blank

ಇನ್ಮುಂದೆ ರೀಲ್ಸ್ ಮಾಡಬೇಡ ಎಂದು ಗಂಡ ಬೈದಿದ್ದಕ್ಕೆ ಮನೆಯನ್ನೇ ಬಿಟ್ಟು ಹೋದ ಪತ್ನಿ!

Bihar Wife

ಪಟನಾ: ಇದು ಸಾಮಾಜಿಕ ಜಾಲತಾಣಗಳ ಯುಗ. ಒಂದು ಹೊತ್ತು ಊಟವಿಲ್ಲದಿದ್ದರೂ ಪರವಾಗಿಲ್ಲ ಆದರೆ, ಸಾಮಾಜಿಕ ಜಾಲತಾಣದಲ್ಲಿ ಒಂದು ಸುತ್ತು ಹಾಕಿ ಬರಲೇಬೇಕು. ಕೈಯಲ್ಲಿ ಮೊಬೈಲ್ ಇದ್ದಾಗ ವಾಸ್ತವ ಜಗತ್ತನ್ನೇ ಮರೆತು, ಭ್ರಮಾ ಲೋಕದಲ್ಲಿ ಮುಳುಗಿರುತ್ತಾರೆ. ಎಲ್ಲ ಯುವ ಜನಾಂಗ ಮೊಬೈಲ್​ ಮೋಡಿಯಲ್ಲಿ ಬಿದ್ದಿದ್ದಾರೆ. ಒಮ್ಮೆ ಫೋನಿನಲ್ಲಿ ಮಗ್ನರಾದರೆ ಸಾಕು ತಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದೇ ತಿಳಿಯುವುದಿಲ್ಲ.

ಇದಿಷ್ಟು ಒಂದು ಭಾಗವಾದರೆ, ಮತ್ತೊಂದೆಡೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಲು ರೀಲ್ಟ್​, ಶಾರ್ಟ್ಸ್​ ಎಂಬ ವಿಡಿಯೋಗಳನ್ನು ಮಾಡುತ್ತಾರೆ. ರೀಲ್ಸ್​ ಉನ್ಮಾದದಲ್ಲಿ ರಾತ್ರೋರಾತ್ರಿ ಸ್ಟಾರ್ ಆಗಲು ಅಪಾಯವನ್ನು ತಮ್ಮ ಬಳಿಗೆ ಎಳೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಕುಟುಂಬದ ಜವಾಬ್ದಾರಿಯನ್ನೇ ಮರೆತು ಮೊಬೈಲ್​ನಲ್ಲಿ ಮುಳುಗಿರುತ್ತಾರೆ. ಈ ವರ್ತನೆಯು ಕೆಲವೊಮ್ಮೆ ದಾಂಪತ್ಯದಲ್ಲಿ ಬಿರುಕು ಸಹ ಉಂಟು ಮಾಡಿಸುತ್ತದೆ. ಇದೀಗ ಅದೇ ರೀತಿಯ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರ ಮೂಲದ ಜಿತೇಂದ್ರ ಮತ್ತು ತಮನ್ನಾ ಪರ್ವೀನ್ ಎಂಬ ದಂಪತಿ ಪ್ರೇಮ ವಿವಾಹವಾಗಿದ್ದರು. 2017ರಲ್ಲಿ ಪರೀಕ್ಷೆಗೆ ಕೋಚಿಂಗ್ ತೆಗೆದುಕೊಳ್ಳುವಾಗ ಭೇಟಿಯಾದರು. ಆ ಪರಿಚಯ ಅವರ ನಡುವೆ ಪ್ರೀತಿ ಅರಳಲು ಕಾರಣವಾಯಿತು. ಕೊನೆಗೆ ಪ್ರೇಮ ಸಂಬಂಧ ಮದುವೆಗೆ ತಿರುಗಿತ್ತು. ಮದುವೆಯ ನಂತರ ತಮನ್ನಾ ತನ್ನ ಹೆಸರನ್ನು ಸೀಮಾ ಎಂದು ಬದಲಾಯಿಸಿಕೊಂಡರು.

ದಂಪತಿಗೆ ಓರ್ವ ಮಗಳಿದ್ದಾಳೆ. ಹಲವು ವರ್ಷಗಳವರೆಗೆ ದಂಪತಿ ಜೀವನ ಚೆನ್ನಾಗಿತ್ತು. ಆದರೆ, ಜಿತೇಂದ್ರ ಕೆಲಸಕ್ಕಾಗಿ ಬೆಂಗಳೂರಿಗೆ ಆಗಮಿಸಿದರು. ಇದಾದ ಬಳಿಕ ತಮನ್ನಾ ಸಾಮಾಜಿಕ ಜಾಲತಾಣಕ್ಕೆ ಅಡಿಕ್ಟ್ ಆಗಿ ರೀಲ್ ಮಾಡಲು ಪ್ರಾರಂಭಿಸಿದರು. ಶೀಘ್ರದಲ್ಲೇ, ಅವರ ಫಾಲೋವರ್ಸ್​ ಸಂಖ್ಯೆಯು ಹೆಚ್ಚಾಗಲು ಪ್ರಾರಂಭವಾಯಿತು. ಇದು ಜಿತೇಂದ್ರ ಅವರನ್ನು ಕೆರಳಿಸಿತು.

ರೀಲ್ಸ್​ನಲ್ಲಿ ಮುಳುಗಿರುವ ತಮನ್ನಾ ಪತಿ ಮತ್ತು ಮಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿತು. ಸದಾ ಆನ್​ಲೈನ್​ನಲ್ಲಿ ಮುಳುಗಿರುತ್ತಿದ್ದ ಸೀಮಾಳ ವರ್ತನೆ ಗಂಡನಿಗೆ ಇಷ್ಟವಾಗದೇ ಆತ ಆಕ್ಷೇಪ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವಂತೆ ಎಚ್ಚರಿಕೆ ಸಹ ನೀಡಿದರು. ಈ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಕೊನೆಗೆ ಹೇಳದೆ, ಕೇಳದೆ ಮಗಳನ್ನು ಎತ್ತಿಕೊಂಡು ತಮನ್ನಾ ಮನೆ ಬಿಟ್ಟು ಹೋಗಿದ್ದಾಳೆ. ಇದೀಗ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ಇದೊಂದೆ ಬೇಸರದ ಸಂಗತಿ… ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನವೇ ಭಾರತೀಯರನ್ನು ಕೆಣಕಿದ ಅಫ್ರಿದಿ!

ಕಿರಾತಕ ಚಿತ್ರದಲ್ಲಿ ಯಶ್​ ತಂಗಿ ಪಾತ್ರದಲ್ಲಿ ನಟಿಸಿದ್ದ ಅರ್ಪಿತಾ ಈ ಹೇಗಿದ್ದಾರೆ ಗೊತ್ತಾ? ಎಷ್ಟು ಬದಲಾಗಿದ್ದಾರೆ ನೋಡಿ…

Share This Article

7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದ್ರೆ ದೇಹ, ಮನಸ್ಸಿನ ಮೇಲೆ ಪರಿಣಾಮ!  ಸಂಶೋಧನೆಯಿಂದ ಬಹಿರಂಗ.. Sleeping  

Sleeping : ಆರೋಗ್ಯವಾಗಿರಲು ನಿದ್ರೆ ಬಹಳ ಮುಖ್ಯ. ನಿದ್ರೆಯ ಕೊರತೆಯು ದೇಹದಲ್ಲಿ ಅನೇಕ ರೋಗಗಳನ್ನು ಉಂಟುಮಾಡುತ್ತದೆ.…

Beauty Tips: ಲಿಪ್‌ಸ್ಟಿಕ್ ಹೆಚ್ಚು ಬಳಸುತ್ತೀರಾ? ಹುಷಾರಾಗಿರಿ.. ಇಲ್ಲಿದೆ ನೋಡಿ ಬೆಚ್ಚಿ ಬೀಳಿಸೋ ವರದಿ

Beauty Tips : ಹುಡುಗಿಯರು ಬಳಸುವ ಸೌಂದರ್ಯವರ್ಧಕಗಳಲ್ಲಿ ಲಿಪ್‌ಸ್ಟಿಕ್ ಕೂಡ ಒಂದು. ತುಟಿಗಳು ಸುಂದರವಾಗಿ ಮತ್ತು…

ಬಿಸಿ ಮಾಡದೆ ಹಾಲನ್ನು ಹಸಿಯಾಗಿ ಕುಡಿಯಲೇಬಾರದು! Raw Milkನಿಂದಾಗುವ ಸಮಸ್ಯೆ ಎದುರಿಸೋಕೆ ರೆಡಿಯಾಗಿ!

Raw Milk : ಗ್ರಾಮೀಣ ಪ್ರದೇಶದ ಜನರು ಹಸು ಅಥವಾ ಎಮ್ಮೆ ಹಾಲನ್ನು ಸೇವಿಸುತ್ತಾರೆ. ಆದರೆ…