Summer: ಇದು ಬೇಸಿಗೆ ಕಾಲ. ಕೇವಲ ಬೇಸಿಗೆ ಅಲ್ಲ ಮುಂದಿನ ಎರಡು ತಿಂಗಳಲ್ಲಿ ಬಿರು ಬೇಸಿಗೆ ಕಾಡುವುದು ನಿಶ್ಚಿತ. ಇನ್ನು ಈ ಬೇಸಿಗೆಯಲ್ಲಿ ಬೆವರಿನ ಸ್ನಾನ ಉಚಿತ. ಮನೆ ಅಥವಾ ಕಚೇರಿಯಿಂದ ಹೊರಬಂದರೆ ಮೈಸುಡುವ ಬಿಸಿಲಿನಿಂದ ತಾಳಲಾರದ ಬೇಗೆ ಶುರುವಾಗುತ್ತದೆ. ಇದನ್ನು ತಡೆಯುವುದು ಹೇಗೆ? ಎಂಬ ಯೋಚನೆ ಬಂದ ತಕ್ಷಣವೇ ನಮ್ಮ ಕಣ್ಣು ಮತ್ತು ಕೈ ಫ್ಯಾನ್ ಅಥವಾ ಎಸಿಯ ಬಳಿ ಹೋಗುತ್ತದೆ. ಬಿಸಿಲ ತಾಪ ಹೆಚ್ಚಿದಾಗ ಎಸಿ ಮತ್ತು ಕೂಲರ್‌ಗಳ ಬೇಡಿಕೆ ಮತ್ತು ಬೆಲೆ ಕೂಡ ಹೆಚ್ಚುತ್ತದೆ. ಅಸಲಿಗೆ ಎಸಿ ಮತ್ತು ಕೂಲರ್ ಪೈಕಿ ಯಾವುದು ಬೆಸ್ಟ್? ಯಾವುದನ್ನು ಖರೀದಿಸಬೇಕು ಎಂಬ ಗೊಂದಲ್ಲ ಅನೇಕರದ್ದು. ಇದಕ್ಕೆ ಉತ್ತರ ಹೀಗಿದೆ ನೋಡಿ.
ಇದನ್ನೂ ಓದಿ: ಕೃತಕ ಬುದ್ಧಿಮತ್ತೆಗೆ ಚೌಕಟ್ಟು; ವಿಶ್ವಾಸ, ಪಾರದರ್ಶಕತೆ ಹೆಚ್ಚಳಕ್ಕೆ ಸಹಕಾರ, ಎಐ ಶೃಂಗಸಭೆಯಲ್ಲಿ ಮೋದಿ ಪ್ರತಿಪಾದನೆ
ಆರೋಗ್ಯಕ್ಕೆ ಹಾನಿಕಾರಕ
ಅಗತ್ಯ ಮತ್ತು ಅನಿವಾರ್ಯತೆ ಇದ್ದಾಗಲೇ ಆ ವಸ್ತು ಅಥವಾ ವ್ಯಕ್ತಿಗೆ ಬೆಲೆ ಜಾಸ್ತಿ. ಬೇಸಿಗೆ ಸಮೀಪಿಸುತ್ತಿದ್ದಂತೆ ಮಾರುಕಟ್ಟೆಯಲ್ಲಿ ಫ್ಯಾನ್ ಅಥವಾ ಎಸಿ ಮೊರೆ ಹೋಗುವ ಜನರು, ಇವುಗಳಲ್ಲಿ ಯಾವುದು ನಮ್ಮ ಮನೆಗೆ ಉತ್ತಮ ಎಂದು ಯೋಚಿಸುತ್ತಾರೆ. ಈ ಸಾಲಿನಲ್ಲಿ ಅನೇಕರು ಫ್ಯಾನ್ ಕೈಬಿಟ್ಟು ದೊಡ್ಡಸ್ತಿಕೆಗಾಗಿ ದೊಡ್ಡ ದೊಡ್ಡ ಎಸಿ ಖರೀದಿಗೆ ಮುಂದಾಗುತ್ತಾರೆ. ಇದನ್ನು ಖರೀದಿಸುವ ಭರದಲ್ಲಿ ಜೇಬಿಗೆ ಒಂದು ದೊಡ್ಡ ತೂತ ಕೂಡ ಮಾಡಿಕೊಳ್ಳುತ್ತಾರೆ. ಅಷ್ಟಕ್ಕೂ ಫ್ಯಾನ್ ಮತ್ತು ಎಸಿ ಬಯಸುವ ಜನರ ಆರೋಗ್ಯಕ್ಕೆ ಯಾವುದು ಉತ್ತಮ? ಎಂಬ ವಿಚಾರಕ್ಕೆ ಬಂದರೆ ವೈದ್ಯಕೀಯ ತಜ್ಞರು ಹೇಳುವುದು ಕೂಲರ್. ಕಾರಣ, ಎಸಿ ಗಾಳಿ ನಮ್ಮ ಆರೋಗ್ಯಕ್ಕೆ ಹಾನಿಕಾರಕ.
ಎಸಿ ಮತ್ತು ಕೂಲರ್‌ಗಳ ಗಾಳಿಯ ಗುಣಮಟ್ಟ ಗಮನಿಸಿದ್ದೀರಾ?
ಎಸಿಯಿಂದ ಹೊರಹೊಮ್ಮುವ ಗಾಳಿಯನ್ನು ಮತ್ತು ಫ್ಯಾನ್ನಿಂದ ಬರುವ ಗಾಳಿಯನ್ನು ಎಂದಾದರೂ ನೀವು ಗಮನಿಸಿದ್ದೀರಾ? ನೀವು ಎಸಿ ಬಳಸಿದರೆ ಅದು ನಿಮ್ಮ ರೂಮ್ನಲ್ಲಿ ಅದೇ ಗಾಳಿಯನ್ನು ಹೀರಿಕೊಳ್ಳುತ್ತದೆ ಮತ್ತು ಅದನ್ನೇ ಹೊರ ಸೂಸುತ್ತದೆ. ಅಂತಹ ಗಾಳಿಯು ಬೇಗ ಒಣಗುತ್ತದೆ. ಅದೇ ಕೂಲರ್ ಆಗಿದ್ದರೆ, ಅವು ಹೊರಗಿನ ಗಾಳಿಯನ್ನು ಹೀರಿಕೊಳ್ಳುತ್ತದೆ ಹಾಗೂ ತಾಜಾ ಗಾಳಿಯನ್ನು ತಂಪಾಗಿಸುತ್ತದೆ ಮತ್ತು ಹೊರಗೆ ಕಳುಹಿಸುತ್ತದೆ. ಕೂಲರ್ ಮೂಲಕ ಬರುವ ಗಾಳಿಯು ತುಂಬಾ ಆರ್ದ್ರವಾಗಿರುತ್ತದೆ. ಕೂಲರ್‌ಗಳು ಎಸಿಗಳಿಗಿಂತ ಉತ್ತಮ ಗಾಳಿಯನ್ನು ನೀಡುತ್ತವೆ ಎಂದೇ ಹೇಳಲಾಗಿದೆ.
ಆರೋಗ್ಯ ಸಮಸ್ಯೆಗಳಿರುವವರು ಎಚ್ಚರ
ತಣ್ಣನೆಯ ಗಾಳಿಗಾಗಿ ಕೂಲರ್‌ಗಳಲ್ಲಿ ನೀರು ಇರಿಸಬೇಕು. ಕೂಲರ್‌ನಲ್ಲಿರುವ ಗಾಳಿಯು ನೈಸರ್ಗಿಕವಾಗಿದೆ. ಆಸ್ತಮಾ, ಧೂಳಿನ ಅಲರ್ಜಿಯಂತಹ ಆರೋಗ್ಯ ಸಮಸ್ಯೆಗಳಿರುವವರಿಗೆ ತಂಪಾದ ಗಾಳಿಯು ತುಂಬಾ ಅವಶ್ಯಕ ಹಾಗೂ ಒಳ್ಳೆಯದು. ಅಲ್ಲದೆ, ಎಸಿಯಿಂದ ಹೊರಸೂಸುವ ಗಾಳಿ ಕ್ಲೋರೋಫ್ಲೋರೋಕಾರ್ಬನ್‌ಗಳು ಮತ್ತು ಹೈಡ್ರೋ-ಕ್ಲೋರೋಫ್ಲೋರೋಕಾರ್ಬನ್‌ಗಳಿಂದ ತಂಪಾಗಿಸಲಾಗುತ್ತದೆ. ಇದು ಶ್ವಾಸಕೋಶದ ಮೇಲೆ ಭಾರೀ ಪರಿಣಾಮ ಬೀರುತ್ತದೆ.
