ನವದೆಹಲಿ: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟೀಮ್ ಇಂಡಿಯಾ ಆಟಗಾರ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ಡಿವೋರ್ಸ್ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸೆರ್ಬಿಯಾ ಮೂಲದ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಇಬ್ಬರ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು ಬೇರೆ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಕೇಳಿಬರುತ್ತಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ನಲ್ಲಿದ್ದಾರೆ.
ಅಂದಹಾಗೆ ವಿಚ್ಛೇದನ ವಿಚಾರವಾಗಿ ಹಾರ್ದಿಕ್ ಅಥವಾ ನತಾಶಾ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಆದರೂ ವಿಚ್ಛೇದನದ ವದಂತಿಗಳು ಮಾತ್ರ ನಿಂತಿಲ್ಲ. ಈ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದು ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ರೆಡ್ಡಿಟ್‌ನಲ್ಲಿ ಈ ಟ್ರೆಂಡಿಂಗ್ ಪೋಸ್ಟ್ ನೋಡಿದ ಜನರು ಗೊಂದಲಕ್ಕೊಳಗಾಗಿದ್ದಾರೆ. ಈ ಪೋಸ್ಟ್ ಮೂಲಕ ಮತ್ತೊಂದು ಅಂಶ ಬೆಳಕಿಗೆ ಬಂದಿದೆ.
ಹಾರ್ದಿಕ್-ನತಾಶಾ ವಿಚ್ಛೇದನದ ವಿಷಯ ಕೇವಲ ಪ್ರಚಾರದ ಸ್ಟಂಟ್ ಆಗಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಮತ್ತು ಬ್ಯಾಟ್ಸ್ಮನ್ ಆಗಿ ಹಾರ್ದಿಕ್ ಐಪಿಎಲ್ ನಲ್ಲಿ ಹೀನಾಯವಾಗಿ ವಿಫಲವಾಗಿರುವುದರಿಂದ ಎಲ್ಲರ ಗಮನ ಬೇರೆಡೆ ಸೆಳೆಯಲು ವಿಚ್ಛೇದನ ಪ್ರಕರಣವನ್ನು ತೇಲಿ ಬಿಡಲಾಗಿದೆ. ಅಭಿಮಾನಿಗಳ ಕೋಪ ತಣ್ಣಗಾಗಿಸಲು ಮತ್ತು ಅನುಕಂಪವನ್ನು ಗಿಟ್ಟಿಸಲು ಈ ರೀತಿ ಪ್ಲಾನ್ ಮಾಡಲಾಗಿದೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ. ಡಿವೋರ್ಸ್ ಬಗ್ಗೆ ಇಷ್ಟೆಲ್ಲ ಸುದ್ದಿಯಾಗುತ್ತಿದ್ದರೂ ಹಾರ್ದಿಕ್ ಮತ್ತು ನತಾಶಾ ಈವರೆಗೆ ವಿಚ್ಛೇದನದ ಬಗ್ಗೆ ಒಂದೇ ಒಂದು ಮಾತನಾಡಿಲ್ಲ. ಇದರರ್ಥ ಇಬ್ಬರ ನಡುವೆ ಏನು ಸಮಸ್ಯೆಯಾಗಿಲ್ಲ ಎಂದು ವೈರಲ್ ಪೋಸ್ಟ್‌ನಲ್ಲಿ ಉಲ್ಲೇಖವಾಗಿದೆ.
ಇನ್ನೂ ರೆಡ್ಡಿಟ್ ಬಳಕೆದಾರ ಮಾಡಿರುವ ಪೋಸ್ಟ್ ಪ್ರಕಾರ ಹಾರ್ದಿಕ್-ನತಾಶಾ ಮದುವೆಯ ಷರತ್ತುಗಳು ಸ್ಪಷ್ಟವಾಗಿವೆ. ಇಬ್ಬರ ಮದುವೆ ಸಂಪೂರ್ಣ ಮುಕ್ತವಾಗಿದ್ದು, ಇಬ್ಬರು ತಮಗೆ ಬಯಸಿದವರ ಜತೆ ಇರಬಹುದಾಗಿದೆ. ಈ ಡಿವೋರ್ಸ್ ವದಂತಿಯನ್ನು ಪರಸ್ಪರ ಒಪ್ಪಂದದ ಮೂಲಕವೇ ಹರಿಬಿಡಲಾಗಿದೆ. ಡಿವೋರ್ಸ್ ಆಗಿಲ್ಲ. ಆದರೆ, ಇದೆಲ್ಲ ಹಾರ್ದಿಕ್ ಪಿಆರ್ ತಂತ್ರಗಾರಿಕೆಯಾಗಿದ್ದು, ಅನುಕಂಪ ಗಿಟ್ಟಿಸಿಕೊಳ್ಳುವ ತಂತ್ರವಾಗಿದೆ. ಮದುವೆಗೂ ಮುನ್ನವೇ ಗರ್ಭಿಣಿಯಾಗಿ ತಮ್ಮ ಸಂಬಂಧವನ್ನು ಮುಂದುವರೆಸಲು ಬಯಸಿ 2020ರ ಹೊಸ ವರ್ಷದ ಸಮಯದಲ್ಲಿ ಇಬ್ಬರು ವಿವಾಹವಾದರು. ಹೀಗೆ ಅವರ ಮದುವೆಯ ಷರತ್ತುಗಳು ಸ್ಪಷ್ಟವಾಗಿದೆ. ಶೀಘ್ರದಲ್ಲೇ ಇಬ್ಬರು ಮಾಧ್ಯಮಗಳ ಮುಂದೆ ಬಂದು ಡಿವೋರ್ಸ್ ವದಂತಿ ಎಂದು ಸುಳ್ಳು ಎಂದು ಹೇಳಲಿದ್ದಾರೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖವಾಗಿದೆ.
