ಬಿಗ್​ ಸಿನಿಮಾದಿಂದ ಜಾನ್ವಿ ಕಪೂರ್​​​​​ ಹೊರಗಿಟ್ಟ ಕರಣ್​ ಜೋಹರ್​, ಹೊಸ ನ್ಯಾಶನಲ್​ ಕ್ರಶ್​ಗೆ ಚಾನ್ಸ್​​…!

1 Min Read
ಬಿಗ್​ ಸಿನಿಮಾದಿಂದ ಜಾನ್ವಿ ಕಪೂರ್​​​​​ ಹೊರಗಿಟ್ಟ ಕರಣ್​ ಜೋಹರ್​, ಹೊಸ ನ್ಯಾಶನಲ್​ ಕ್ರಶ್​ಗೆ ಚಾನ್ಸ್​​…!

ಕರಣ್ ಜೋಹರ್ ‘ಧಡಕ್ 2’ ಸಿನಿಮಾವನ್ನು ಘೋಷಿಸಿದ್ದಾರೆ. ಮರಾಠಿ ಭಾಷೆಯಲ್ಲಿ ತಯಾರಾದಾ ‘ಸೈರಾಟ್’ ಈಗಲೂ ಸಿನಿ ಪ್ರಿಯರ ಮನದಲ್ಲಿದೆ.

ಕರಣ್ ಜೋಹರ್ ಅವರಿಗೂ ಇಂಥದ್ದೇ ಸಿನಿಮಾ ಮಾಡುವ ಆಸೆಯನ್ನು ಕೂಡ ಮೂಡಿತ್ತು. 2018 ರಲ್ಲಿ ಅವರು ಸೈರಾಟ್ ಅನ್ನು ಬಾಲಿವುಡ್‌ನಲ್ಲಿ ‘ಧಡಕ್’ ಎಂಬ ಹೆಸರಿನೊಂದಿಗೆ ರಿಮೇಕ್ ಮಾಡಿದ್ರು. ಬಾಲಿವುಡ್ ಸ್ಟಾರ್ ಕಿಡ್ಸ್ ಜಾನ್ವಿ ಕಪೂರ್ ಮತ್ತು ಇಶಾನ್ ಖಟ್ಟರ್ ‘ಧಡಕ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು.

‘ಧಡಕ್’ ಬಿಡುಗಡೆಯಾದ ಐದು ವರ್ಷಗಳ ನಂತರ ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ಸೀಕ್ವೆಲ್​ ಘೋಷಿಸಿದ್ದಾರೆ. ಈ ಚಿತ್ರದಲ್ಲಿ ನಟ-ನಟಿಯರ ಹೆಸರು ಕೂಡ ಅನೌನ್ಸ್ ಆಗಿದೆ. ಮೇ 27 ರಂದು, ಕರಣ್ ಜೋಹರ್ ಚಿತ್ರದ ಪೋಸ್ಟರ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಚಿತ್ರವನ್ನು ಅನೌನ್ಸ್ ಮಾಡಿದ್ರು.

ಇದೀಗ ಚಿತ್ರದ ಬಿಡುಗಡೆ ದಿನಾಂಕ ಕೂಡ ಬಹಿರಂಗವಾಗಿದೆ. ಈ ಚಲನಚಿತ್ರವು ನವೆಂಬರ್ 22, 2024 ರಂದು ಬಿಡುಗಡೆಯಾಗಲಿದೆ. ಚಿತ್ರದ ಫಸ್ಟ್ ಲುಕ್​ ಶೇರ್​ ಮಾಡಿದ ನಿರ್ಮಾಪಕರು “ಯಾ ಕಹಾನಿ ಹೈ ತಖಿ ಅಲಗ್ ಕ್ಯೂಂಕಿ ಏಕ್ ಥಾ ರಾಜಾ, ಏಕ್ ಥಿ ರಾಣಿ – ಜಾತ್ ಅಲಗ್ ಥಿ… ಖತಮ್ ಕಹಾನಿ” ಎಂದು ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ. ಭಾರತದಲ್ಲಿನ ಜಾತಿ ವ್ಯವಸ್ಥೆಯ ಮೇಲೆಯೇ ಈ ಸಿನಿಮಾದ ಕಥೆಯನ್ನು ಎಣೆಯಲಾಗಿದೆ ಎನ್ನಲಾಗ್ತಿದೆ.

ಇದಲ್ಲದೇ ಸಿದ್ಧಾಂತ್ ಚತುರ್ವೇದಿ ಮತ್ತು ತೃಪ್ತಿ ದಿಮ್ರಿ ಅವರ ಹೊಸ ಜೋಡಿಯನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಧಡಕ್ 2 ಸಿನಿಮಾಗೆ ನ್ಯೂ ನ್ಯಾಷನಲ್ ಕ್ರಶ್ ತ್ರಿಪ್ತಿ ದಿಮ್ರಿ ಆಯ್ಕೆ ಮಾಡಿದ ಕರಣ್, ಜಾನ್ವಿ ಕಪೂರ್​ಗೆ ಕೈ ಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಹೇಳ್ತಿದ್ದಾರೆ.

See also  ರಾಜ್ಯ ಬಿಜೆಪಿಯಲ್ಲಿ ವಿಶ್ವಾಸದ ತಂಗಾಳಿ
Share This Article