ಚಿರತೆ ದಾಳಿಗೆ ದೇಗುಲದ ಅಡುಗೆ ಭಟ್ಟ ಬಲಿ

Hulugesh huluga
Published on

ಗಂಗಾವತಿ (ಕೊಪ್ಪಳ) : ತಾಲೂಕಿನ ಆನೆಗೊಂದಿ ಸಮೀಪದ ವಾಲಿಕಿಲ್ಲಾ ಬಳಿ ದೇವಸ್ಥಾನದಲ್ಲಿ ಅಡುಗೆ ಭಟ್ಟನಾಗಿದ್ದ ಯುವಕನನ್ನು ಗುರುವಾರ ಬೆಳಗಿನ ಜಾವ ಚಿರತೆ ದಾಳಿ ನಡೆಸಿ ತಿಂದು ಹಾಕಿದ ಘಟನೆ ನಡೆದಿದೆ.

ಮೇಗೋಟೆ ದುರ್ಗಾ ಬೆಟ್ಟದ ದೇಗುಲವೊಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ‌ ಹುಲಗೇಶ್ ಈರಪ್ಪ ಮಡ್ಡೇರ್ (24) ನಿದ್ದೆಯಲ್ಲಿದ್ದಾಗ‌ ಚಿರತೆ ದಾಳಿ ಮಾಡಿದೆ. ಸುಮಾರು ಒಂದು ಕಿ.ಮೀ ದೂರದ ಕಾಡುಪೊದೆಯೊಳಗೆ ಹೊತ್ತೊಯ್ದು ಅರೆಬರೆಯಾಗಿ ತಿಂದು ಹಾಕಿದೆ.

ಘಟನೆ ಬೆಳಕಿಗೆ‌ ಬರುತ್ತಿದ್ದಂತೆ ಆನೆಗೊಂದಿ ಸುತ್ತಮುತ್ತಲಿನ ಜನ ಬೆಚ್ಚಿ‌ ಬಿದ್ದಿದ್ದಾರೆ. ಇತ್ತೀಚೆಗಷ್ಟೆ ದೇವಸ್ಥಾನಕ್ಕೆ ಆಗಮಿಸಿದ್ದ ಬಾಲಕನ ಮೇಲೆ ಚಿರತೆ ದಾಳಿಗೆ ಯತ್ನಿಸಿತ್ತು. ಬಳಿಕ ಅರಣ್ಯಾಧಿಕಾರಿಗಳಿಗಳು ಬೋನು ಇಟ್ಟು ಹೆಣ್ಣು ಚಿರತೆಯನ್ನು ಸೆರೆಹಿಡಿದಿದ್ದರು. ಮತ್ತೆ ಚಿರತೆ ದಾಳಿ ಮುಂದುವರೆದಿದ್ದು, ಜನರು ಭಯಭೀತರಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ‌ ಅಧಿಕಾರಿಗಳು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net