What a blunder @mipaltan for removing @ImRo45 from captaincy.
Then this Cheap PR stunt ! Where obviously Natasa was Scrutinised and labelled what not!
If this proves to be right, then don’t know where we are heading in future #HardikPandya pic.twitter.com/HIZlJlH5IS— kshama samra (@kshama27) May 28, 2024
ವೈರಲ್ ಆಗಿರುವ ರೆಡ್ಡಿಟ್ ಪೋಸ್ಟ್ ಸಾಕಷ್ಟು ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೆ ಈ ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿ ಎಷ್ಟು ಸತ್ಯವಿದೆ ಎನ್ನುವುದನ್ನು ಖಚಿತಪಡಿಸಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಹಾರ್ದಿಕ್ ಹಾಗೂ ನತಾಶಾ ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದರ ಮೇಲೆ ಇಡೀ ಡಿವೋರ್ಸ್ ವದಂತಿ ನಿಂತಿದೆ.
ಅಂದಹಾಗೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರನಾಗಿರುವ ಹಾರ್ದಿಕ್ ಪಾಂಡ್ಯ ಈ ವರ್ಷ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಮೊದಲ ಪ್ರಯತ್ನದಲ್ಲೇ ಗುಜರಾತ್ ಟೈಟಾನ್ಸ್ ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟ ಹಾರ್ದಿಕ್, ಮುಂಬೈಗೆ ಹಿಂತಿರುಗಿ ನಾಯಕನ ಸ್ಥಾನವನ್ನು ಅಲಂಕರಿಸಿದರು. ಆದರೆ, ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ತಂಡ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿತು. ಇದರಿಂದ ಹಾರ್ದಿಕ್ ತೀವ್ರ ಟೀಕೆಗೆ ಗುರಿಯಾದರು.
ಐಪಿಎಲ್ ಸುದ್ದಿ ತಣ್ಣಗಾಗುತ್ತಿದ್ದಂತೆಯೇ ಹಾರ್ದಿಕ್ ಅವರ ವೈವಾಹಿಕ ಜೀವನದ ಸುದ್ದಿ ಹೆಚ್ಚು ಚರ್ಚೆಯಾಗುತ್ತಿದೆ. ನತಾಶಾ ಮತ್ತು ಹಾರ್ದಿಕ್ ನಡುವೆ ವೈಮನಸ್ಸು ಮೂಡಿದ್ದು, ಬೇರೆಯಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ನತಾಶಾ ಕೂಡ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾರ್ದಿಕ್ ಹೆಸರನ್ನು ತೆಗೆದುಹಾಕಿದರು. ಅಲ್ಲದೆ, ನಿಗೂಢ ಪೋಸ್ಟ್ಗಳನ್ನು ಹಾಕುವ ಮೂಲಕ ಇಬ್ಬರ ನಡುವೆ ಏನೂ ಸರಿಯಿಲ್ಲ ಎಂಬ ಸಂದೇಶವನ್ನು ರವಾನಿಸುತ್ತಿದ್ದಾರೆ. ಇದರ ನಡುವೆ ನತಶಾ, ಬೇರೋಬ್ಬನ ಜತೆ ಸುತ್ತಾಡುತ್ತಿರುವ ಫೋಟೋಗಳು ವೈರಲ್ ಆಗಿವೆ. ಈ ಎಲ್ಲ ಕಾರಣಗಳಿಂದ ಹಾರ್ದಿಕ್ ಮತ್ತು ನತಾಶಾ ಡಿವೋರ್ಸ್ ಪಡೆಯುವುದು ಖಚಿತ ಎಂದು ಹೇಳಲಾಗುತ್ತಿದೆ. ಆದರೆ, ನತಾಶಾ ಆಗಲಿ ಅಥವಾ ಹಾರ್ದಿಕ್ ಆಗಲಿ ಇದುವರೆಗೂ ಅಧಿಕೃತವಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಇನ್ನು ನತಾಶಾ ಅವರು ಸೆರ್ಬಿಯಾ ದೇಶದಕ್ಕೆ ಸೇರಿರುವುದರಿಂದ ಆ ದೇಶದ ನಿಯಮದ ಪ್ರಕಾರ ಹಾರ್ದಿಕ್ ಪಾಂಡ್ಯ ಶೇ.70ರಷ್ಟು ಆಸ್ತಿಯನ್ನು ಪತ್ನಿಗೆ ನೀಡಬೇಕಿದೆ ಎಂಬ ಚರ್ಚೆಯು ನಡೆಯುತ್ತಿದೆ.
ಯಾರು ಈ ನತಾಶಾ?
ಮಾರ್ಚ್ 4, 1992ರಂದು ಜನಿಸಿದ ನತಾಶಾ, ಸೆರ್ಬಿಯಾ ಮೂಲದ ಓರ್ವ ಮಾಡೆಲ್. 2012ಕ್ಕೆ ಭಾರತಕ್ಕೆ ಕಾಲಿಟ್ಟ ಈ ಬ್ಯೂಟಿ ಇಂಡಿಯನ್ ರ್ಯಾಪರ್ ಬಾದ್ಷಾ ಅವರ ಮ್ಯೂಸಿಕ್ ವಿಡಿಯೋ ಆಲ್ಬಂನಲ್ಲಿ ಹೆಜ್ಜೆ ಹಾಕುವ ಮೂಲಕ ಪ್ರಖ್ಯಾತಿ ಗಳಿಸಿದರು. ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರುವ ನತಾಶಾ ಕೆಲ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ನತಾಶಾ ಅವರು ಮೊದಲಿಗೆ ಪ್ರಕಾಶ್ ಝಾ ಅವರ ಸತ್ಯಾಗ್ರಹ ಸಿನಿಮಾದಲ್ಲಿ ‘ಅಯೋ ಜಿ’ ಎಂಬ ಹಾಡೊಂದರಲ್ಲಿ ಕಾಣಿಸಿಕೊಂಡರು. ಇದಾದ ಬೆನ್ನಲ್ಲೇ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ಬಾಸ್ 8ನೇ ಆವೃತ್ತಿಯಲ್ಲಿ ಕಾಣಿಸಿಕೊಂಡರು. ಬಳಿಕ ಫರ್ಕಿ ರಿಟರ್ನ್ಸ್(ಮೆಹಬೂಬ), ಡ್ಯಾಡಿ(ಜಿಂದಗಿ ಮೆರಿ ಡ್ಯಾನ್ಸ್ ಡ್ಯಾನ್ಸ್) ಮತ್ತು ಫ್ರೈ ಡೇ (ಜಿಮೈ ಛೋಯಿ) ಚಿತ್ರಗಳ ಹಾಡಿನಲ್ಲಿ ನತಾಶಾ ಕಾಣಿಸಿಕೊಂಡರು. ಇತ್ತೀಚೆಗೆ ಇಮ್ರಾನ್ ಹಶ್ಮಿ ಅವರ ದಿ ಬಾಡಿ ಚಿತ್ರದ ಜಲಕ್ ದಿಕಲಾಜಾ ಹೊಸ ಅವತರಣಿಕೆಯ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2019ರ ನಾಚ್ ಬೆಲಿಯೇ-9 ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು. ಇದರಲ್ಲಿ ಮೂರನೇ ರನ್ನರ್ ಅಪ್ ಆಗಿದ್ದರು.
ಕನ್ನಡದಲ್ಲಿಯೂ ನಶೆ ಏರಿಸಿದ ನತಾಶಾ
ನಟ ದುನಿಯಾ ವಿಜಯ್ ಅಭಿನಯದ ಯೋಗರಾಜ್ ಭಟ್ ನಿರ್ದೇಶನದ ದನ ಕಾಯೋನು ಚಿತ್ರದಲ್ಲಿಯು ನತಾಶಾ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್)
ಇದೊಂದೆ ಬೇಸರದ ಸಂಗತಿ… ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಭಾರತೀಯರನ್ನು ಕೆಣಕಿದ ಅಫ್ರಿದಿ!
ಇನ್ಮುಂದೆ ರೀಲ್ಸ್ ಮಾಡಬೇಡ ಎಂದು ಗಂಡ ಬೈದಿದ್ದಕ್ಕೆ ಮನೆಯನ್ನೇ ಬಿಟ್ಟು ಹೋದ ಪತ್ನಿ!