ವಾಸ್ತವವಾಗಿ, ಈ ಎಲ್ಲಾ ರಾಸಾಯನಿಕಗಳು ಪರಿಸರಕ್ಕೆ ಹಾನಿಕಾರಕ. ಎಸಿಯಲ್ಲಿನ ಗಾಳಿಯು ತಂಪಾಗಿದ್ದರೂ ಸಹ, ಅದರಲ್ಲಿನ ಕೆಮಿಕಲ್ಗಳು ನಮ್ಮ ಉಸಿರನ್ನು ಸೇರುವುದರಿಂದ ಆರೋಗ್ಯಕ್ಕೆ ಹಾನಿಯಾಗುವ ಅಪಾಯ ಜಾಸ್ತಿ. ಉಸಿರಾಟದ ತೊಂದರೆ ಇರುವ ಜನರಿಗೆ ಇದು ಅಪಾಯದ ಮಟ್ಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.
ಯಾವುದರ ಬೆಲೆ ಅಗ್ಗ?
ಇನ್ನು ಬೆಲೆಗಳಿಗೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ಎಸಿ ಬೆಲೆ ಬರೋಬ್ಬರಿ 20 ಸಾವಿರ ರೂ.ಗಿಂತ ಅಧಿಕವಿದೆ. ಉತ್ತಮ ಗುಣಮಟ್ಟದ ಎಸಿ ಬೇಕಾದರೆ 30,000ದಿಂದ 70 ಸಾವಿರ ರೂ.ಗಳವರೆಗೆ ಇದೆ. ಸಾಮಾನ್ಯವಾಗಿ ಮಧ್ಯಮ ವರ್ಗದ ಜನರು ಇಷ್ಟೊಂದು ಬೆಲೆಗೆ ಎಸಿಗಳನ್ನು ಖರೀದಿಸುವುದು ಕಷ್ಟ. ಹೀಗಾಗಿ ಟೇಬಲ್ ಫ್ಯಾನ್ ಅಥವಾ ಕೂಲರ್ ಮೊರೆ ಹೋಗುತ್ತಾರೆ. ಕೂಲರ್‌ಗಳನ್ನು ಖರೀದಿಸಿದರೆ, ಅವುಗಳ ಬೆಲೆ ಅಬ್ಬಬ್ಬಾ ಎಂದರೆ 5ರಿಂದ 15 ಸಾವಿರ ರೂ.ಗಳವರೆಗೆ ಇದೆ. ಈ ಕೂಲರ್‌ಗಳು ಸರಾಸರಿ ಮಧ್ಯಮ ವರ್ಗದ ಜನರು ಖರೀದಿಸಲು ಉತ್ತಮ ಆಯ್ಕೆ ಎಂದರೆ ಖಂಡಿತ ತಪ್ಪಾಗಲಾರದು,(ಏಜೆನ್ಸೀಸ್).
ನಿಮ್ಮ ಸಿಬಿಲ್ ಸ್ಕೋರ್ ಕುಸಿದಿದ್ಯಾ? ರಾಕೆಟ್ನಂತೆ ಜಿಗಿಯಲು ಈ ಸಿಂಪಲ್ ಟಿಪ್ ಅನುಸರಿಸಿ | CIBIL Score