More

    ಉಗ್ರ ನಿಗ್ರಹ ಕುರಿತ ಭಾರತದ ವಾರ್ಷಿಕ ನಿರ್ಣಯ ವಿಶ್ವಸಂಸ್ಥೆ ಸಾಮಾನ್ಯಸಭೆಯಲ್ಲಿ ಸ್ವೀಕೃತ

    ನ್ಯೂಯಾರ್ಕ್​: ಉಗ್ರ ನಿಗ್ರಹ ಕುರಿತ ಭಾರತದ ವಾರ್ಷಿಕ ನಿರ್ಣಯವನ್ನು ವಿಶ್ವಸಂಸ್ಥೆಯ ಫಸ್ಟ್ ಕಮಿಟಿ ಒಮ್ಮತದಿಂದ ಅಂಗೀಕರಿಸಿದೆ. ಭಾರತದ ಈ ನಿರ್ಣಯವನ್ನು 75ಕ್ಕೂ ಹೆಚ್ಚು ರಾಷ್ಟ್ರಗಳು ಪ್ರಾಯೋಜಿಸಿವೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ತಿಳಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಉಗ್ರ ನಿಗ್ರಹದ ವಿಚಾರದಲ್ಲಿ ಭಾರತ ಮುಂಚೂಣಿಯಲ್ಲಿದೆ. ಭಾರಿ ಪ್ರಮಾಣದಲ್ಲಿ ನಾಶ ನಷ್ಟ ಉಂಟುಮಾಡಬಲ್ಲ ಶಸ್ತ್ರಸ್ತ್ರಗಳು ಉಗ್ರ ಕೈ ಸೇರುವುದನ್ನು ತಪ್ಪಿಸುವುದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂಬ ಅಂಶವುಳ್ಳ ವಾರ್ಷಿಕ ನಿರ್ಣಯವನ್ನು ಭಾರತ ಮಂಡಿಸಿತ್ತು. ಇದನ್ನು 75ಕ್ಕೂ ಹೆಚ್ಚು ರಾಷ್ಟ್ರಗಳು ಬೆಂಬಲಿಸಿದ್ದಲ್ಲದೆ, ಫಸ್ಟ್ ಕಮಿಟಿ ಒಮ್ಮತದಿಂದ ಇದನ್ನು ಅಂಗೀಕರಿಸಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಗುಟುರು ಮತ ಎಣಿಕೆ ಸ್ಥಗಿತಕ್ಕೆ ಆಗ್ರಹ

    ಸರ್ಕಾರಗಳ ಹೊರತಾಗಿ ಅನ್ಯರು ಅಣ್ವಸ್ತ್ರ, ರಾಸಾಯನಿಕ ಅಥವಾ ಜೈವಿಕ ಅಸ್ತ್ರವನ್ನು ಉತ್ಪಾದಿಸುವುದು, ಅದರನ್ನು ಪೂರೈಸುವುದು ಇತ್ಯಾದಿಗಳಿಗೆ ಅವಕಾಶ ಇರಕೂಡದು. ಇದು ಉಗ್ರರ ಕೈ ಸೇರಿದರೆ ಭಾರಿ ಅನಾಹುತಕ್ಕೆ ಕಾರಣವಾದೀತು ಎಂದು ಭಾರತ ತನ್ನ ವಾರ್ಷಿಕ ನಿರ್ಣಯದಲ್ಲಿ ಪ್ರತಿಪಾದಿಸಿದೆ. (ಏಜೆನ್ಸೀಸ್)

    ಯೋಗೇಶ್ ಗೌಡ ಕೊಲೆ ಕೇಸ್: ಮಾಜಿ ಸಚಿವ ವಿನಯ ಕುಲಕರ್ಣಿ ಸಿಬಿಐ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts