಾತು | Kapil Dev

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ವರದಿಯ ಪ್ರಕಾರ, 2024ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ180 ದೇಶಗಳಲ್ಲಿ ಭಾರತ 96ನೇ ಸ್ಥಾನ ಪಡೆದಿದೆ. ಇತ್ತೀಚಿನ ವರದಿಯ ಪ್ರಕಾರ, ಭಾರತದ ಅಂಕವು ಒಂದು ಪಾಯಿಂಟ್‌ನಿಂದ 38ಕ್ಕೆ ಇಳಿದಿದೆ. ಆದರೆ, 2023ರಲ್ಲಿ ಅದು 39 ಆಗಿತ್ತು ಎಂಬುದು ಗಮನಿಸಬೇಕಾದ ಅಂಶ. ತಜ್ಞರು ಮತ್ತು ಉದ್ಯಮಿಗಳ ಪ್ರಕಾರ, ಸಾರ್ವಜನಿಕ ವಲಯದ ಭ್ರಷ್ಟಾಚಾರದ ಮಟ್ಟವನ್ನು ಆಧರಿಸಿ ಸಿಪಿಐ 180 ದೇಶಗಳನ್ನು ಶ್ರೇಣೀಕರಿಸಿದೆ. ಈ ಪಟ್ಟಿಯಲ್ಲಿ ಶ್ರೇಯಾಂಕಗಳನ್ನು ಶೂನ್ಯದಿಂದ 100 ಅಂಕಗಳವರೆಗೂ ಕೊಡಲಾಗಿದೆ. ಇದರಲ್ಲಿ ಶೂನ್ಯ ಅಧಿಕ ಭ್ರಷ್ಟ ಎಂದು ಸೂಚಿಸಿದರೆ, 100 ತುಂಬಾ ಸ್ವಚ್ಛ ಎಂದು ತಿಳಿಸಿದೆ.

ಕಡು ಭ್ರಷ್ಟ ರಾಷ್ಟ್ರಗಳು

ಡೆನ್ಮಾರ್ಕ್ (90) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಕನಿಷ್ಠ ಭ್ರಷ್ಟ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದರ ನಂತರದಲ್ಲಿ ಫಿನ್‌ಲ್ಯಾಂಡ್ (88) ಮತ್ತು ಸಿಂಗಾಪುರ (84). ಇನ್ನು ಸ್ವಚ್ಛ ಸಾರ್ವಜನಿಕ ವಲಯವನ್ನು ಹೊಂದಿರುವ ಟಾಪ್ ಹತ್ತರ ಪಟ್ಟಿಯಲ್ಲಿ ಇತರ ದೇಶಗಳಾದ ನಾರ್ವೆ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಸ್ವೀಡನ್, ಲಕ್ಸೆಂಬರ್ಗ್ ಮತ್ತು ನೆದರ್‌ಲ್ಯಾಂಡ್ಸ್ ಸೇರಿವೆ.

ಅತ್ಯಂತ ಭ್ರಷ್ಟ ದೇಶಗಳು

ಅತ್ಯಂತ ಭ್ರಷ್ಟ ದೇಶಗಳಲ್ಲಿ ಎಂಟು ಅಂಕಗಳೊಂದಿಗೆ ದಕ್ಷಿಣ ಸುಡಾನ್ ಮೊದಲ ಸ್ಥಾನದಲ್ಲಿದೆ. ಇದರ ಬೆನ್ನಲ್ಲೇ ಸಿರಿಯಾ, ವೆನೆಜುವೆಲಾ ಮತ್ತು ಸೊಮಾಲಿಯಾ ಕೂಡ ಸಾರ್ವಜನಿಕ ವಲಯದಲ್ಲಿನ ಭ್ರಷ್ಟಾಚಾರದಿಂದಾಗಿ ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದೆ. 2024ರ ಸಿಪಿಐ ವರದಿಯು 2012ರಿಂದ ಭ್ರಷ್ಟಾಚಾರವನ್ನು ಕಡಿಮೆ ಮಾಡುವಲ್ಲಿ 32 ರಾಷ್ಟ್ರಗಳು ಗಮನಾರ್ಹ ಪ್ರಗತಿಯನ್ನು ಸಾಧಿಸಿವೆ. ಈ ಪಟ್ಟಿಯ ಮೂಲಕ 148 ದೇಶಗಳು ತೀರ ಹದಗೆಡುತ್ತಿರುವ ಭ್ರಷ್ಟಾಚಾರದ ಮಟ್ಟವನ್ನು ಅನುಭವಿಸಿವೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).

ತಾಳಲಾರದ ಬೇಗೆ, ತಡೆಯುವುದು ಹೇಗೆ? ಎಸಿ, ಕೂಲರ್ ಈ ಎರಡರಲ್ಲಿ ಯಾವುದು ಬೆಸ್ಟ್​? ಇಲ್ಲಿದೆ ನೋಡಿ ಉತ್ತರ | Summer

Share This Article

ಬೇಸಿಗೆಯಲ್ಲಿ ಹಾಲಿನ ಚಹಾ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ! ಈ ಚಹಾ ಟ್ರೈ ಮಾಡಿ.. Summer Morning Drinks

Summer Morning Drinks: ಬೇಸಿಗೆಯಾಗಿರಲಿ ಅಥವಾ ಚಳಿಗಾಲವಾಗಿರಲಿ, ಕೆಲವರು ಬೆಳಿಗ್ಗೆ ಎದ್ದ ತಕ್ಷಣ ಚಹಾ ಕುಡಿಯಲು ಇಷ್ಟಪಡುತ್ತಾರೆ. …

ಬೇಸಿಗೆ ಅಂತ ಅತಿ ಹೆಚ್ಚು ನೀರು ಕುಡಿಯುತ್ತೀರಾ? ಆರೋಗ್ಯಕ್ಕೆ ತುಂಬಾ ಡೇಂಜರ್​, ಕುಡಿಯುವ ರೀತಿ ಹೀಗಿರಲಿ… Summer

Summer : ಬೇಸಿಗೆ ವಾತಾವರಣದಲ್ಲಿ ಹೆಚ್ಚು ಚರ್ಚೆಯಾಗುವ ಪ್ರಮುಖ ಸಂಗತಿ ಯಾವುದೆಂದರೆ ಅದು ನೀರು. ಆದರೆ,…

ಈ 3 ರಾಶಿಯವರು ಹಣ ಉಳಿಸುವಲ್ಲಿ, ಗಳಿಸುವಲ್ಲಿ ಭಾರಿ ನಿಪುಣರು! ನಿಮ್ಮ ರಾಶಿ ಯಾವುದು? Zodiac Signs

Zodiac Signs : ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲಿ ಹಣವು ಪ್ರಮುಖ ಪಾತ್ರ ವಹಿಸುತ್ತದೆ. ಹಣದ ಬೇಡಿಕೆಯು…